ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮೋದಿ ಅಲೆಯಿದೆ ಎಂದ ಜನಾರ್ದನ ಪೂಜಾರಿ

|
Google Oneindia Kannada News

ಮಂಗಳೂರು, ಮಾರ್ಚ್ 24: ನಳಿನ್ ಕಮಾರ್ ಕಟೀಲ್ ಟೆಂಪಲ್ ರನ್ ಆರಂಭಿಸಿದ್ದಾರೆ. ಇಂದು ಭಾನುವಾರ ಮಂಗಳೂರಿನ ಪ್ರತಿಷ್ಠಿತ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ನಂತರ ಹಿರಿಯ ಕಾಂಗ್ರೆಸ್ ‌ಮುಖಂಡ ಜನಾರ್ದನ ಪೂಜಾರಿ ಭೇಟಿ ಮಾಡಿ ಆಶೀರ್ವಾದ ಪಡೆದರು.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ನಳಿನ್ ಕುಮಾರ್ ಕಟೀಲ್ , ಜನಾರ್ಧನ ಪೂಜಾರಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ನಂತರ ಪೂಜಾರಿ ಅವರ ಜೊತೆ ‌ನಳಿನ್ ಕುಮಾರ್ ಕಟೀಲ್ ಕೆಲ ಹೊತ್ತು ಮಾತುಕತೆ ನಡೆಸಿದರು.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯುವ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ಅಖಾಡ ಸಿದ್ಧದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯುವ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ಅಖಾಡ ಸಿದ್ಧ

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜನಾರ್ಧನ ಪೂಜಾರಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿದೆ. ಇಲ್ಲಿ ಮೋದಿ ಅಲೆಯಿಂದಾಗಿ ಕಾಂಗ್ರೆಸ್ ಪರಿಸ್ಥಿತಿ ಚೆನ್ನಾಗಿಲ್ಲ. ಆದರೆ ನಮ್ಮ ಕಾಂಗ್ರೆಸ್‌ ನ ಮಿಥುನ್ ರೈ ಉತ್ತಮ ಅಭ್ಯರ್ಥಿ ಎಂದು ಪ್ರಶಂಸಿಸಿದರು.

Nalin Kumar Kateel seeks blessings from Janardhana Poojary

ಹೈಕಮಾಂಡ್ ಹೇಳಿದ್ರೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ‌ಕಾಂಗ್ರೆಸ್ ಅಭ್ಯರ್ಥಿ ‌ಪರ ಪ್ರಚಾರಕ್ಕೆ ಹೋಗ್ತೇನೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ‌ಕೊಡಬೇಕು ಅಂತ ಮಿಥುನ್ ಗೆ ಕೊಟ್ಟಿದ್ದಾರೆ. ಆದ್ರೆ ಮೋದಿಯವರಿಗೆ ಅವರ ಅಭಿವೃದ್ಧಿಯೇ ಪ್ಲಸ್ ಪಾಯಿಂಟ್ ಎಂದರು.

 ಜೆಡಿಎಸ್ ಜೊತೆ ಮೈತ್ರಿ;ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಸುಲಭವೇ? ಜೆಡಿಎಸ್ ಜೊತೆ ಮೈತ್ರಿ;ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಸುಲಭವೇ?

ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಗೆಲ್ಲಲಿದ್ದಾರೆ. ಜೆಡಿಎಸ್ ನಿಂದ ಕುಟುಂಬ‌ ರಾಜಕಾರಣ ಸರಿಯಲ್ಲ. ನಿಖಿಲ್ ಸೋಲುತ್ತಾರೆ ಎಂದು ಜನಾರ್ದನ‌ ಪೂಜಾರಿ ಭವಿಷ್ಯ ನುಡಿದರು.

Nalin Kumar Kateel seeks blessings from Janardhana Poojary

 ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್ ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್

ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, 2009ರ ಚುನಾವಣೆಯಲ್ಲಿ ಹಿರಿಯರಾದ ಪೂಜಾರಿ ಅವರ ವಿರುದ್ಧ ಸ್ಪರ್ಧಿಸಿದ್ದೆ. ಅಂದು ಅವರು ಅಭ್ಯರ್ಥಿಯಾಗಿದ್ದರೂ ನನಗೆ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಎರಡು ಬಾರಿ ಅವರ ಆಶೀರ್ವಾದದಿಂದ ಗೆದ್ದಿದ್ದೇನೆ, ಮೂರನೇ ಬಾರಿ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
BJP candidate Nalin Kumar kateel will file nomination on March 25. Today he visited Kudroli Gokarnanatha temple and offered special pooja. After that Nalin sought blessing from congress senior leader B Janardhana Poojary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X