ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಸ್ಟ್ ಗಾರ್ಡ್ ಗೆ ಬಂತು ಹೈ ಸ್ಪೀಡ್ ಇಂಟರ್ ಸೆಪ್ಟರ್ ನೌಕೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 24 : ನಗರದ ತಣ್ಣೀರುಬಾವಿಯ ಭಾರತಿ ಡಿಫೆನ್ಸ್ ಅಂಡ್ ಇನ್ಫ್ರಾಸ್ಟಕ್ಚರ್ ಲಿಮಿಟೆಡ್ ಸಂಸ್ಥೆ ನಿರ್ಮಿತ ಹೈಸ್ಪೀಡ್ ಇಂಟರ್ ಸೆಪ್ಟರ್ ನೌಕೆಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಗೆ ಹಸ್ತಾಂತರಿಸಲಾಗಿದೆ.

ತಣ್ಣೀರುಬಾವಿಯ ಬಿಐಎಎಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡಿಎಲ್ ನ ಸಿಒಒ ನರೇಂದ್ರ ಕುಮಾರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ನೌಕೆಯನ್ನು ನೀರಿಗೆ ಇಳಿಸುವ ಮೂಲಕ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

 New interceptor boat launched in Mangaluru

ಈ ನೌಕೆ ಸುಮಾರು 54 ಟನ್ ತೂಕವಿದೆ. ಇದನ್ನು ನಿರ್ಮಾಣ ಮಾಡಲು ಸುಮಾರು 18 ಕೋಟಿ ರೂ. ವೆಚ್ಚವಾಗಿದೆ. ಈ ನೌಕೆ ಸಮುದ್ರದ ಯಾವುದೇ ಪರಿಸ್ಥಿತಿಗೆ ತಕ್ಕಂತೆ ಸಂಚರಿಸಬಲ್ಲರು. ಕಡಿಮೆ ನೀರಿನಲ್ಲೂ ಇದು ಸರಾಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಈ ನೌಕೆಯನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಕೋಸ್ಟ್ ಗಾರ್ಡ್ ಅವರು ತಮಗೆ ಬೇಕಾದ ಆಂತರಿಕ ವಿನ್ಯಾಸದ ಕೆಲಸಗಳನ್ನು ಇನ್ನಷ್ಟೇ ನಡೆಸಬೇಕಾಗಿದೆ. ಮುಂದಿನ ತಿಂಗಳು ಈ ನೌಕೆ ಕೆಲಸ ಮಾಡಲು ಆರಂಭಿಸಲಿದೆ.

ಭಾರತಿ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮೂಲಕ ಈಗಾಗಲೇ 5 ಸಣ್ಣ ನೌಕೆಗಳನ್ನು ಅನಾವರಣಗೊಳಿಸಲಾಗಿದೆ. ಇನ್ನೊಂದು ನೌಕೆ ಮುಂದಿನ ಡಿಸೆಂಬರ್ ಗೆ ಸಿದ್ಧವಾಗಿದೆ. ಒಟ್ಟಾರೆ ಇದುವರೆಗೆ ಸುಮಾರು 20 ನೌಕೆಗಳನ್ನು ನಿರ್ಮಿಸಲಾಗಿದೆ.

English summary
The new interceptor boat (V-409) was launched in a ceremony held at Coast Guard yard here on September 22, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X