ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಧರ್ಮಕ್ಕಿಂತ ದೇಶ ದೊಡ್ಡದು,ದೇಶಕ್ಕಾಗಿ ಮತ ನೀಡಿ'

By Mahesh
|
Google Oneindia Kannada News

ಮಂಗಳೂರು, ಫೆ. 18: ಧರ್ಮಕ್ಕಿಂತ ದೇಶ ದೊಡ್ಡದು, ದೇಶಕ್ಕಾಗಿ ಮತ ಚಲಾಯಿಸಿ ಎನ್ನುತ್ತಾ ಇಲ್ಲಿನ. ನೆಹರೂ ಮೈದಾನದಲ್ಲಿ 'ವೋಟ್ ಫಾರ್ ಇಂಡಿಯಾ' ಎಂಬ ವಾಕ್ಯ ಪ್ರತಿಧ್ವನಿಸುವಂತೆ ಮಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕರಾವಳಿಯಲ್ಲಿ ಬಿಜೆಪಿ ಸುನಾಮಿ ಅಲೆ ಎಬ್ಬಿಸಿದರು..

"ನಾನು ನಿಮ್ಮ ಪ್ರೀತಿಯನ್ನು ಮರೆಯುವುದಿಲ್ಲ. ಬಡ್ಡಿ ಸಮೇತ ನಿಮ್ಮ ಪ್ರೀತಿಯನ್ನು ತೀರಿಸುತ್ತೇನೆ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಂಗಳವಾರ ದಾವಣಗೆರೆಯಲ್ಲಿ ಜನರಿಗೆ ಭರವಸೆ ನೀಡಿದರು. ನನಗೆ ಕಮಲ ನೀಡಿ ಕಾಂಗ್ರೆಸ್ ಮುಕ್ತ ಭಾರತವನ್ನು ಕಾಣಿರಿ ಎಂದು ಮೋದಿ ಜನರನ್ನು ಬೇಡಿದ್ದರು. ಅಲ್ಲಿಂದ ನೇರವಾಗಿ ಮಂಗಳೂರಿಗೆ ಮೋದಿ ಅವರು ಆಗಮಿಸಿ 'ಧರ್ಮಕ್ಕಿಂತ ದೇಶ ದೊಡ್ಡದು, ದೇಶಕ್ಕಾಗಿ ಮತ ನೀಡಿ' ಎಂದು ಕುಡ್ಲ ಜನತೆಯನ್ನು ಮೋಡಿ ಮಾಡಿದರು.

ದಾವಣಗೆರೆಯಲ್ಲಿ ನಿಗದಿತ ಸಮಯಕ್ಕಿಂತ ಒಂದು ಗಂಟೆ ಕಾರ್ಯಕ್ರಮ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಮಂಗಳೂರಿನ 'ಭಾರತ ಗೆಲ್ಲಿಸಿ' ಸಮಾವೇಶ ಕೂಡಾ ವಿಳಂಬವಾಯಿತು.. ನೆರೆದಿರುವ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಮೊದಲಿಗೆ ಭಾಷಣ ಮಾಡಿದರು. ನರೇಂದ್ರ ಮೋದಿ ಅವರು ಕರಾವಳಿ ಜನತೆ ಉದ್ದೇಶಿಸಿ 'ಭಾರತ ಗೆಲ್ಲಿಸಿ' ಸಮಾವೇಶದಲ್ಲಿ ಮಾಡಿದ ಭಾಷಣದ ಮುಖ್ಯಾಂಶಗಳು ಇಂತಿದೆ:[ದಾವಣಗೆರೆಯಲ್ಲಿ ಮೋದಿ ಭಾಷಣ ಮುಖ್ಯಾಂಶ]

