ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾದಿಂದ ಆಗಮಿಸಿದ ಮಂಗಳೂರಿನ ವ್ಯಕ್ತಿಗೆ ಅಂಟಿದೆಯಾ ನಿಫಾ ವೈರಸ್?

|
Google Oneindia Kannada News

ದಕ್ಷಿಣ ಕನ್ನಡ, ಸೆಪ್ಟೆಂಬರ್ 14: ನಿಫಾ ವೈರಸ್ ಸೋಂಕಿನಿಂದ ಕೇರಳದ ಕೋಯಿಕ್ಕಾಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ಮೃತಪಟ್ಟು ಒಂದೇ ವಾರದಲ್ಲೇ ಅದೇ ರೋಗದ ಲಕ್ಷಣಗಳು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿರುವುದು ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯಾಧಿಕಾರಿ ಕೆ ವಿ ತ್ರಿಲೋಕ ಚಂದ್ರ ನೀಡಿರುವ ಮಾಹಿತಿ ಪ್ರಕಾರ, ಕಾರವಾರ ಮೂಲದ ಈ ವ್ಯಕ್ತಿ ಗೋವಾದಲ್ಲಿ ಆರ್ ಟಿ- ಪಿಸಿಆರ್ ಕಿಟ್ ತಯಾರಿಸುವ ಖಾಸಗಿ ಪ್ರಯೋಗಾಲಯ ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖನಾಗಿದ್ದ ಈತ, ತನಗೆ ನಿಫಾ ವೈರಸ್ ತಗುಲಿರಬಹುದೆಂದು ಶಂಕೆ ಹಿನ್ನೆಲೆ ಮಂಗಳೂರಿನಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. "ನಾವು ಜಾಗರೂಕರಾಗಿರಬೇಕು ಆದರೆ ಭಯಪಡುವ ಅಗತ್ಯವಿಲ್ಲ. ವ್ಯಕ್ತಿಯು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ವರದಿ ಮಾಡಿಲ್ಲ, "ಎಂದು ಅವರು ಹೇಳಿದರು.

ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ

ಕಾರವಾರ ಮೂಲದ ಈ ವ್ಯಕ್ತಿಯ ಗಂಟಲು ದ್ರವವನ್ನು ಪಡೆದಿರುವ ಮಂಗಳೂರು ಆಸ್ಪತ್ರೆ ಸಿಬ್ಬಂದಿಯು ಅದನ್ನು ಪರೀಕ್ಷಿಸುವುದಕ್ಕೆ ಪುಣೆಯ ರಾಷ್ಟ್ರೀಯ ವೈರಾಣು ಪತ್ತೆ ಕೇಂದ್ರಕ್ಕೆ ರವಾನಿಸಿದ್ದಾರೆ. ನಾಳೆಯೊಳಗೆ ಈ ವ್ಯಕ್ತಿಯ ಮಾದರಿಯ ವರದಿ ಬರುವ ಸಾಧ್ಯತೆ ಇದ್ದು, ತದನಂತರವೇ ಈತನಿಗೆ ನಿಫಾ ತಗುಲಿದೆಯೋ, ಇಲ್ಲವೋ ಎನ್ನುವುದು ಖಚಿತವಾಗಲಿದೆ.

ನಿಫಾ ಸೋಂಕು ಶಂಕಿತ ವ್ಯಕ್ತಿಗೆ ಕೇರಳದ ನಂಟು ಇಲ್ಲ

ನಿಫಾ ಸೋಂಕು ಶಂಕಿತ ವ್ಯಕ್ತಿಗೆ ಕೇರಳದ ನಂಟು ಇಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಜೊತೆಗೆ ನಂಟು ಹೊಂದಿರುವುದನ್ನು ಅಧಿಕಾರಿಯೊಬ್ಬರು ಪತ್ತೆ ಮಾಡಿದ್ದಾರೆ. ನಿಫಾ ವೈರಸ್ ಸೋಂಕಿನ ಪರೀಕ್ಷೆಗೊಳಗಾದ ವ್ಯಕ್ತಿಯು ಇತ್ತೀಚಿಗೆ ಕೇರಳಕ್ಕೆ ಪ್ರಯಾಣಿಸಿದ ಇತಿಹಾಸವಿಲ್ಲ, ಅಥವಾ ಕೇರಳದಿಂದ ಆಗಮಿಸಿದ ಯಾವುದೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಗೊತ್ತಾಗಿದೆ. ಆದರೆ ಈ ವ್ಯಕ್ತಿಯು ಗೋವಾಗೆ ಭೇಟಿ ನೀಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಗಡಿ ಜಿಲ್ಲೆಗಳ ಮೇಲೆ ಕಣ್ಗಾವಲು ಇರಿಸಿದ ಆರೋಗ್ಯ ಇಲಾಖೆ

ಗಡಿ ಜಿಲ್ಲೆಗಳ ಮೇಲೆ ಕಣ್ಗಾವಲು ಇರಿಸಿದ ಆರೋಗ್ಯ ಇಲಾಖೆ

ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬಹುಪಾಲು ಗಡಿ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯು ಹೆಚ್ಚಿನ ಕಣ್ಗಾವಲು ಇರಿಸಿತ್ತು. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಲಕ್ಷ್ಯ ವಹಿಸಲಾಗಿತ್ತು.

ನಿಫಾ ವೈರಸ್ ರೋಗದ ಲಕ್ಷಣಗಳನ್ನು ಇಲ್ಲಿ ಗುರುತಿಸಿ

ನಿಫಾ ವೈರಸ್ ರೋಗದ ಲಕ್ಷಣಗಳನ್ನು ಇಲ್ಲಿ ಗುರುತಿಸಿ

ಕೇರಳದಿಂದ ಆಗಮಿಸುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನಿಫಾ ವೈರಸ್ ರೋಗದ ಲಕ್ಷಣಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

* ಜ್ವರ

* ಬದಲಾದ ಮಾನಸಿಕ ಸ್ಥಿತಿ

* ತೀವ್ರ ದೌರ್ಬಲ್ಯ

* ತಲೆನೋವು

* ಉಸಿರಾಟದ ತೊಂದರೆ

* ಕೆಮ್ಮು

* ವಾಂತಿ

* ಸ್ನಾಯು ನೋವು

* ಸ್ನಾಯು ಸೆಳೆತ

* ಅತಿಸಾರ

ಹೇಗೆ ಹರಡುತ್ತೆ ನಿಫಾ ವೈರಸ್ ಸೋಂಕು?

ಹೇಗೆ ಹರಡುತ್ತೆ ನಿಫಾ ವೈರಸ್ ಸೋಂಕು?

ಸಾಮಾನ್ಯವಾಗಿ ಈ ನಿಫಾ ರೋಗಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಇದು ಹರಡುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಫಾ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಳ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ.

Recommended Video

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada

English summary
Nipah Virus Case suspected in Mangaluru, sample sent to Pune for testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X