ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಚಿಗುರಿಕೊಂಡ ಮಂಗಳೂರಿಗರ ಪ್ರತ್ಯೇಕ ರೈಲ್ವೆ ವಿಭಾಗದ ಕನಸು

|
Google Oneindia Kannada News

ಮಂಗಳೂರು, ಡಿಸೆಂಬರ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ದೆಹಲಿಯಲ್ಲಿ ಭೇಟಿ ಮಾಡಿ ವಿನಂತಿಸಿದ್ದಾರೆ.

ಬಹುನಿರೀಕ್ಷಿತ ಮೈಸೂರು - ಬೆಂಗಳೂರು ಮೆಮೂ ರೈಲಿಗೆ ಹಸಿರು ನಿಶಾನೆಬಹುನಿರೀಕ್ಷಿತ ಮೈಸೂರು - ಬೆಂಗಳೂರು ಮೆಮೂ ರೈಲಿಗೆ ಹಸಿರು ನಿಶಾನೆ

ಮಂಗಳೂರನ್ನು ಪ್ರತ್ಯೇಕ ರೈಲ್ವೇ ವಿಭಾಗ ಮಂಜೂರು ಮಾಡುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ. ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ, ಮಂಗಳೂರು ಕೇಂದ್ರ ರೈಲು ನಿಲ್ದಾಣದ 3ನೇ ಮತ್ತು 4ನೇ ಪ್ಲಾಟ್ ಫಾರಂ ನಿರ್ಮಾಣ ಕಾರ್ಯ ತ್ವರಿತಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಇಟ್ಟಿದ್ದಾರೆ.

ಶತಮಾನಗಳ ಇತಿಹಾಸವಿರುವ ಮೈಸೂರಿನ ರೈಲ್ವೆ ವರ್ಕ್ ಶಾಪ್ ಮತ್ತಷ್ಟು ಮೇಲ್ದರ್ಜೆಗೆಶತಮಾನಗಳ ಇತಿಹಾಸವಿರುವ ಮೈಸೂರಿನ ರೈಲ್ವೆ ವರ್ಕ್ ಶಾಪ್ ಮತ್ತಷ್ಟು ಮೇಲ್ದರ್ಜೆಗೆ

ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳುವುದು.ಮಂಗಳೂರು-ಮಡ್ಗಾಂ ಡೆಮು ರೈಲನ್ನು ಪ್ರತಿನಿತ್ಯ ಓಡಿಸುವುದು. ದಾದರ್-ಮಡ್ಗಾಂ ಜನ್ ಶತಾಬ್ದಿ ಎಕ್ಸಪ್ರೆಸ್ ರೈಲನ್ನು ಮಂಗಳೂರಿಗೆ ಓಡಿಸುವುದು. ಗೇಜ್ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ಮಂಗಳೂರನ್ನು ಹಾಸನ-ಅರಸೀಕೆರೆ ಮೂಲಕ ಹುಬ್ಬಳ್ಳಿ ಮೀರಜ್ ಅನ್ನು ಸಂಪರ್ಕಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸಪ್ರೆಸ್ ರೈಲನ್ನು ಪುನರಾರಂಭಿಸುವುದು.

MP Nalin Kumar Kateel meet central Railway minister Piyush Goyal

ಸುಬ್ರಹ್ಮಣ್ಯ ರೋಡ್ ರೈಲುನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಪೂರೈಸುವಂತೆ ಮಾನ್ಯ ಸಚಿವರಿಗೆ ಸಂಸದರು ಮನವಿ ಮಾಡಿದ್ದಾರೆ . ಸಂಸದರ ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

ಮೇಕ್ ಇನ್ ಇಂಡಿಯಾ ಕೂಸಾದ ಈ ರೈಲಿನಲ್ಲಿ ಏನೆಲ್ಲಾ ಇದೆ?

ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ರಚನೆಯ ಕುರಿತು ದೆಹಲಿಯಲ್ಲಿ ರೈಲ್ವೇಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಕೂಲಂಕುಶವಾಗಿ ಚರ್ಚಿಸುವುದಾಗಿ ಸಂಸದರಿಗೆ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗರ ಪ್ರತ್ಯೇಕ ರೈಲ್ವೇ ವಿಭಾಗದ ಕನಸು ಮತ್ತೇ ಚಿಗುರಿಕೊಂಡಿದೆ.

English summary
Dakshina Kannada MP Nalin Kumar Kateel meet central Railway minister Piyush Goyal in Dehli and demanded for some railway development projects in Dakshina kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X