ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಗೆ ಬಿಸಿ ತುಪ್ಪವಾದ ದಕ್ಷಿಣಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ತೀರ್ಮಾನ

|
Google Oneindia Kannada News

ಮಂಗಳೂರು, ಅಕ್ಟೋಬರ್. 25:ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹುಡುಕಾಟ ಆರಂಭಿಸಿದೆ.

ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳಯದಲ್ಲಿ ಮಾಜಿ ಸಚಿವ ರಮಾನಾಥ್ ರೈ , ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅದಲ್ಲದೇ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ತೆರೆಮರೆಯಲ್ಲಿ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಗೆ ಇನ್ನೊಂದು ಮಂಡೆ ಬಿಸಿ ಆರಂಭವಾಗಿದೆ.

ಜಾವಗಲ್ ಶ್ರೀನಾಥ್‌ಗೆ ಬಿಜೆಪಿ ಆಹ್ವಾನ, ಹಾಸನದಿಂದ ಟಿಕೆಟ್ ಸಾಧ್ಯತೆಜಾವಗಲ್ ಶ್ರೀನಾಥ್‌ಗೆ ಬಿಜೆಪಿ ಆಹ್ವಾನ, ಹಾಸನದಿಂದ ಟಿಕೆಟ್ ಸಾಧ್ಯತೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಬೇಡಿಕೆ ಇಟ್ಟಿದೆ. ಈ ಕುರಿತು ನಿನ್ನೆ ಸಂಜೆ ಮಂಗಳೂರಿನಲ್ಲಿ ನಡೆದಿದೆ.

Muslim Central Committee has demanded Congress give ticket to the Muslim candidate

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಮಂಗಳೂರು ಲೋಕಸಭೆ ಕ್ಷೇತ್ರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ ಎಸ್ ಮಹಮ್ಮದ್ ಮಸೂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದರೋ ಅವರಿಗೇ ಟಿಕೆಟ್‌ ನೀಡಿದ ದೇವೇಗೌಡಯಾರ ವಿರುದ್ಧ ಪ್ರತಿಭಟನೆ ಮಾಡಿದ್ದರೋ ಅವರಿಗೇ ಟಿಕೆಟ್‌ ನೀಡಿದ ದೇವೇಗೌಡ

ಕಾಂಗ್ರೆಸ್ ಪಕ್ಷ ಈವರೆಗೆ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಈವರೆಗೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಈ ಮೊದಲೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕಿತ್ತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದ ಬಳಿಕವೂ ನಾವು ಟಿಕೆಟ್ ಗಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗೆ ಮನ್ನಣೆ ಕೊಡುವುದು ಪಕ್ಷದ ಹೊಣೆಗಾರಿಕೆ ಎಂದು ಕೆ ಎಸ್ ಮಹಮ್ಮದ್ ಮಸೂದ್ ಸಭೆಯಲ್ಲಿ ಅಭಿಪ್ರಾಯಟ್ಟಿದ್ದಾರೆ.

Muslim Central Committee has demanded Congress give ticket to the Muslim candidate

ಮುಸ್ಲಿಂ ಅಭ್ಯರ್ಥಿ ಯಾರು ಎಂಬುದನ್ನು ಉಪ ಸಮಿತಿ ಮೂಲಕ ತೀರ್ಮಾನಿಸಿ ಘೋಷಿಸುತ್ತೇವೆ . ನವೆಂಬರ್ 30 ರ ಒಳಗೆ ಕಾಂಗ್ರೆಸ್ ನಾಯಕರು ತಮ್ಮ ತೀರ್ಮಾನ ತಿಳಿಸಬೇಕು. ಡಿಸೆಂಬರ್ 15 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಮುಸ್ಲಿಂ ಸಂಘಟನೆಗಳ ಸಮಾವೇಶದಲ್ಲಿ ನಮ್ಮ ತೀರ್ಮಾನವನ್ನು ಹೇಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಡ್ಯ ಜೆಡಿಎಸ್ ಟಿಕೆಟ್‌ ವಂಚಿತೆ ಡಾ.ಲಕ್ಷ್ಮಿ ಕೊನೆಗೂ ಮೌನ ಮುರಿದರುಮಂಡ್ಯ ಜೆಡಿಎಸ್ ಟಿಕೆಟ್‌ ವಂಚಿತೆ ಡಾ.ಲಕ್ಷ್ಮಿ ಕೊನೆಗೂ ಮೌನ ಮುರಿದರು

ಮುಸ್ಲಿಂ ಸೆಂಟ್ರಲ್ ಕಮಿಟಿಯ ಈ ತೀರ್ಮಾನ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್ ಗೆ ಕಗ್ಗಂಟಾಗಿ ಪರಿಣಮಿಸಲಿದೆ ಎಂದು ಅಂದಾಜಿಸಲಾಗಿದೆ.

English summary
Muslim Central Committee has demanded that Congress give ticket to the Muslim candidate from Dakshina Kannada Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X