ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಕಾಂಗ್ರೆಸ್ ಮಾಜಿ ಶಾಸಕನ ಮನೆ ಮೇಲೆ ಎನ್ಐಎ ದಾಳಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 04; ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಸಾಹಿತಿ ದಿವಂಗತ ಇದಿನಬ್ಬ ಪುತ್ರನ ಮನೆ ಮೇಲೆ ಬೆಂಗಳೂರಿನಿಂದ ಬಂದ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು ನಗರ ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಇದಿನಬ್ಬ ಪುತ್ರನ ಬಿ. ಎಂ. ಭಾಷಾ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬುಧವಾರ ಮುಂಜಾನೆ 5 ಗಂಟೆ ವೇಳೆಗೆ 24 ಮಂದಿ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 ದಕ್ಷಿಣ ಭಾರತದಲ್ಲಿ ಐಎಸ್‌ಐಎಸ್ ಅಡಗುತಾಣ; ಎನ್‌ಐಎ ಚಾರ್ಜ್‌ಶೀಟ್‌ ದಕ್ಷಿಣ ಭಾರತದಲ್ಲಿ ಐಎಸ್‌ಐಎಸ್ ಅಡಗುತಾಣ; ಎನ್‌ಐಎ ಚಾರ್ಜ್‌ಶೀಟ್‌

ಮಾಜಿ ಶಾಸಕ, ಸಾಹಿತಿ ದಿ. ಇದಿನಬ್ಬ ಪುತ್ರನ ಮನೆ ಮೇಲೆ ಎನ್‌ಐಎ ದಾಳಿ ನಡೆದ ವಿಚಾರ ಹಲವು ಚರ್ಚೆಗೆ ಕಾರಣವಾಗಿದೆ. ಮಾಜಿ ಶಾಸಕ ದಿ. ಇದಿನಬ್ಬ ಮರಿ ಮೊಮ್ಮಗಳು ಐಎಸ್ಐಎಸ್ ಸೇರಿರುವ ಹಿನ್ನೆಲೆಯಲ್ಲಿ ಎನ್ಐಎ ದಾಳಿ ನಡೆಸಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.

ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಮನ್ಸುಖ್ ಹಿರೇನ್ ಸಹ ಸಂಚುಕೋರ: ಎನ್‌ಐಎ ಹೇಳಿಕೆಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಮನ್ಸುಖ್ ಹಿರೇನ್ ಸಹ ಸಂಚುಕೋರ: ಎನ್‌ಐಎ ಹೇಳಿಕೆ

ಮೂರು ವರ್ಷಗಳ ಹಿಂದೆ ನಿಗೂಢವಾಗಿ ಇದಿನಬ್ಬ ಮರಿ ಮೊಮ್ಮಗಳು ಅಜ್ಮಲ್ ಎಂಬಾಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಸದ್ಯ ಎನ್ಐಎ ದಾಳಿ ನಡೆಸಿರುವ ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳು ಅಜ್ಮಲ್ ಕುಟುಂಬವಾಗಿದ್ದು, ಐಎಸ್‌ಐಎಸ್ ಬಗ್ಗೆ ಮನೆಯವರ ವಿಚಾರಣೆಯನ್ನು ಎನ್ಐಎ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ.

ಮನ್ಸುಖ್ ಹಿರೇನ್ ಕೊಲೆ ಸಂಚಿನ ಸಭೆಯಲ್ಲಿ ವಾಜೆ ಮತ್ತು ಶಿಂದೆ ಭಾಗಿ: ಎನ್‌ಐಎ ಮನ್ಸುಖ್ ಹಿರೇನ್ ಕೊಲೆ ಸಂಚಿನ ಸಭೆಯಲ್ಲಿ ವಾಜೆ ಮತ್ತು ಶಿಂದೆ ಭಾಗಿ: ಎನ್‌ಐಎ

ಐಎಸ್‌ಐಎಸ್ ಸೇರಿದ್ದ 17 ಮಂದಿ

ಐಎಸ್‌ಐಎಸ್ ಸೇರಿದ್ದ 17 ಮಂದಿ

ಎರಡು ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಸಿರಿಯಾದ ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದು, ಈ 17 ಜನರ ಪೈಕಿ ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾರ ಮೊಮ್ಮಗಳು ಅಜ್ಮಲ್ ಕುಟುಂಬವೂ ಇತ್ತು.

