ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಿಂದ ಮಂಗಳೂರಿಗೆ ಆಗಮಿಸುವವರಿಗೆ ಹೊಸ ಮಾರ್ಗಸೂಚಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 2: ವಿದೇಶದಿಂದ ಮಂಗಳೂರಿಗೆ ಮರಳುವ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ನೀಡಿದೆ.

ಸೂಚನೆಗಳ ಪ್ರಕಾರ, ಮಂಗಳೂರಿಗೆ ಮರಳುವ ಭಾರತೀಯ ನಾಗರಿಕರು ಅಧಿಕೃತ ವೆಬ್ ಸೈಟ್ ನಲ್ಲಿ "ಏರ್ ಸುವಿದಾ ಸ್ವಯಂ-ವರದಿ ಫಾರ್ಮ್' ಅನ್ನು ಭರ್ತಿ ಮಾಡಬೇಕಾಗುತ್ತದೆ.(https: //www.newdelhiairport.in/airsuvidha/APHO-registration) ಅಲ್ಲದೆ, ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಏರುವ ಮುನ್ನ ವಿಮಾನ ನಿಲ್ದಾಣ ವರದಿ ನೀಡುವ ಮೊದಲೇ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಎಲ್ಲಾ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್, ಕ್ವಾಂಟೈನ್ ವಾಚ್ ಮತ್ತು ಆಪ್ತಮಿತ್ರಾ ಎಂಬ ಮೂರು ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ.

New Guidelines For Who Coming From Abroad To Mangaluru

ಪ್ರಯಾಣಿಕರು ಅನುಸರಿಸಬೇಕಾದ ಹೆಚ್ಚುವರಿ ಸೂಚನೆಗಳು

1. ಸಕ್ರಿಯವಾಗಿರುವ ಭಾರತೀಯ ಸಿಮ್ ಕಾರ್ಡ್ ಹೊಂದಿರಬೇಕು.

2. ಪ್ರಯಾಣಿಕರಿಗೆ ಸ್ಥಳೀಯ ಸಿಮ್ ಇಲ್ಲದಿದ್ದರೆ, ಅವರು ತಮ್ಮ ಕುಟುಂಬ ಸದಸ್ಯರು ಅಥವಾ ಸಂಬಂಧಿಕರನ್ನು ಸ್ಥಳಿಯ ಸಿಮ್ ಪಡೆಯಲು ಕೇಳಿಕೊಳ್ಳಬೇಕು. ಪ್ರಯಾಣಿಕರು ಮಂಗಳೂರಿಗೆ ಬರುವ ಮೊದಲು ಸಿಮ್ ಅನ್ನು ಈಗಾಗಲೇ ಸಕ್ರಿಯಗೊಳಿಸಬೇಕು.

3. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಹೊಸ ಸಿಮ್ ಕಾರ್ಡ್‌ಗಳನ್ನು ಸಹ ಖರೀದಿಸಬಹುದು.

English summary
The Ministry of Civil Aviation, the Ministry of Health and Family Welfare and the Government of Karnataka have issued new guidelines for passengers returning to Mangaluru from abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X