ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಲೇಡಿಗೋಷನ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟು; ಮಗು ಬದಲಾಯಿಸಿದ ಬಗ್ಗೆ ಹೆತ್ತವರಿಂದ ಪೊಲೀಸ್ ದೂರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 16: ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಪೋಷಕರು ಬೇರೆ ಆಸ್ಪತ್ರೆಗೆ ಸೇರಿಸಲು ನಿರ್ಧಾರ ಮಾಡಿದ್ದರು. ಈ ಸಂದರ್ಭದಲ್ಲಿ ತಾಯಿಗೆ ಆಸ್ಪತ್ರೆ ಸಿಬ್ಬಂದಿ ಹೆಣ್ಣು ಮಗುವಿನ ಬದಲು ಗಂಡುಮಗುವನ್ನು ನೀಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಹಿಳೆ ಸೆಪ್ಟೆಂಬರ್ 28ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮನೆಗೆ ಭಾಗ್ಯಲಕ್ಷ್ಮಿ ಬರುವ ಸಂಭ್ರಮ ಮನೆಯವರಲಿತ್ತು. ಆದರೆ ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಮಗುವನ್ನು ಎನ್ಐಸಿನಲ್ಲಿ ಇರಿಸಬೇಕೆಂದು ವೈದ್ಯರು ತಿಳಿಸಿದ್ದರು.

ಸತತ 18 ದಿನಗಳ ಕಾಲ ಎನ್ಐಸಿನಲ್ಲಿ ಮಗು ಕೂಡಾ ಇತ್ತು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಗಾಬರಿಗೊಂಡ ಪೋಷಕರು, ಮಗುವನ್ನು ಬೇರೆ ಆಸ್ಪತ್ರೆಗೆ ಸೇರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮಗುವನ್ನು ಬೇರೆ ಆಸ್ಪತ್ರೆ ಗೆ ರವಾನಿಸಿದಾಗ, ತಾಯಿಗೆ ಆಸ್ಪತ್ರೆ ಸಿಬ್ಬಂದಿ ಹೆಣ್ಣು ಮಗುವಿನ ಬದಲು ಗಂಡುಮಗುವನ್ನು ನೀಡಿದ್ದಾರೆ. ಹೀಗಾಗಿ ಆಸ್ಪತ್ರೆ ವಿರುದ್ಧ ಮಗುವಿನ ಪೋಷಕರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Mangaluru: Newborn Girl Swapped With Boy At Govt Lady Goschen Hospital, Father Files Complaint

ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆ ಬಹಳಷ್ಟು ಪ್ರಸಿದ್ಧಿ ಪಡೆದ ಆಸ್ಪತ್ರೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಜನ ಸಹ ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಇದೀಗ ಈ ಆಸ್ಪತ್ರೆಯಲ್ಲಿ ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ಕೇಳಿಬಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಮ್ರೀನಾ ಸೆಪ್ಟೆಂಬರ್ 28ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸಹ ಹೆಣ್ಣು ಮಗುವೆಂದು ಹೇಳಿದ್ದರು. ಆದರೆ ಶಿಶುವಿಗೆ ಆರೋಗ್ಯ ಸಮಸ್ಯೆ ಇದ್ದುದರಿಂದ ಎನ್‌ಐಸಿಯುನಲ್ಲಿ 18 ದಿನಗಳ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಗು ಗುಣಮುಖವಾಗದ ಹಿನ್ನಲೆಯಲ್ಲಿ, ಗಾಬರಿಗೊಂಡ ಮಗುವಿನ ಪೋಷಕರು ಮಗುವನ್ನು ಲೇಡಿಗೋಷನ್ ಆಸ್ಪತ್ರೆಯಿಂದ ಬ್ರಹ್ಮಾವರದ ಆಸ್ಪತ್ರೆಗೆ ರವಾನಿಸುವ ನಿರ್ಧಾರ ಮಾಡಿದ್ದಾರೆ.