ಅಂತಿಮ ಸಾರಾಂಶ: 17.37 ರ ಸುಮಾರಿಗೆ ಮೋದಿ ಅವರಿಂದ ಭಾಷಣ ಸಮಾಪ್ತಿ. ಧರ್ಮಕ್ಕಿಂತ ದೇಶ ದೊಡ್ಡದು,ದೇಶಕ್ಕಾಗಿ ಮತ ಚಲಾಯಿಸಿ.ನೆಹರೂ ಮೈದಾನದಲ್ಲಿ 'ವೋಟ್ ಫಾರ್ ಇಂಡಿಯಾ' ಎಂಬ ವಾಕ್ಯ ಪ್ರತಿಧ್ವನಿಸುವಂತೆ ಮಾಡಿದ ನರೇಂದ್ರ ಮೋದಿ.
* ಬಿಜೆಪಿ 5 ವರ್ಷದಲ್ಲಿ 6 ಕೋಟಿ 27 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದರೆ, ಕಾಂಗ್ರೆಸ್ ಕಳೆದ 10 ವರ್ಷಗಳಲ್ಲಿ ಕೇವಲ 27 ಲಕ್ಷ ಉದ್ಯೋಗ ಅವಕಾಶ ನೀಡಿದೆ.
* ಒಟ್ಟಾರೆ ಮೋದಿ ಅವರ ಭಾಷಣದಲ್ಲಿ ಕರಾವಳಿ ಜನರ ಕೌಶಲ್ಯ, ವಾಣಿಜ್ಯ, ವ್ಯಾಪಾರ, ವ್ಯವಹಾರಗಳ ಬಗ್ಗೆ ಮೆಚ್ಚುಗೆ, ರೈತಾಪಿ ಜನರ ದುಡಿಮೆ, ಪ್ರವಾಸೋದ್ಯಮದ ಮಹತ್ವ, ನಿರುದ್ಯೋಗ ನಿವಾರಣೆ, ಕೌಶಲ್ಯ ಅಭಿವೃದ್ಧಿ ಮುಂತಾದ ವಿಷಯಗಳು ಭಾಷಣದಲ್ಲಿ ಕೇಳಿ ಬಂತು.
* ಸಣ್ಣ ರಾಷ್ಟ್ರಗಳು ಆರ್ಥಿಕ ಪ್ರಗತಿ ಹೊಂದುವ ರೀತಿಯಲ್ಲಿ ಸಮಗ್ರವಾಗಿ ನಗರಗಳು, ಕರಾವಳಿಗಳ ಜೋಡಣೆಗೆ ಪ್ರತ್ಯೇಕ ಯೋಜನೆ ಅಗತ್ಯವಿದೆ ಎಂದು ಮೋದಿ ಹೇಳಿದರು.

ಸಮಯ 17.25: ಭಾರತಕ್ಕೆ ಪ್ರವಾಸಿಗರು ಅನೇಕರು ಬರುತ್ತಾರೆ. ಆದರೆ, ಇದರಿಂದ ನಮಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಏನು ಲಾಭ ಎಂದು ಯೋಚಿಸಬೇಕು. ಸಾಂಸ್ಕೃತಿಕವಾಗಿ ದೇಶದ ಬಗ್ಗೆ ಹೆಮ್ಮೆ ಮೂಡುವಂತೆ ಅವರನ್ನು ಸೆಳೆಯಬೇಕು.
* mediocore ಆಲೋಚನೆಯಿಂದ ದೋಷರಹಿತ ಉತ್ಪನ್ನಗಳನ್ನು ಉತ್ಪಾದಿಸಿ ಮಾರುವ ಪ್ರಯತ್ನಗಳನ್ನು ಮಾಡುವುದನ್ನೇ ಬಿಟ್ಟಿದ್ದೇವೆ.
* ವಿಶ್ವದ ಅತ್ಯಂತ ಯುವ ಮನಸ್ಸಿನ ದೇಶ ನಮ್ಮದು. ಆದರೆ, ಯುವಕರಿಗೆ ಕೌಶಲ್ಯ ಅಭಿವೃದ್ಧಿಗೆ ಇಲ್ಲಿ ಅವಕಾಶ ನೀಡುತ್ತಿಲ್ಲ.
* ಅವಕಾಶಗಳೇ ಇಲ್ಲದಿರುವಾಗ ದೈನಂದಿನ ರೊಟ್ಟಿ ಸಂಪಾದನೆ ಕಷ್ಟವಾಗುತ್ತದೆ. ಕೌಶಲ್ಯ ಅಭಿವೃದ್ಧಿ ನಮ್ಮ ಮಂತ್ರವಾಗಬೇಕಿದೆ.

