ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೊಸದಾಗಿ ಅಭಿವೃದ್ಧಿ ಸಮಿತಿ ನೇಮಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 30: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೊಸದಾಗಿ ಅಭಿವೃದ್ಧಿ ಸಮಿತಿಯನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದೆ ಒಂಬತ್ತು ಜನ ಸದಸ್ಯರ ವ್ಯವಸ್ಥಾಪನಾ ಸಮಿತಿ ಇದ್ದು, ಅದರ ಕಾರ್ಯಾವಧಿ ಪೂರ್ಣಗೊಂಡು ಒಂದು ವರ್ಷದ ನಂತರ ಇದೀಗ ಹೊಸದಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿಯನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಐದು ಮಂದಿ ಸದಸ್ಯರು ಒಳಗೊಂಡಿದ್ದಾರೆ.

ಕುಕ್ಕೆ ಸುಬ್ರಮಣ್ಯದಲ್ಲಿ ಅವ್ಯವಹಾರದ ಆರೋಪ; ದೂರಿನ ವಿವರಗಳು ಕುಕ್ಕೆ ಸುಬ್ರಮಣ್ಯದಲ್ಲಿ ಅವ್ಯವಹಾರದ ಆರೋಪ; ದೂರಿನ ವಿವರಗಳು

ಪಿ.ಜಿ.ಎಸ್ ಪ್ರಸಾದ್, ಕೃಷ್ಣ ಶೆಟ್ಟಿ, ಪ್ರಸನ್ನ, ಎಸ್. ಮೋಹನ್ ರಾಮ ಹಾಗೂ ವನಜಾ ಭಟ್ ಅವರು ದೇವಸ್ಥಾನ ಅಭಿವೃದ್ದಿ ಸಮಿತಿಯ ಸದಸ್ಯರಾಗಿದ್ದು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಮಿತಿಯ ಕಾರ್ಯದರ್ಶಿಯಾಗಿರಲಿದ್ದಾರೆ.

Mangaluru: New Development Committee Appointed For Kukke Subramanya Swamy Temple

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಹಿಂದೆ ಒಂಬತ್ತು ಮಂದಿ ಸದಸ್ಯರ ವ್ಯವಸ್ಥಾಪನಾ ಸಮಿತಿ ಕಾರ್ಯ ನಿರ್ವಹಿಸುತ್ತಿತ್ತು. ಅದರ ಕಾರ್ಯಾವಧಿ ವರ್ಷಗಳ ಹಿಂದೆಯೇ ಅಂತ್ಯವಾಗಿತ್ತು. ಆದರೆ ನಂತರ ವ್ಯವಸ್ಥಾಪನಾ ಸಮಿತಿಯನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ವ್ಯವಸ್ಥಾಪನಾ ಸಮಿತಿಯ ಬದಲಿಗೆ ಅಭಿವೃದ್ಧಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಿಗೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಆದೇಶದಲ್ಲಿ ಶಾಸಕರ ಹೆಸರಿಲ್ಲದ ಕಾರಣ ಸಮಿತಿಯಲ್ಲಿರುವ ಎಸ್.ಮೋಹನ್ ರಾಮ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಳವಾಗಿದೆ.

English summary
The state government has issued a new development committee Appoint for the famous Kukke Subramanya Swamy temple in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X