• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಳಿಕಾಂಬೆ ಮೇಲೆ ಹಾಡು ಬರೆದು, ಹಾಡಿದ ಮುಸ್ಲಿಂ ಯುವಕ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 13; ದಕ್ಷಿಣ ಕನ್ನಡ ಜಿಲ್ಲೆ ಎಂದಾಕ್ಷಣ ನೆನಪಾಗೋದು ಕೋಮು ದಳ್ಳುರಿ, ಕೋಮುದ್ವೇಷ, ಕೋಮು ಗಲಭೆ. ಆದರೆ ಕೆಲವೊಂದು ಕಡೆ ಕೋಮು ಸಾಮರಸ್ಯವನ್ನು ಮೇಳೈಸುವ ಘಟನೆಗಳು ನಡೆಯುತ್ತಿರುತ್ತದೆ.

ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಸವಣಾಲು ಗ್ರಾಮ ಅಂತಹದ್ದೇ ಒಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದಲ್ಲಿ ಕಾಳಿಕಾಂಬೆಯ ಸ್ಥುತಿಯನ್ನು ಅದೇ ಗ್ರಾಮದ ರಮ್ಲಾನ್ ಎಂಬ ವ್ಯಕ್ತಿ ರಚಿಸಿ, ಗಾಯನ ಮಾಡಿ ಕಾಳಿಕಾಂಬೆಗೆ ಅರ್ಪಣೆ ಮಾಡಿದ್ದಾರೆ.

ಮಂಗಳೂರು: ಮುಸ್ಲಿಂ ಭಕ್ತನಿಗೆ ಒಲಿದ ಕೊರಗಜ್ಜ; ನಿತ್ಯ ಸ್ವಾಮಿಯ ಪೂಜೆಮಂಗಳೂರು: ಮುಸ್ಲಿಂ ಭಕ್ತನಿಗೆ ಒಲಿದ ಕೊರಗಜ್ಜ; ನಿತ್ಯ ಸ್ವಾಮಿಯ ಪೂಜೆ

ರಮ್ಲಾನ್ ಕಾಳಿಕಾಂಬ ದೇಗುಲದ ಪಕ್ಕದಲ್ಲೇ ವಾಸವಾಗಿದ್ದು, ಕಾಳಿಕಾಮಾತೆಯ ಪರಮ ಭಕ್ತರಾಗಿದ್ದಾರೆ. ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಾಮರಸ್ಯ ಮೆರೆದಿದ್ದಾರೆ. ‌ಮುಸ್ಲಿಂನಾದರೂ ದುರ್ಗೆಯ ಆರಾಧನೆಯನ್ನು ಮುಕ್ತ ಮನಸ್ಸಿನಿಂದ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ

ಮಹಿಮೆದ ಕಾರಣಿಕ ಕ್ಷೇತ್ರ ಕಾಳಿಕಾಬೆಟ್ಟ ಎಂಬ ಭಕ್ತಿಗೀತೆಯನ್ನು ರಮ್ಲಾನ್ ಹಾಡಿದ್ದಾರೆ. ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿರುವ ರಮ್ಲಾನ್ ದುರ್ಗೆಯ ಬಗ್ಗೆ ಹಾಡನ್ನು ರಚಿಸಿ ಅವರೇ ಹಾಡಿದ್ದಾರೆ.

ಉಡುಪಿಯಲ್ಲಿ ಧರ್ಮ ಸಾಮರಸ್ಯ: ಮುಸ್ಲಿಂ ಕುಟುಂಬದಿಂದ ಅಮೃತೇಶ್ವರಿ ದೇವಸ್ಥಾನದಲ್ಲಿ ತುಲಾಭಾರ ಸೇವೆಉಡುಪಿಯಲ್ಲಿ ಧರ್ಮ ಸಾಮರಸ್ಯ: ಮುಸ್ಲಿಂ ಕುಟುಂಬದಿಂದ ಅಮೃತೇಶ್ವರಿ ದೇವಸ್ಥಾನದಲ್ಲಿ ತುಲಾಭಾರ ಸೇವೆ

ರಮ್ಲಾನ್ ಶುಶ್ರಾವ್ಯ ಕಂಠದಿಂದ ದುರ್ಗೆಯ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ರಮ್ಲಾನ್ ಹಾಡನ್ನು ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟ ಸವಣಾಲು ಎಂಬ ಯೂಟ್ಯೂಬ್ ಪೇಜ್ ನಲ್ಲಿ ನೋಡಬಹುದಾಗಿದೆ.

ಸವಣಾಲಿನ ಶ್ರೀ ಕಾಳಿಕಾಂಬ ಕ್ಷೇತ್ರ 1200 ವರ್ಷಗಳ ಇತಿಹಾಸವುಳ್ಳ ಪುಣ್ಯ ಪ್ರಸಿದ್ಧ ಕ್ಷೇತ್ರ. ಕುದುರೆಮುಖ ತಪ್ಪಲಿನಲ್ಲಿರುವ ಈ ಕ್ಷೇತ್ರ ಸುತ್ತಲೂ ಕಾಡಿನಿಂದ ಆವೃತ್ತವಾದ ನೈಸರ್ಗಿಕವಾಗಿ ಅದ್ಭುತ ಸೌಂದರ್ಯ ಹೊಂದಿದೆ.

ದುರ್ಗಾ ದೇವತೆ, ಕಾಳಿಕಾಂಬ ದೇವತೆಯನ್ನು ಇಲ್ಲಿ ಪ್ರಧಾನವಾಗಿ ಪೂಜಿಸಲಾಗುತ್ತದೆ. ಅಲ್ಲದೆ ಗಣಪತಿ, ಶ್ರೀಧರ ಸ್ವಾಮಿ, ಶಿವ ದಕ್ಷಿಣ ಮೂರ್ತಿ, ರಣಗುಲಿಗ, ಶ್ರೀ ನಾಗರಾಜ, ಭೈರವರನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ.

English summary
Muslim community Ramalan wrote and and sing the song on shree durga Kalikamba kshetra at Kalibetta, Savanalu village of Belthangadi, Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X