ಗುರುವಾರ ಮಗುವನ್ನು ಲೇಡಿಗೋಷನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಉಡುಪಿಯ ಬ್ರಹ್ಮಾವರದ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲೇ ತೆಗೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡುವ ವೇಳೆ ಹೆಣ್ಣು ಮಗುವಿನ ಬದಲಿಗೆ ಗಂಡು ಮಗು ನೀಡಿರುವುದು ಬೆಳಕಿಗೆ ಬಂದಿದೆ.

Mangaluru: Newborn Girl Swapped With Boy At Govt Lady Goschen Hospital, Father Files Complaint

ಈ ಬಗ್ಗೆ ಮಾಧ್ಯಮಗಳಿಗೆ‌ ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ ಮುಸ್ತಾಫಾ, "ಸೆ.27ರಂದು ಬ್ರಹ್ಮಾವರದ ಆಸ್ಪತ್ರೆಗೆ ಪತ್ನಿ ಅಮ್ರೀನಾಳನ್ನು ಹೆರಿಗಾಗಿ ದಾಖಲು ಮಾಡಿದ್ದೆವು. ಆದರೆ ಆಸ್ಪತ್ರೆ ಸಿಬ್ಬಂದಿ ಮಂಗಳೂರಿಗೆ ತೆಗೆದುಕೊಂಡು ಹೋಗಲು ಹೇಳಿದ ಕಾರಣ, ಸೆ.28ರಂದು ಲೇಡಿಗೋಷನ್ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದೆವು."

"ಏಳು ತಿಂಗಳಿನಲ್ಲೇ ಹೆರಿಗೆಯಾದ ಕಾರಣ, ಮಗುವಿನ ಆರೋಗ್ಯ ಮತ್ತು ತೂಕದಲ್ಲಿ ವ್ಯತ್ಯಾಸವಿದ್ದ ಕಾರಣ ಮಗುವನ್ನು ಎನ್ಐಸಿಯಲ್ಲಿ ಇಡಲು ವೈದ್ಯರು ಸೂಚಿಸಿದ್ದರು. ಬ್ರಹ್ಮಾವರದ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಬದಲಾಗಿ ಗಂಡು ಮಗುವನ್ನು ನೀಡಿರುವುದು ಗೊತ್ತಾಗಿದೆ. ತಕ್ಷಣ ಗುರುವಾರ ಗಂಡು ಮಗುವನ್ನು ಕರೆದುಕೊಂಡು ಬಂದ ಮಗುವಿನ ತಂದೆ- ತಾಯಿ ಆ ಮಗುವನ್ನು ಆಸ್ಪತ್ರೆಗೆ ಕೊಟ್ಟು ನಮ್ಮ ಮಗು ಕೊಡಿ," ಅಂತಾ ಕೇಳಿದ್ದಾರೆ.

"ಮಾತ್ರವಲ್ಲದೇ ಮಂಗಳೂರು ಬಂದರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ನಮ್ಮ ಹೆಣ್ಣು ಮಗುವನ್ನು ಕೊಡದೆ ಆರೋಗ್ಯ ಸರಿ ಇಲ್ಲದ ಗಂಡು ಮಗು ಕೊಟ್ಟಿದ್ದಾರೆ. ಆಸ್ಪತ್ರೆ ಕೊಟ್ಟ ದಾಖಲೆಗಳಲ್ಲಿ ಹೆಣ್ಣು ಮಗು ಅಂತಾ ಇದೆ," ಅನ್ನುವುದು ಮಗುವಿನ ತಂದೆ ಮುಸ್ತಾಫಾ ಹೇಳಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಸ್ಪಷ್ಟನೆ ನೀಡಿದ್ದು, "ಮಗು ಅದಲು- ಬದಲು ಆರೋಪ ಸತ್ಯಕ್ಕೆ ದೂರವಾದ ವಿಷಯ. ಆಸ್ಪತ್ರೆ ಸಿಬ್ಬಂದಿ ಅಚಾತುರ್ಯದಿಂದ ದಾಖಲೆಗಳಲ್ಲಿ ಬರೆಯುವಾಗ ತಪ್ಪಾಗಿದೆ. ಅವಸರದಲ್ಲಿ ಗಂಡು ಮಗು ಅನ್ನುವುದರ ಬದಲು ಹೆಣ್ಣು ಮಗು ಅಂತ ಉಲ್ಲೇಖಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವರದ್ದೇ ಮಗು, ನಮ್ಮಲ್ಲಿ ಮಗು ಬದಲಾವಣೆ ಆಗಿಲ್ಲ. ಅಧಿಕ ರಕ್ತದೊತ್ತಡ ಇದ್ದಾಗ ಆ ತಾಯಿ ನಮ್ಮಲ್ಲಿ ದಾಖಲಾಗಿದ್ದಾರೆ. ಪರಿಸ್ಥಿತಿ ಗಂಭೀರ ಇದ್ದಾಗ ನಾವು ಶಸ್ತ್ರ ಚಿಕಿತ್ಸೆ ಮಾಡಿ ತಾಯಿ, ಮಗುವನ್ನು ಬದುಕಿಸಿದ್ದೇವೆ," ಎಂದರು.