ಮಾಜಿ ಶಾಸಕ ದಿ. ಇದಿನಬ್ಬ ಮರಿಮೊಮ್ಮಗಳು ಅಜ್ಮಲ್‌ಳನ್ನು ಕೇರಳ ಅತೀ ಶ್ರೀಮಂತ ಕುಟುಂಬವೊಂದಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಅಜ್ಮಲ್ ಪತಿ ಎಂಬಿಎ ಪದವೀಧರ ಸಿಯಾಝ್. ಸಿಯಾಝ್ ಮನೆತನವೂ ಬಹಳ ಶ್ರೀಮಂತವಾಗಿದ್ದು, ಎಲ್ಲರೂ ವಿದ್ಯಾವಂತರೇ ಆಗಿದ್ದಾರೆ. ವರ್ಷಗಳ ಹಿಂದೆ ಅಜ್ಮಲ್ ಗಂಡ ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗುವುದಾಗಿ ಹೇಳಿ ಹೋದವರು ಇಂದಿನವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ.

ಇಡೀ ಕುಟುಂಬವೇ ನಾಪತ್ತೆ

ಇಡೀ ಕುಟುಂಬವೇ ನಾಪತ್ತೆ

ಅಜ್ಮಲ್ ಕುಟುಂಬ ಶ್ರೀಲಂಕಾದಿಂದ ಮಸ್ಕತ್ ಹಾಗೂ ಕತಾರ್ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಎಸ್‌ಐಎಸ್ ಸೇರಿದ್ದಾರೆಂಬ ಮಾಹಿತಿ ಇತ್ತು. ವೈದ್ಯರಾಗಿರುವ ಸಿಯಾಝ್‍ನ ಸಹೋದರ ಕೂಡ ಹೆಂಡತಿ ಮತ್ತು ಮಗುವಿನೊಂದಿಗೆ ತೆರಳಿದ್ದರು. ಹೀಗೆ ಇಡೀ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿತ್ತು.

ಇಡೀ ಕುಟುಂಬ ನಾಪತ್ತೆಯಾಗಿರುವುದು ಕೇರಳದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರವೇ ಮುತುವರ್ಜಿ ವಹಿಸಿ ಹೆಚ್ಚಿನ ತನಿಖೆಯನ್ನು ಆರಂಭಿಸಿತು. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ಜಂಟಿ ತನಿಖೆಯನ್ನು ನಡೆಸುತ್ತಿದ್ದವು. ಆಗ ಕೇರಳದ 17ಮಂದಿ ಐಎಸ್ಐಎಸ್ ಉಗ್ರ ಸಂಘಟನೆ ಸೇರಿರುವ ಮಹತ್ವ ವಿಚಾರ ತನಿಖಾ ತಂಡಕ್ಕೆ ಗೊತ್ತಾಗಿದೆ. ಈ 17ಮಂದಿ ಕೇರಳ ಜಿಲ್ಲೆಯ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಯವರಾಗಿದ್ದು, ಎಲ್ಲರೂ ವಿದ್ಯಾವಂತರು.