ಸಮಯ 17.20: ಕರ್ನಾಟಕದಲ್ಲಿ ಐಟಿ ಕ್ರಾಂತಿಯಾಗಿ ಯುವ ಜನತೆ ಮೌಸ್ ಹಿಡಿದು ವಿಶ್ವವನ್ನೇ ಕುಣಿಸುತ್ತಿದ್ದಾರೆ. ಹಾವು ಹಿಡಿಯುವ ದೇಶ ಎನ್ನುವವರ ಬಾಯಿ ಮುಚ್ಚಿಸಿದ್ದಾರೆ.
* ಇಲ್ಲಿ ಎಲ್ಲವೂ ಇದೆ ಆದರೆ, ಸಂಶೋಧನಾ ಮತ್ತು ಅಭಿವೃದ್ಧಿ ನಿಂತ ನೀರಾಗುವಂತೆ ನೋಡಿಕೊಳ್ಳಲಾಗಿದೆ. Low end ಆಗೇ ಉಳಿದಿದ್ದಾರೆ.
* ಯುವಕರೇ Low end ನಿಂದ high end ಆಗಬೇಕಿದೆ. ನಾವು ಏಕೆ ಗೂಗಲ್ ನಂಥ ಸಂಸ್ಥೆ ಇಲ್ಲಿ ಹುಟ್ಟುಹಾಕಲು ಸಾಧ್ಯವಾಗುತ್ತಿಲ್ಲ.
* ಹೊರಗುತ್ತಿಗೆ, ಕಾಲ್ ಸೆಂಟರ್ ನಿಂದ ಹೊರ ಬರಬೇಕಿದೆ. ಇಲ್ಲದಿದ್ದರೆ ಮಾನವ ಸಂಪನ್ಮೂಲದ ನಷ್ಟ ಅನುಭವಿಸಬೇಕಾಗುತ್ತದೆ.

ಸಮಯ 17.15: ಕ್ರೀಡಾ ನಗರ, ಜ್ಞಾನ ನಗರ ಹೀಗೆ ನಗರೀಕರಣ ಮಾಡಲು ಮೂಲ ಸೌಕರ್ಯ ಕಲ್ಪಿಸುವುದು ಮುಖ್ಯ.
* ಸಂಪರ್ಕ ಸಾಧನೆ ಜತೆ ಆಪ್ಟಿಕಲ್ ಫೈಬರ್, ಅನಿಲ ಗ್ರಿಡ್, ವಿದ್ಯುತ್ ಗ್ರಿಡ್ ಹೀಗೆ ಅತ್ಯಾಧುನಿಕ ಮೂಲ ಸೌಕರ್ಯ ಒದಗಿಸಿ ಜನ ಜೀವನ ಸುಧಾರಣೆ ಮಾಡಬೇಕು.
* 'ನಿಮ್ಮ ಅಂಧಕಾರ ದೂರ ಮಾಡಲು ಸಾಧ್ಯವಾಗದವರು ನಿಮ್ಮ ಜೀವನದಲ್ಲಿ ಜ್ಯೋತಿಯನ್ನು ಹೇಗೆ ಬೆಳೆಗುತ್ತಾರೆ.'
* ನಮ್ಮಲ್ಲಿರುವ ವಿದ್ಯುತ್ ಹಂಚಿಕೆ ಮಾಡಲು ಕೇಂದ್ರಕ್ಕೆ ಮನಸ್ಸಿಲ್ಲ. ಜನರನ್ನು ಅಂಧಕಾರದಲ್ಲಿಡುವುದೇ ಅವರ ಗುರಿ.

