ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಪ್ರಧಾನಿಗೆ ಸರಿಸಾಟಿ ಯಾರಿದ್ದಾರೆ;ನಿರ್ಮಲಾ ಸೀತಾರಾಮನ್ ಪ್ರಶ್ನೆ

|
Google Oneindia Kannada News

ಉಡುಪಿ, ಮಾರ್ಚ್ 26: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರಿಭಿ ಹಠಾವೋ ಕಾಂಗ್ರೆಸ್ ನ ಕಾರ್ಯಕ್ರಮ. ಇಂದಿರಾ ಗಾಂಧಿ 1971 ರಲ್ಲಿ ಅಭಿಯಾನ ಆರಂಭಿಸಿದರು. ಆದರೆ ಗರಿಭಿ ಹಠಾವೋ ಭಾರತದಲ್ಲಿ ಇರಲು ಯಾರು ಕಾರಣ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿ ಮಾರ್ಕೆಟಿಂಗ್ ಮಾಡಲ್ಲ. ನಾವು ಪ್ರಚಾರಕ್ಕೆ ತುಂಬಾ ಕೆಲಸ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ಆರೋಪ ಮಾಡಲಿ. ಟಿ ಷರ್ಟ್, ರಿಸ್ಟ್ ಬ್ಯಾಂಡ್ ಗಳು ಆಪ್ ಗಳ ಮೂಲಕ ಮಾರಾಟವಾಗುತ್ತದೆ. ಇದರಲ್ಲಿ ತಪ್ಪೇನಿದೆ? ಇಂತದ್ದು ಇನ್ನೂ ಸಾಕಷ್ಟು ಮಾಡುತ್ತೇವೆ ಎಂದು ಹೇಳಿದರು.

7 ಮಂದಿ ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ:ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ7 ಮಂದಿ ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ:ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ನಾವು ಐದು ವರ್ಷ ಭ್ರಷ್ಟಚಾರ ರಹಿತ ಕೆಲಸ ಮಾಡಿದ್ದೇವೆ. ಮೋದಿ ವಿರುದ್ಧ ಮಹಾಘಟ್ ಬಂದನ್ ಸ್ಥಾಪನೆಯಾಗಿದೆ. ಎನ್ ಡಿಎ ಜೊತೆ ಘಟಬಂಧನ ಹೋಲಿಕೆ ಮಾಡಬೇಡಿ ಎಂದು ಹೇಳಿದ ನಿರ್ಮಲಾ ನಮ್ಮ ಪ್ರಧಾನಿಗೆ ಸರಿಸಾಟಿ ಯಾರಿದ್ದಾರೆ? ಎಂದು ಪ್ರಶ್ನಿಸಿದರು.

ಪ್ರಧಾನಿ ಅವರನ್ನು ಚೋರ್ ಚೋರ್ ಎಂದು ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ? ಬೇಲ್ ಮೇಲೆ ಹೊರಗಿರುವ ರಾಹುಲ್ ಗಾಂಧಿಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದೆ ಓದಿ...

 ಮೊದಲು ಅಮೇಥಿ ಹೇಗಿತ್ತು, ಈಗ ಹೇಗಿದೆ?

ಮೊದಲು ಅಮೇಥಿ ಹೇಗಿತ್ತು, ಈಗ ಹೇಗಿದೆ?

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವಕಾಶ ದೊರಕಿದರೆ ಮಾಧ್ಯಮದವರು ಕೂಡ ಅಮೇಥಿಗೆ ಒಮ್ಮೆ ಭೇಟಿ ನೀಡಿ ಎಂದು ಹೇಳಿದ ಅವರು, ಮೊದಲು ಅಮೇಥಿ ಹೇಗಿತ್ತು, ಈಗ ಹೇಗಿದೆ ಕಾಣಬಹುದು. ಅದಕ್ಕೆ ರಾಹುಲ್ ಅಮೇಥಿಯಿಂದ ಹಿಂದಕ್ಕೆ ಹೆಜ್ಜೆಯಿಡಲೇಬೇಕು ಎಂದು ನಿರ್ಮಲಾ ತಿಳಿಸಿದರು.

 ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ

ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ

ಆಳ ಸಮುದ್ರದಲ್ಲಿ ಮಲ್ಪೆಯ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ನಿರ್ಮಲಾ ಅವರು, ಮೀನುಗಾರರ ಜೊತೆ ಸಭೆ ಮಾಡಿದ್ದೇನೆ. ಇದು ನನ್ನ ಮೀನುಗಾರರ ಮೊದಲ ಸಭೆಯಲ್ಲ. ಆ ಬಗ್ಗೆ ಸಾಕಷ್ಟು ಚರ್ಚೆ, ಸಭೆ, ಮಾತುಕತೆಯಾಗದೆ. ಮೀನುಗಾರರ ನಾಪತ್ತೆ ವಿಚಾರದಲ್ಲಿ ನೌಕಾಪಡೆ, ಏರ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಏರ್ ಶೋ ಸಂದರ್ಭದಲ್ಲೂ ಮೀನುಗಾರರ ನಿಯೋಗ ಭೇಟಿಯಾಗಿದೆ. ನಾವು ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ ಎಂದು ಅವರು ತಿಳಿಸಿದರು.

 ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ

 ನಾಪತ್ತೆಯಾದ ಕುಟುಂಬ ಭೇಟಿಯಾಗಬಹುದು

ನಾಪತ್ತೆಯಾದ ಕುಟುಂಬ ಭೇಟಿಯಾಗಬಹುದು

ಚುನಾವಣಾ ಸಂದರ್ಭದಲ್ಲಿ ನಾನು ನೀತಿಸಂಹಿತೆ ಉಲ್ಲಂಘಿಸಲ್ಲ ಎಂದ ನಿರ್ಮಲಾ ಸೀತಾರಾಮನ್ ಅವರು, ನಾಪತ್ತೆಯಾದ ಕುಟುಂಬ ನನ್ನನ್ನು ಭೇಟಿಯಾಗಬಹುದು. ನಾವು ಮೀನುಗಾರರ ನಾಪತ್ತೆ ಪ್ರಕರಣ ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​

 ನೌಕದಳದ ಮೇಲೆ ದೂರುವುದು ಸರಿಯಲ್ಲ

ನೌಕದಳದ ಮೇಲೆ ದೂರುವುದು ಸರಿಯಲ್ಲ

ಮೀನುಗಾರರ ನಾಪತ್ತೆ ಪ್ರಕರಣದ ಹಿಂದೆ ಭಾರತೀಯ ನೌಕಾಪಡೆ ಇದೆ ಎಂದು ಆರೋಪಿಸಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆ ತಿರುಗೇಟು ನೀಡಿದ ನಿರ್ಮಲಾ ಸೀತಾರಮನ್ , ಯಾವುದೇ ಸಾಕ್ಷಿಗಳಿಲ್ಲದೆ ನೌಕದಳದ ಮೇಲೆ ದೂರುವುದು ಸರಿಯಲ್ಲ. ಮಧ್ವರಾಜ್ ಜವಬ್ದಾರಿಯುತರಾಗಿ ವರ್ತಿಸಬೇಕು. ಚುನಾವಣಾ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಚಾರಗಳ ಕುರಿತು ಹೇಳಿಕೆಗಳನ್ನು ನೀಡುವ ಮೊದಲು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

 ನಿರ್ಮಲಾ ಸೀತಾರಾಮನ್ ಸಹಾಯ ಕೋರಿದ ಉಡುಪಿ ಮೀನುಗಾರರು ನಿರ್ಮಲಾ ಸೀತಾರಾಮನ್ ಸಹಾಯ ಕೋರಿದ ಉಡುಪಿ ಮೀನುಗಾರರು

English summary
Addressing press meet in Udupi Defence minister Nirmala Sitharaman slammed Congress over Garibhi Hattavu campaign. She asked who is responsible for Garibhi in India?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X