ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಿಲು ಮುರಿದು ಎಸ್‌ಡಿಪಿಐ ಕಚೇರಿಗೆ ನುಗ್ಗಿದ ಎನ್ಐಎ; ಒಟ್ಟು ಐವರು ವಶ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು: ನಗರದ ಎಸ್‌ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ಎನ್‌ಐಎ ಅಧಿಕಾರಿಗಳು ನುಗ್ಗಿದ್ದಾರೆ ಎಂದು ಎಸ್‌ಡಿಪಿಐ ಮುಖಂಡರು ಆರೋಪಿಸಿದ್ದಾರೆ.

ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಎನ್‌ಐಎ ಅಧಿಕಾರಿಗಳು, ಕಂಪ್ಯೂಟರ್ ಸಿ.ಪಿ.ಯು ನ ಹಾರ್ಡ್ ಡಿಸ್ಕ್ ಪಡೆದುಕೊಂಡಿದ್ದಾರೆ. ಸಿ.ಪಿ.ಯು ಬಾಕ್ಸ್ ಒಪನ್ ಮಾಡಿ ಹಾರ್ಡ್ ಡಿಸ್ಕ್ ಒಯ್ದಿರುವ ಎನ್‌ಐಎ ಅಧಿಕಾರಿಗಳು, ಬೀಗವನ್ನು ಬ್ಲೇಡ್ ನಿಂದ ಕಟ್ ಮಾಡಿ ಕಚೇರಿಯ ಶಟರ್ ತೆರೆದಿದ್ದಾರೆ. ಒಳಭಾಗದ ಗಾಜಿನ ಬಾಗಿಲನ್ನು ಪುಡಿ ಪುಡಿ ಮಾಡಿದ್ದಾರೆ ಎಂದು ಎಸ್‌ಡಿಪಿಐ ಮುಖಂಡರು ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಎನ್ಐಎ ತಂಡದಿಂದ ದಾಳಿ; ಪಿಎಫ್‌ಐ ಮುಖಂಡ ವಶಕ್ಕೆಶಿವಮೊಗ್ಗದಲ್ಲಿ ಎನ್ಐಎ ತಂಡದಿಂದ ದಾಳಿ; ಪಿಎಫ್‌ಐ ಮುಖಂಡ ವಶಕ್ಕೆ

ಎನ್ಐಎ ತಂಡ ಅನಾಗರಿಕರಂತೆ ವರ್ತಿಸಿದೆ, ಎನ್ಐಎ ಇನ್ಸ್‌ಪೆಕ್ಟರ್ ಷಣ್ಮುಗಂ ಮತ್ತವರ ತಂಡ ಗುರುವಾರ ನಸುಕಿನ 3.30ರ ಎಸ್‌ಡಿಪಿಐ ಜಿಲ್ಲಾ ಕಚೇರಿಗೆ ದಾಳಿ‌ ನಡೆಸಿದೆ. ಈ ವೇಳೆ ಕಚೇರಿಯ ಮುಂಭಾಗದ ಬಾಗಿಲಿನ ಗಾಜು ಒಡೆದಿದೆ. ಅಲ್ಲದೆ ಕಚೇರಿಯೊಳಗಿನ ಎಲ್ಲಾ ದಾಖಲೆಗಳನ್ನು ಚಲ್ಲಾಪಿಲ್ಲಿಯಾಗಿಸಿ ಪರಿಶೀಲನೆ ನಡೆಸಿ ಅನಾಗರಿಕರಂತೆ ವರ್ತಿಸಿದ್ದಾರೆ ಎಂದು ಎಂದು ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.

NAI Ride on SDPI Leaders Office in Mangaluru; 5 Detained

ರಾಜಕೀಯವಾಗಿ ಗುರುತಿಸಿಕೊಂಡಿರುವ ಪಕ್ಷವಾಗಿರುವ ಎಸ್‌ಡಿಪಿಐ ಕಚೇರಿಗೆ ನುಗ್ಗಿದ ತಕ್ಷಣ ಅಲ್ಲಿ ಏನು ಸಿಗುತ್ತದೆ? ಪಕ್ಷದ ಹ್ಯಾಂಡ್ ಬಿಲ್‌ಗಳು ದೊರಕಬಹುದು ವಿನಃ ಬೇರೇನು ಸಿಗಲು ಸಾಧ್ಯವಿಲ್ಲ. ಅಲ್ಲದೆ ಎಸ್‌ಡಿಪಿಐ ಕಚೇರಿಗೆ ದಾಳಿ ನಡೆಸುವ ವೇಳೆ ಎನ್ಐಎ ತಂಡ ಸರ್ಚ್ ವಾರೆಂಟ್ ಇಲ್ಲದೆ ಅಕ್ರಮ ಪ್ರವೇಶ ಮಾಡಿದೆ. ಇದರ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಜೋಕಟ್ಟೆ ಆರೋಪಿಸಿದ್ದಾರೆ.

ಎನ್‌ಐಎ, ಇಡಿ ದಾಳಿಯಲ್ಲಿ ರಾಜ್ಯಾವಾರು ಬಂಧಿತರ ವಿವರಎನ್‌ಐಎ, ಇಡಿ ದಾಳಿಯಲ್ಲಿ ರಾಜ್ಯಾವಾರು ಬಂಧಿತರ ವಿವರ

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಐಎ ಮತ್ತು ರಾಜ್ಯ ಪೊಲೀಸ್ ದಾಳಿಯಲ್ಲಿ ಒಟ್ಟು ಐದು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ‌ಪಡೆದುಕೊಳ್ಳಲಾಗಿದೆ. ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ಮೂವರು ಮತ್ತು ಪುತ್ತೂರು ಮತ್ತು ಬಂಟ್ವಾಳದಲ್ಲಿ ಇಬ್ಬರು ಪಿಎಫ್ಐ ಮುಖಂಡರನ್ನು ಪಡೆದುಕೊಳ್ಳಲಾಗಿದೆ.

NAI Ride on SDPI Leaders Office in Mangaluru; 5 Detained

ಕಲ್ಲಡ್ಕದ ಬೋಳಂತೂರು ನಿವಾಸಿ ಮಹಮ್ಮದ್ ಕುಂಟ್ಟಿ ಎಂಬುವವರ ಪುತ್ರ ಪಿಎಫ್ಐ ರಾಜ್ಯ ನಾಯಕರಾದ ತಪ್ಸೀರ್, ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಿ ಅಬ್ದುಲ್ ಖಾದರ್ ಸಾಮೆತ್ತಡ್ಕ ಮನೆ ಮೇಲೆ ದಾಳಿ ಮಾಡಿ ದಾಖಲೆಗಳೊಂದಿಗೆ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಜೊಕ್ಕಟ್ಟೆ ನಿವಾಸಿ ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಕಾವೂರು ನಿವಾಸಿ ಪಿಎಫ್‌ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನಾವಾಝ್ ಕಾವೂರು, ಹಳೆಯಂಗಡಿ ನಿವಾಸಿ ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಮೊದ್ದೀನ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದು, ದ.ಕ ಜಿಲ್ಲಾ ಪೊಲೀಸರ ಸಹಕಾರದಲ್ಲಿ ಬೆಂಗಳೂರು ಪೊಲೀಸರು ಐದು ಮಂದಿಯನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

English summary
SDPI leaders in Mangaluru have alleged that when the National Investigation Agency raided the office of the Social Democratic Party of India, they broke the office shutters and glass doors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X