ಉನ್ನತ ಶಿಕ್ಷಣದ ನೆಪದಲ್ಲಿ ನಾಪತ್ತೆ

ಉನ್ನತ ಶಿಕ್ಷಣದ ನೆಪದಲ್ಲಿ ನಾಪತ್ತೆ

ಹೊರ ದೇಶಕ್ಕೆ ಹೆಚ್ಚಿನ ವಿಧ್ಯಾಭ್ಯಾಸದ ನೆಪದಲ್ಲಿ ಹೋಗಿ ಅಲ್ಲಿ ಐಎಸ್‌ಐಎಸ್ ಪ್ರಭಾವಕ್ಕೆ ಒಳಗಾಗಿ ಐಎಸ್‌ಐಎಸ್ ಸೇರಿದ್ದರು. ಮನೆಯವರ ಜೊತೆ ಸಂಪರ್ಕ ಕಳೆದುಕೊಂಡು ಪೂರ್ಣ ಪ್ರಮಾಣದ ತರಬೇತಿ ಪಡೆದು ಉಗ್ರ ಸಂಘಟನೆಯಲ್ಲಿ ತೊಡಗಿದ್ದರು ಎಂಬ ವಿಚಾರ ರಾಷ್ಟ್ರೀಯ ತನಿಖಾ ತಂಡಕ್ಕೆ ಗೊತ್ತಾಗಿತ್ತು. ಈ 17ಮಂದಿಯ ಪೈಕಿ ಇದಿನಬ್ಬ ಮರಿ ಮೊಮ್ಮಗಳು ಅಜ್ಮಲ್ ಕೂಡಾ ಇದ್ದು, ಅವರ ಕುಟುಂಬ ಕೂಡಾ ಐಎಸ್‌ಐಎಸ್ ಸೇರಿರುವ ಸಾಧ್ಯತೆ ಗಳು ಇರುವ ಬಗ್ಗೆ ತನಿಖಾ ಸಂಸ್ಥೆ ಹೇಳಿಕೊಂಡಿತ್ತು. ಈಗ ಅದೇ ತನಿಖೆಯ ಭಾಗವಾಗಿ ಅಜ್ಮಲ್ ಅಜ್ಜ ಇಸ್ಮಾಯಿಲ್ ಭಾಷಾ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಉಗ್ರರ ಸ್ಲೀಪರ್ ಸೆಲ್‌ಗಳ ಬಗ್ಗೆ ಎನ್‌ಐಎ ತನಿಖೆ

ಉಗ್ರರ ಸ್ಲೀಪರ್ ಸೆಲ್‌ಗಳ ಬಗ್ಗೆ ಎನ್‌ಐಎ ತನಿಖೆ

ಎನ್‌ಐಎ ಹಲವು ವರ್ಷಗಳ ಬಳಿಕ ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಉಗ್ರರ ಸ್ಲೀಪರ್ ಸೆಲ್ ಆತಂಕ ಮತ್ತೆ ಕಡಲ ನಗರಿಯನ್ನು ಕಾಡುತ್ತಿದೆ. ಹಲವು ವರ್ಷಗಳ ಹಿಂದೆ ಉಳ್ಳಾಲದ ಹಲವು ಭಾಗಗಳಲ್ಲಿ ತನಿಖೆ ನಡೆಸಿದ್ದ ಎನ್ಐಎ ತಂಡ 10 ಹೆಚ್ಚು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿತ್ತು. ಮನೆ ಮೇಲೆ ದಾಳಿ ಮಾಡಿ ಉಗ್ರ ಸಂಘಟನೆಗೆ ಸೇರಿದ ಪುಸ್ತಕ, ಪೆನ್ ಡ್ರೈವ್, ಮನ ಪರಿವರ್ತನೆ ಬೇಕಾದ ಸಂದೇಶಗಳು ಮತ್ತು ಮೂಲಭೂತವಾದ ತತ್ವವನ್ನು ಪ್ರತಿಪಾದಿಸುವ ಅಂಶಗಳನ್ನು ಪತ್ತೆ ಹಚ್ಚಿತ್ತು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಮಂಗಳೂರು ಉಗ್ರರ ಸ್ಲೀಪರ್ ಸೆಲ್ ಆಗ್ತಿದ್ಯಾ? ಎಂಬುದರ ಬಗ್ಗೆ ಆತಂಕ ಉಂಟಾಗಿತ್ತು.

ಸದ್ಯ ಇದಿನಬ್ಬ ಮಗನ ಮನೆ ಮೇಲೆ ಎನ್‌ಐಎ ದಾಳಿ ಮಾಡಿದ್ದು, ಮತ್ತೆ ಚರ್ಚೆಗಳು ಆರಂಭಗೊಂಡಿದೆ. ಸಾಹಿತಿಯೂ ಆಗಿದ್ದ ದಿ. ಇದಿನಬ್ಬ ಮೂರು ಬಾರಿ ಕಾಂಗ್ರೆಸ್‌ನಿಂದ ಉಳ್ಳಾಲ ಶಾಸಕರಾಗಿ ಆಯ್ಕೆಯಾಗಿದ್ದರು. ಇದಿನಬ್ಬ ಮರಿಮೊಮ್ಮಗಳು ಐಸಿಸ್ ಸೇರಿರುವ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಯಾಗಿತ್ತು. ಆದರೆ ನಿಖರ ಕಾರಣ ಏನು ಎಂಬುವುದು ತನಿಖೆಯ ಬಳಿಕ ತಿಳಿದುಬರಬೇಕಿದೆ.

English summary
The National Investigation Agency (NIA) conducted raid in the residence of the son of former Ullal MLA B. M. Idinabba in the early hours of Wednesday. The officials from Bengaluru conducted the raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X