ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ವೈರಲ್; ಭಾರೀ ಮಳೆಯಲ್ಲೂ ಕದಲದೇ ರಾಷ್ಟ್ರಗೀತೆ ಹಾಡಿದ ಶಾಲಾ ಮಕ್ಕಳು

|
Google Oneindia Kannada News

ಮಂಗಳೂರು, ಆಗಸ್ಟ್ 16: ಭಾರೀ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ರಾಷ್ಟ್ರ ಧ್ವಜಕ್ಕೆ ವಂದಿಸಿ ರಾಷ್ಟ್ರಗೀತೆ ಹಾಡಿದ ಶಾಲಾ ಮಕ್ಕಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳೆ ಬಂದರೂ ಲೆಕ್ಕಿಸದೇ ರಾಷ್ಟ್ರಗೀತೆಯ ಮಹತ್ವವನ್ನು ಎತ್ತಿ ಹಿಡಿದ ಪುಟಾಣಿಗಳ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿತ್ತು. ಭಾರೀ ಮಳೆಯ ನಡುವೆ ಮಂಗಳೂರಿನಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ನಡುವೆ ಗ್ರಾಮೀಣ ಪ್ರದೇಶದ ಶಾಲೆಯೊಂದರಲ್ಲಿ ಭಾರೀ ಮಳೆಯ ನಡುವೆಯೂ ಕದಲದೇ ಪ್ರಾಥಮಿಕ ಶಾಲಾ ಮಕ್ಕಳು ಸ್ವಾತಂತ್ರ್ಯೋತ್ಸವ ಆಚರಿಸಿದ ವಿಡಿಯೋ ಒಂದು ವೈರಲ್ ಆಗಿದೆ.

ಸುರಿವ ಮಳೆ ನಡುವೆಯೇ ಮಂಗಳೂರಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಣೆಸುರಿವ ಮಳೆ ನಡುವೆಯೇ ಮಂಗಳೂರಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮಂಗಳೂರು ಹೊರವಲಯದ ಮುಡಿಪು ಸಮೀಪದ ಸಂಬಾರ್ ತೋಟ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ರಾಷ್ಟ್ರದ್ವಜ ಹಾರಿಸಿದ ನಂತರ ಶಾಲೆ ಮಕ್ಕಳು ರಾಷ್ಟ್ರಗೀತೆ ಹಾಡುವಾಗ ಭಾರಿ ಮಳೆ ಸುರಿದಿದೆ. ಸ್ವಾಂತತ್ರ್ಯೋತ್ಸವಕ್ಕೆ ಅತಿಥಿಗಳಾಗಿ ಬಂದವರು ಮಳೆ ಆರಂಭವಾಗುತ್ತಿದ್ದಂತೆ ಜಾಗ ಬಿಟ್ಟು ಓಟ ಕಿತ್ತಿದ್ದಾರೆ.

Mudipu Independence Day Celebration Video Viral

ಆದರೆ ಶಾಲೆ ಮಕ್ಕಳು ಮಾತ್ರ ಮಳೆ ಸುರಿದರೂ ಲೆಕ್ಕಿಸದೆ ರಾಷ್ಟ್ರಗೀತೆ ಮುಂದುವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು, ಮಕ್ಕಳ ಶಿಸ್ತು, ರಾಷ್ಟ್ರಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

English summary
Mudipu Sambar Thota school children celebrated Independence day in between heavy rain. They This video now viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X