ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರ್ ರಾಜ್ಯ ವಿವಿ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು

|
Google Oneindia Kannada News

ಡಬಿದಿರೆ, ಜ. 13: ರಾಜ್ಯ ಸರ್ಕಾರ, ಬೆಂಗಳೂರು ರಾಜೀವ್ ಗಾಂಧಿ ವಿವಿ ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಜ.16 ರಿಂದ 20 ರವರೆಗೆ 75ನೇ ಅಖಿಲ ಭಾರತ ಅಂತರ್ ರಾಜ್ಯ ವಿವಿ ಕ್ರೀಡಾಕೂಟ ನಡೆಯಲಿದೆ.

ಇದಕ್ಕಾಗಿ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಿರ್ಮಿಸಿರುವ 400 ಮೀಟರ್ ಉದ್ದದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.[ಮೂಡುಬಿದಿರೆಯ ಜನಪ್ರಿಯ 'ಗಾರ್ಡ್' ಗೆ ಅಂತಿಮ ನಮನ]

sports

ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದ ಅವರು, 2011-12ನೆ ಸಾಲಿನಲ್ಲಿ 72ನೇ ಅಖಿಲ ಭಾರತ ಅಂತರ್ ವಿವಿ ಕ್ರೀಡಾಕೂಟವು ಮೂಡಬಿದರೆಯಲ್ಲಿ ನಡೆದಿದ್ದು ಈಗ ಎರಡನೇ ಸಾರಿ ನಡೆಯುತ್ತಿದೆ. ರಾಷ್ಟ್ರದ 200 ವಿವಿಗಳ ಸುಮಾರು 3,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುಮಾರು 2,000 ಪುರುಷಕ್ರೀಡಾಪಟುಗಳು, 1,500 ಮಹಿಳಾ ಕ್ರೀಡಾಪಟುಗಳು ಮತ್ತು 1,000 ಕ್ರೀಡಾಧಿಕಾರಿಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಕೂಟದಲ್ಲಿ ದಾಖಲೆ ನಿರ್ಮಿಸುವ ಕ್ರೀಡಾಪಟುಗಳಿಗೆ 25 ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.[ಆಳ್ವಾಸ್ ನುಡಿಸಿರಿ ಚಿತ್ರಗಳು]

ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ , ಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿ ಉಪ ಕುಲಪತಿ ಪ್ರೊ.ಕೆ.ಎಸ್. ರವೀಂದ್ರನಾಥ, ವಿವಿಗಳ ಸೆಕ್ರೆಟರಿ ಗುರುದೀಪ್ ಸಿಂಗ್, ಭಾರತೀಯ ಅಥ್ಲೆಟಿಕ್ ಫೆಡರೇಶನ್ ಸೆಕ್ರೆಟರಿ ಪಿ.ಕೆ. ವ್ಯಾಲ್ಸನ್, ತಮಿಳುನಾಡು ಕ್ರೀಡಾ ವಿವಿಯ ನಿರ್ದೇಶಕ ವೈದ್ಯನಾಥನ್, ಗುಂಟೂರಿನ ನಾಗಾರ್ಜುನ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್, ಮೈಸೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಶೇಷಣ್ಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕ್ರೀಡಾಕೂಟದ ವಿಶೇಷಗಳೇನು?
ಉತ್ತರ ಕೊರಿಯಾದಲ್ಲಿ ಜರಗಲಿರುವ ವಿಶ್ವ ವಿವಿಯ ಒಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಇಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜತೆಗೆ ವಿವಿಧ ಸಾಂಸ್ಕೃತಿಕ ತಂಡಗಳು ಕೂಟದ ಆರಂಭದ ದಿನ ಕಾರ್ಯಕ್ರಮ ನೀಡಲಿವೆ ಎಂದು ತಿಳಿಸಿದರು.

English summary
Mudabidire: National Level university's sports will held on 16 January to 20 January at Swaraj stadium. Total 3,500 athletes are participating in this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X