ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ಬಿಟ್ಟು ಗದ್ದೆಗಿಳಿದು ಉಳುಮೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 13; ದಕ್ಷಿಣ ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕರೆ ನೀಡಿದ ಅಭಿಯಾನದ ಫಲವಾಗಿ ಜಿಲ್ಲೆಯಲ್ಲಿ ಭತ್ತದ ಕ್ರಾಂತಿ ಆರಂಭಗೊಂಡಿದೆ.

ಭಂಜರು ಭೂಮಿಯಲ್ಲಿ ಭತ್ತದ‌ ಪೈರು ನಳನಳಿಸಬೇಕೆಂಬ ಉದ್ದೇಶದಿಂದ ಮಾಡಿದ 'ಭತ್ತದ ಬೆಳೆ ಬೆಳೆಯೋಣ' ಎನ್ನುವ ಕಾರ್ಯಕ್ರಮಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ.

ಮಂಡ್ಯದ ರೈತನ ಮನೆಯೀಗ ಭತ್ತ ವೈವಿಧ್ಯ ಕೇಂದ್ರ! ಮಂಡ್ಯದ ರೈತನ ಮನೆಯೀಗ ಭತ್ತ ವೈವಿಧ್ಯ ಕೇಂದ್ರ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಂಜರು ಬಿದ್ದ ಸುಮಾರು 1 ಸಾವಿರ ಎಕರೆ ಭೂಮಿಯಲ್ಲಿ ಭತ್ತದ ಕೃಷಿಗೆ ಸಿದ್ಧತೆ ಪೂರ್ಣಗೊಂಡಿದ್ದು, ಹಲವೆಡೆ ಬಿತ್ತನೆ, ಉಳುಮೆ ಕಾರ್ಯಗಳು ನಡೆಯುತ್ತಿದೆ.

ಭಾರತದ ಹೈಬ್ರಿಡ್ ಭತ್ತ ಯೋಜನೆಯ ಪಿತಾಮಹ ಡಾ.ಎಂ ಮಹಾದೇವಪ್ಪ ನಿಧನಭಾರತದ ಹೈಬ್ರಿಡ್ ಭತ್ತ ಯೋಜನೆಯ ಪಿತಾಮಹ ಡಾ.ಎಂ ಮಹಾದೇವಪ್ಪ ನಿಧನ

MP Nalin Kumar Kateel Plowing Paddy Field

ಭತ್ತದ ಕೃಷಿಗೆ ಉತ್ತೇಜನ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗದ್ದೆಗಿಳಿದಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆದ ಉಳುಮೆ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ; ರೈತರು ಇದನ್ನು ತಿಳಿಯಿರಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ; ರೈತರು ಇದನ್ನು ತಿಳಿಯಿರಿ

ಗದ್ದೆಗೆ ಇಳಿದು ಟ್ಯಾಕ್ಟರ್‌ ಹಾಗೂ ಎತ್ತುಗಳ ಮೂಲಕ ಸಾಂಪ್ರದಾಯಿಕವಾಗಿ ಗದ್ದೆಯ ಉಳುಮೆ ಮಾಡಿದ್ದಾರೆ. ಭತ್ತದ ಪೈರು ನಾಟಿ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ‌ ಹಾಗೂ‌ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆರಂಭಿಸಿದ‌ ಅಭಿಯಾನ ಇದಾಗಿದ್ದು, ಕೇವಲ ಪುತ್ತೂರು ತಾಲೂಕಿನಲ್ಲೇ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಸುಮಾರು 80 ಎಕರೆಯಲ್ಲಿ ಈ ಬಾರಿ ಉಳುಮೆ ಮಾಡಲಾಗುತ್ತಿದೆ.

ಈ ಅಭಿಯಾನದ ಹಿನ್ನಲೆಯಲ್ಲಿ ಭತ್ತದ‌ ಕೃಷಿ ಮಾಡಲು ಜನ ಮುಂದೆ ಬಂದಿದ್ದು, 'ನಮ್ಮ ಅನ್ನ, ನಾವೇ ಬೆಳೆಯೋಣ' ಎನ್ನುವ ಧ್ಯೇಯದೊಂದಿಗೆ ಆರಂಭಗೊಂಡ‌ ಕಾರ್ಯಕ್ರಮವಾಗಿದೆ.

English summary
Dakshina Kannada BJP MP and Karnataka BJP president Nalin Kumar Kateel plowing paddy field with farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X