ಸಮಯ 17.05: ಕೆನರಾ, ಕರ್ಣಾಟಕ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಎಲ್ಲವೂ ಕರಾವಳಿ ಕರ್ನಾಟಕದ ಕೊಡುಗೆ ನಾವು ಗುಜರಾತಿನಲ್ಲಿ ಖಾತೆ ಆರಂಭಿಸುತ್ತೇವೆ.
* ಕರಾವಳಿ ಭಾಗದ ಉದ್ಧಾರಕ್ಕಾಗಿ ಅಟಲ್ ವಾಜಪೇಯಿ ಅವರು ಸಾಗರ್ ಮಾಲ ಯೋಜನೆ ಆರಂಭಿಸಿದರು. ಇದರಿಂದ ದೇಶದ ಬಂದರುಗಳ ಅಭಿವೃದ್ಧಿ ಸಾಧ್ಯವಿತ್ತು. ಇದನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿ.
* ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೀನುಗಾರಿಕೆ ಅಭಿವೃದ್ಧಿ ಮಾಡಲು ಏಕೆ ಸಾಧ್ಯವಿಲ್ಲ. 'ಮಚ್ ವಾರೇ ಕೋ ಮೀನುಗಾರ ಬೋಲ್ ತೈ ಹೇ'
* ಮೀನುಗಾರರಿಗೆ ಉಪಗ್ರಹದ ಮೂಲಕ ಮೀನು ಹಿಡಿಯಲು ಗುಜರಾತಿನಲ್ಲಿ ವ್ಯವಸ್ಥೆ ಇದೆ. ಇದೇ ರೀತಿ ಎಲ್ಲೆಡೆ ಮೊಗವೀರರ ಸಬಲೀಕರಣಕ್ಕೆ ತಂತ್ರಜ್ಞಾನ ಬಳಸಬಹುದು.

ಸಮಯ 17.00: ಕಾಂಗ್ರೆಸ್ ಸರ್ಕಾರದಲ್ಲಿ ಪ್ರಶ್ನೆ ಮಾಡಿದರೆ ಜೈಲಿಗೆ ತಳ್ಳಲಾಗುತ್ತದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಮಹಿಳೆಯರು ಆತ್ಮ ರಕ್ಷಣೆ ಇಲ್ಲದೆ ಭಯ ಪಟ್ಟುಕೊಂಡಿದ್ದಾರೆ. ವೃದ್ಧರು ರೋಗಿಗಳು ಔಷಧಿ ಇಲ್ಲದೆ ಒದ್ದಾಡುತ್ತಿದ್ದಾರೆ.
*
ದೇಶದ ಆರ್ಥಿಕ ದುಃಸ್ಥಿತಿಗೆ ತಲುಪಿದ್ದು, ತಿಜೋರಿ ಖಾಲಿಯಾಗಿದೆ. ದಿವಾಳಿತನ ತಾಂಡವವಾಡುತ್ತಿದೆ.
* ಎಲ್ಲೆಡೆ ಭ್ರಷ್ಟಾಚಾರ ಗಾಳಿ ಬೀಸುತ್ತಿದೆ. ಸುಪ್ರೀಂಕೋರ್ಟ್ ಅನೇಕ ಬಾರಿ ಯುಪಿಎ ಸರ್ಕಾರಕ್ಕೆ ಛೀಮಾರಿ ಹಾಕಿದರೂ ನಾಚಿಕೆ ಮಾನ ಮರ್ಯಾದೆ ಇಲ್ಲ.
*
ದೇಶಕ್ಕೆ ಭಾರವಾಗಿ ಕಾಂಗ್ರೆಸ್ ಪಕ್ಷ ಉಳಿದು ಕೊಂಡಿದೆ. ಅದನ್ನು ಹೊರಕ್ಕೆ ಹಾಕಿ.

Narendra Modi Rally in Mangalore

ಸಮಯ 16.50: ಕರಾವಳಿಯಲ್ಲಿ ಅಡಿಕೆ ಬೆಲೆ ಕುಸಿತವಾದಾಗ ಗುಜರಾತಿನ ಕಡೆ ನೋಡಲಾಗುತ್ತಿತ್ತು. ಅಡಿಕೆ ಬೆಳೆಗಾರರಿಗೆ ಶಾಶ್ವತ ಪರಿಹಾರ ಸಿಗಬೇಕಿದೆ., ಗ್ರಾಮಗಳ ಶಕ್ತಿ ಹೆಚ್ಚಾದರೆ ಮಾತ್ರ ನಗರಗಳಲ್ಲಿ ಆರ್ಥಿಕ ಪ್ರಗತಿ ಸಾಧ್ಯ. ದೇಶ ಬೆಳೆಯಲು ಸಾಧ್ಯ.
* ಮೋದಿ ಭಾಷಣದಲ್ಲೂ ಬಂತು ಕರಿ ಮೆಣಸು. ನಮ್ಮ ರೈತರ ಸುಪಾರಿ(ಅಡಿಕೆ) ಸಂಸತ್ತು ತಲುಪಲು ಸಾಧ್ಯವಾಗಲಿಲ್ಲ. ಕರಿಮೆಣಸು ಸಂಸತ್ತಿನಲ್ಲಿ ಗದ್ದಲ ಮಾಡಿಬಿಟ್ಟಿತು.
* ಕೆಲವರಂತೂ ಕೆಮ್ಮಿ ಕೆಮ್ಮಿ(AAP) ಸುಸ್ತಾಗಿಬಿಟ್ಟರು. ಹಲವರಿಗೆ ಕಣ್ಣು ಕತ್ತಲಿಟ್ಟುಗೊಂಡು ಬಂತು. ಕಾಂಗ್ರೆಸ್ ನವರು ಪೆಪ್ಪರ್ ಸ್ಪ್ರೇ ಬಳಸುವುದನ್ನು ಹೇಳಿಕೊಟ್ಟರು.