"ಈ ವೇಳೆ ಮಗುವಿನ ತೂಕ ಮತ್ತು ಆರೋಗ್ಯದಲ್ಲಿ ಸಮಸ್ಯೆ ಇತ್ತು. ಹೀಗಾಗಿ ತುರ್ತು ಸಂದರ್ಭದಲ್ಲಿ ತಕ್ಷಣ ನಾವು ಮಗುವನ್ನು ಎನ್ಐಸಿಯುಗೆ ದಾಖಲಿಸಿದ್ದೇವೆ. ಮಕ್ಕಳ ತಜ್ಞರು ಮಗುವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ವೇಳೆ ತುರ್ತು ಸಂದರ್ಭದಲ್ಲಿ ದಾಖಲೆ ಬರೆಯುವಾಗ ತಪ್ಪಾಗಿದೆ. ಮಗುವನ್ನು ಹುಟ್ಟಿದ ಮೇಲೆ ಸಂಬಂಧಿಕರಿಗೆ ತೋರಿಸಲು ಕೂಡ ನಮಗೆ ಅವಕಾಶ ಸಿಗಲಿಲ್ಲ. ಆದರೆ ದಾಖಲೆ ಬರೆಯುವ ಸಮಯದಲ್ಲಿ ತಪ್ಪಿ ಹೆಣ್ಣು ಮಗು ಅಂತ ಉಲ್ಲೇಖಿಸಲಾಗಿದೆ. ಈ ಬಗ್ಗೆ ತಪ್ಪು ಮಾಡಿದ ಸಿಬ್ಬಂದಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೊಡುತ್ತೇವೆ."

"ದಾಖಲೆಯಲ್ಲಿ ತಪ್ಪು ಮಾಡಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆದರೆ ಅವರಿಗೆ ಹೆರಿಗೆಯಾಗಿದ್ದು ಗಂಡುಮಗು, ಅದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ. ನಮ್ಮ ಸಿಬ್ಬಂದಿಯಿಂದ ದಾಖಲೆ ಬರೆಯುವಾಗ ತಪ್ಪಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಮಾನವ ಸಹಜ ತಪ್ಪಿನಿಂದ ಈ ಒಂದು ಗೊಂದಲ ಆಗಿದೆ ಅಷ್ಟೇ. ಮಗು ಗಂಡೇ ಎನ್ನುವ ದಾಖಲೆಗಳನ್ನು ನಾವು ಅಗತ್ಯ ಬಿದ್ದರೆ ಹಾಜರುಪಡಿಸುತ್ತೇವೆ," ಎಂದು ಡಾ. ದುರ್ಗಾಪ್ರಸಾದ್ ಹೇಳಿದ್ದಾರೆ.

ಸದ್ಯ ಈ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆ. ಇನ್ನು ಆಸ್ಪತ್ರೆಯವರೇ ಹೇಳುವ ರೀತಿ ಸಿಬ್ಬಂದಿ ನಿರ್ಲಕ್ಷ್ಯ ಅನ್ನುವುದು ನಿಜವೇ ಆಗಿದ್ದರೆ, ಪೋಷಕರಿಗೆ ನ್ಯಾಯ ಒದಗಿಸಬೇಕಾಗಿದೆ.

English summary
Newborn Girl Swapped with Boy at Govt Lady Goschen Hospital in Mangaluru, Father Files Complaint against Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X