ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಮನೆಗೆ 'ನಮೋ' ಎಂದು ಹೆಸರಿಟ್ಟ ಬಿಜೆಪಿ ಕಾರ್ಯಕರ್ತ

|
Google Oneindia Kannada News

ಮಂಗಳೂರು, ಏಪ್ರಿಲ್ 13: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿ ಹಾಗು ಬಿಜೆಪಿ ಕಾರ್ಯಕರ್ತ ತಮ್ಮ ಮನೆಗೆ 'ನಮೋ' ಎಂದೇ ಹೆಸರಿರಿಸಿದ್ದಾರೆ. ಅದಲ್ಲದೇ ಮೋದಿ ಬರುವ ಈ ದಿನವೇ ಗೃಹ ಪ್ರವೇಶ ಮಾಡಲು ನಿರ್ಧರಿಸಿದ್ದಾರೆ.

ನಗರದ ಯೆಯ್ಯಾಡಿ ನಿವಾಸಿ ಕಿಶೋರ್ ಕದ್ರಿಯಲ್ಲಿ ಟೈಲ್ಸ್ ಕಂಪನಿಯ ಉದ್ಯೋಗಿ . ಕಿಶೋರ್ ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಯೆಯ್ಯಾಡಿ ಯ ಬಡಾವಣೆಯಲ್ಲಿ ಹೊಸ ಮನೆಯನ್ನು ನಿರ್ಮಿಸಿದ್ದಾರೆ. ಕಿಶೋರ್ ಅವರು ಬಿಜೆಪಿ ಕಾರ್ಯಕರ್ತ ಹಾಗೂ ಮೋದಿಯ ಕಟ್ಟಾ ಅಭಿಮಾನಿ ಕೂಡ.

ಮಂಗಳೂರಿನಲ್ಲಿ ಮೋದಿ ಸ್ವಾಗತಕ್ಕೆ ಚೌಕಿದಾರ್ ವೇಷ ಧರಿಸಿದ ಬಿಜೆಪಿ ಮುಖಂಡರುಮಂಗಳೂರಿನಲ್ಲಿ ಮೋದಿ ಸ್ವಾಗತಕ್ಕೆ ಚೌಕಿದಾರ್ ವೇಷ ಧರಿಸಿದ ಬಿಜೆಪಿ ಮುಖಂಡರು

ಹೊಸದಾಗಿ ನಿರ್ಮಿಸಿದ ಮನೆಗೆ ಸುಮಾರು ಒಂದು ತಿಂಗಳ ಹಿಂದೆ ಗೃಹ ಪ್ರವೇಶಕ್ಕೆ ಮುಹೂರ್ತ ನೀಡಲಾಗಿದ್ದರೂ .ಗೃಹ ಪ್ರವೇಶಕ್ಕೆ ಏಪ್ರಿಲ್ 10 ಅಥವಾ ಏಪ್ರಿಲ್ 13ರಂದು ಮುಹೂರ್ತ ನಿಗದಿ ಪಡಿಸಲಾಗಿತ್ತು . ಈ ಪೈಕಿ ಏಪ್ರಿಲ್ 13ರಂದು ಪ್ರಶಸ್ತ ದಿನ ಎಂದು ಗೃಹ ಪ್ರವೇಶವನ್ನು ಕಿಶೋರ್ ದಿನ ನಿಗದಿಪಡಿಸಿದ್ದಾರೆ.

NAMO name for newly built house

ಮೋದಿ ಕಾರ್ಯಕ್ರಮ ಏಪ್ರಿಲ್ 10ರೊಳಗೆ ಅಥವಾ 12ರಂದು ಮೋದಿ ಕಾರ್ಯಕ್ರಮ ಎಂದು ಹೇಳಲಾಗಿತ್ತು. ಆದರೆ ನಂತರ ಏಪ್ರಿಲ್ 13 ರಂದು ಮಂಗಳೂರಿನಲ್ಲಿ ಮೋದಿ ಕಾರ್ಯಕ್ರಮ ನಿಗದಿ ಯಾಯಿತು .

NAMO name for newly built house

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಕ್ಷಣಗಣನೆ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಕ್ಷಣಗಣನೆ

ಈ ಮನೆಗೆ ಹೆಸರಿಡುವ ವಿಚಾರದಲ್ಲಿ ಕಿಶೋರ್ ಅವರ ಪತ್ನಿಯೇ ನಮೋ' ಹೆಸರು ಸೂಕ್ತ ಎಂದು ಸೂಚಿಸಿದ್ದರಂತೆ. ಅದರಂತೆ ನಮೋ ಹೆಸರನ್ನು ಮನೆಯ ಮುಂಭಾಗದ ಗೋಡೆಯಲ್ಲಿ ಅಳವಡಿಸಲಾಗಿದೆ. ಇಂದು ಗೃಹ ಪ್ರವೇಶೋತ್ಸವ ಮುಗಿಸಿ ಸಂಜೆ ಮೋದಿ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಕಿಶೋರ್ ಹಾಜರಾಗಲಿದ್ದಾರೆ.

English summary
PM Modi visiting Mnagluru today. He is going to attend huge BJP election campaign rally in mangaluru . In between this Bjp activist Kishor of Mangaluru kept NAMO as name for his newly built house
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X