ಸಮಯ 16.48: ಕರಾವಳಿ ಕರ್ನಾಟಕದ ಜನತೆಗೆ ನನ್ನ ನಮನ. ವಿಮಾನ ನಿಲ್ದಾಣದಿಂದ ವೇದಿಕೆ ತನಕ ಮಾನವ ಸರಪಳಿ ನೋಡಿ ನನ್ನ ಹೃದಯ ತುಂಬಿ ಬಂದಿದೆ.
* ಕರ್ನಾಟಕ ಕರಾವಳಿ ಜನರ ಆತ್ಮೀಯ ಸ್ವಾಗತ ನನಗೆ ಮೆಚ್ಚುಗೆ ತಂದಿದೆ.

ಸಮಯ 16.45: ಸರ್ದಾರ್ ವಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕಾಗಿ ಸಂಗ್ರಹಿತ ಲೋಹವನ್ನು ಮೋದಿ ಅವರಿಗೆ ಅರ್ಪಿಸಲಾಯಿತು.
* ಸಂಸದ ನಳೀನ್ ಕುಮಾರ್ ಪಟೇಲ್ ಅವರಿಂದ ಮೋದಿ ಅವರಿಗೆ ಬಾರುಕೋಲು, ಶಾಲು ನೀಡಿ ಸನ್ಮಾನ.
* ಸಿಟಿ ರವಿ, ನಳೀನ್ ಕುಮಾರ್ ಕಟೀಳ್, ಚಕ್ರವರ್ತಿ ಸೂಲಿಬೆಲೆ, ನಾಗರಾಜ ಶೆಟ್ಟಿ, ಕಲ್ಲಡ್ಕ ಪ್ರಭಾಕರ ಭಟ್ ಮುಂತಾದವರ ಉಪಸ್ಥಿತಿ

ಸಮಯ 16.40: ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು.
* ಸಂಸದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನರೇಂದ್ರ ಮೋದಿ ಜತೆ ಆಗಮನ

Narendra Modi Rally in Mangalore

ಕಾಂಗ್ರೆಸ್ ಮುಕ್ತ ಭಾರತವನ್ನು ಕಾಣಬೇಕಾದರೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ, ಕರ್ನಾಟಕದಲ್ಲಿ ಬಿಜೆಪಿ ತಪ್ಪುಗಳನ್ನು ಮಾಡಿದೆ ನಿಜ ನಮಗೆ ತಿದ್ದಿಕೊಳ್ಳಲು ಒಂದು ಅವಕಾಶ ನೀಡಿ. ರಾಜ್ಯ, ದೇಶದ ಅಭಿವೃದ್ಧಿ, ನೆಮ್ಮದಿಯ ಬದುಕು ಕಾಣಲು ಬಿಜೆಪಿಗೆ ಮತ ನೀಡಿ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ. ಸಮಾರಂಭದ ವೇದಿಕೆಯಲ್ಲಿ ಮಾಜಿ ಸಚಿವ ಸಿ.ಟಿ ರವಿ, ನಳಿನ್ ಕುಮಾರ್ ಕಟೀಳ್ ಮುಂತಾದ ನಾಯಕರು ಉಪಸ್ಥಿತರಿದ್ದಾರೆ.


English summary
BJP's prime ministerial candidate and Gujarat chief minister Narendra Modi address the 'Bharata Gellisi' public rally in Mangalore, Karnataka on Feb 18, Tuesday. In his speech Modi praised IT sector growth in Karnataka, Mangalore region has given many banks to country. Modi urged We must aim for high end tech
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X