ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವುಗಳ ಅಕ್ರಮ ಸಾಗಾಟ ತಡೆಯಲು ಮುಸ್ಲಿಮರಿಂದ ಹೊಸ ಸಂಘಟನೆ

|
Google Oneindia Kannada News

ಮಂಗಳೂರು, ಜೂನ್ 18: ಕರಾವಳಿಯಲ್ಲಿ ಗೋವುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಮುಸ್ಲಿಂ ಸಂಘಟನೆಗಳು ಮುಂದಾಗಿವೆ. ಇದನ್ನು ತಡೆಯಲು ಮುಸ್ಲಿಂ ಸಂಘಟನೆಗಳು ಸೇರಿ ಹೊಸ ಸಂಘಟನೆಯನ್ನು ಹುಟ್ಟುಹಾಕಲು ತೀರ್ಮಾನಿಸಿವೆ.

ಕರಾವಳಿಯಲ್ಲಿ ಅಕ್ರಮ ಗೋಸಾಗಾಟದ ವಿರುದ್ಧ ಈವರೆಗೆ ಹಿಂದೂ ಸಂಘಟನೆಗಳು ರಸ್ತೆಗಿಳಿದಿದ್ದವು. ಆದರೆ ಈಗ ಮುಸ್ಲಿಂ ಸಂಘಟನೆಗಳೂ ಮುಂದಾಗಿವೆ. 'ಅಕ್ರಮ ಗೋ ಸಾಗಾಟ ಸಂರಕ್ಷಣಾ ಸಮಿತಿ' ಹೆಸರಿನಲ್ಲಿ ಶೀಘ್ರದಲ್ಲಿಯೇ ಸಂಘಟನೆಯೊಂದು ಅಸ್ತಿತ್ವಕ್ಕೆ ಬರಲಿದ್ದು, ರಾಜ್ಯ ಮುಸ್ಲಿಂ ಲೀಗ್ ನ ಯುವವಿಭಾಗ ಇದರ ನೇತೃತ್ವ ವಹಿಸಲಿದೆ.

ಕಾರಿನಲ್ಲಿ ದನಗಳ ಅಕ್ರಮ ಸಾಗಾಟ ಪ್ರಕರಣ; ಇಬ್ಬರ ಬಂಧನಕಾರಿನಲ್ಲಿ ದನಗಳ ಅಕ್ರಮ ಸಾಗಾಟ ಪ್ರಕರಣ; ಇಬ್ಬರ ಬಂಧನ

ಅಕ್ರಮ ಗೋವುಗಳ ಸಾಗಾಟದ ವಿಚಾರದಲ್ಲಿ ಪದೇ ಪದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಸಮಿತಿ ಕಾರ್ಯಾಚರಿಸಲಿದೆ. ಬಳಿಕ ಅವಶ್ಯಕತೆಯನ್ನು ಅವಲಂಬಿಸಿ ರಾಜ್ಯದ ಬೇರೆ ಜಿಲ್ಲೆಗಳಿಗೆ ವಿಸ್ತರಣೆಯಾಗಲಿದೆ.

New Muslim organisation to Prevent illegal cattle transportation

ಸಮಿತಿಯೇ ಗೋವುಗಳನ್ನು ಅಕ್ರಮ ಸಾಗಾಟ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ ಈ ಕುರಿತು ಮನವರಿಕೆ ಮಾಡುವ ಪ್ರಯತ್ನ ಮಾಡುತ್ತದೆ. ಇದಕ್ಕೆ ಒಪ್ಪದಿದ್ದ ಪಕ್ಷದಲ್ಲಿ, ಪೊಲೀಸರಿಗೆ ಅವರನ್ನು ಹಸ್ತಾಂತರಿಸಲಾಗುವುದು ಎಂದು ಯೂತ್ ಲೀಗ್ ಮುಖಂಡ ಸಿದ್ದಿಕ್ ತಲಪಾಡಿ ತಿಳಿಸಿದ್ದಾರೆ. ಅಲ್ಲದೆ ಜಿಲ್ಲೆಯ ಎಲ್ಲ ಮಸೀದಿ, ಮದರಸಾಗಳಲ್ಲಿ ಗೋವುಗಳ ಅಕ್ರಮ ಸಾಗಾಟ ವಿರುದ್ಧ ತಿಳಿವಳಿಕೆ ಮೂಡಿಸಲು ಧಾರ್ಮಿಕ ಗುರುಗಳನ್ನು ಸಮಿತಿ ಕೋರಲಿದೆ.

English summary
Muslim organisations are planning to set up a new league in mangaluru to prevent illegal cattle transportation. With this league, illegal cattle transportation committe will be in operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X