ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಂಕಣ ರೈಲ್ವೆ ಮಾಹಿತಿ ಪಡೆಯಲು ಹೊಸ ಸಹಾಯವಾಣಿ

|
Google Oneindia Kannada News

ಮಂಗಳೂರು, ಜ.27 : ಕೊಂಕಣ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಸಹಾಯವಾಣಿಯನ್ನು ಆರಂಭಿಸಿದೆ. ಹಿಂದೆ ಇದ್ದ ಸಹಾಯವಾಣಿ ಸಂಖ್ಯೆ ಸ್ಥಗಿತಗೊಂಡಿದ್ದು, ಜನವರಿ 26ರಿಂದಲೇ ನೂತನ ಸಂಖ್ಯೆ ಅಸ್ತಿತ್ವಕ್ಕೆ ಬಂದಿದೆ.

ಸೋಮವಾರದಿಂದ 18002331332 ನಂಬರ್‌ ಅಸ್ತಿತ್ವಕ್ಕೆ ಬಂದಿದ್ದು ಪ್ರಯಾಣಿಕರು ರೈಲಿನ ಬಗ್ಗೆ ಮಾಹಿತಿಯನ್ನು ಈ ನಂಬರ್‌ಗೆ ಕರೆ ಮಾಡುವ ಮೂಲಕ ಪಡೆದುಕೊಳ್ಳಬಹುದು. ಹಿಂದೆ ಇದ್ದ 18002661332 ನಂಬರ್‌ ಕಾರ್ಯಾಚರಣೆ ಸ್ಥಗಿತಗೊಂಡಿದೆ. [ವೈಷ್ಣೋದೇವಿ ದರ್ಶನಕ್ಕೆ ಹೋಗಲು ಬೆಂಗಳೂರಿನಿಂದ ರೈಲು]

Konkan Railway

ರೈಲಿನ ಮಾಹಿತಿಯನ್ನು ಪಡೆಯಲು ಮಾತ್ರ ಈ ನಂಬರ್‌ಗೆ ಕರೆ ಮಾಡಬಹುದಾಗಿದೆ. ಈ ನಂಬರ್‌ ಮಾತ್ರವಲ್ಲದೇ ಭಾರತ ಎಲ್ಲಿಂದ ಬೇಕಾದರೂ 139 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಹಣ ಮರುಪಾವತಿ, ಸೀಟುಗಳ ಸಂಖ್ಯೆ, ಸೀಟುಗಳ ಖಾತ್ರಿ ಮುಂತಾದ ಮಾಹಿತಿಗಳು ಈ ನಂಬರ್‌ನಲ್ಲಿ ದೊರೆಯುವುದಿಲ್ಲ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿದಿದೆ. [30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ರೈಲ್ವೆ ಇಲಾಖೆಯ ಬಗ್ಗೆ ದೂರುಗಳಿದ್ದರೆ 9004470700 ನಂಬರ್‌ಗೆ ಸಂದೇಶ ಕಳಿಸಬಹುದು ಅಥವ 18002665725 ಕರೆ ಮಾಡಿ ದೂರನ್ನು ದಾಖಲು ಮಾಡಬಹುದು. ಕೊಂಕಣ ರೈಲ್ವೆ ಬಗ್ಗೆ ಮಾಹಿತಿ ಪಡೆಯಲು www.konkanrailway.com ವೆಬ್‌ಸೈಟ್‌ಗೆ ಜನರು ಭೇಟಿ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Passengers can now dial toll-free number 18002331332 to know the running status of trains on the Konkan Railway route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X