ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ.ಕದಲ್ಲಿ ರೈಲ್ವೆ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ

|
Google Oneindia Kannada News

ಮಂಗಳೂರು, ಜೂನ್ 28: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳಿಗೆ ಮನವಿ ಸಲ್ಲಿಸಿದರು.

ಕರಾವಳಿಗರ ಬಹುದಿನಗಳ ಕನಸಾದ ಪ್ರತ್ಯೇಕ ಮಂಗಳೂರು ವಿಭಾಗ ರಚನೆ ಸೇರಿದಂತೆ ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

 ಗೋ ಕಳ್ಳತನ ವಿರುದ್ಧ ಕಠಿಣ ಕ್ರಮಕ್ಕೆ ಸಂಸದ ನಳಿನ್ ಆಗ್ರಹ ಗೋ ಕಳ್ಳತನ ವಿರುದ್ಧ ಕಠಿಣ ಕ್ರಮಕ್ಕೆ ಸಂಸದ ನಳಿನ್ ಆಗ್ರಹ

ಮಂಗಳೂರು - ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುವ (ಮಂಗಳೂರು-ಯಶವಂತಪುರ ಎಕ್ಸ್ ಪ್ರೆಸ್) ರೈಲನ್ನು ಪ್ರತಿನಿತ್ಯ ಓಡಿಸುವುದು, ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ತ್ವರಿತಗೊಳಿಸುವುದು, ಮಂಗಳೂರು ಮೀರಜ್ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲನ್ನು ಪುನರಾರಂಭಿಸಿ ಮುಂಬೈ (ಎಂ.ಸಿ.ಎಸ್.ಟಿ) ವರೆಗೆ ವಿಸ್ತರಿಸುವುದು, ಮಂಗಳೂರು - ಪೂನಾ ಮಧ್ಯೆ ಹೊಸ ರೈಲನ್ನು ಓಡಿಸುವುದು, ಮೂಕಾಂಬಿಕಾ ರೋಡ್ (ಬೈಂದೂರು) ಕಾಸರಗೋಡು ರೈಲನ್ನು ಪುನರಾರಂಭಿಸಿ ಗುರುವಾಯೂರಿನವರೆಗೆ ವಿಸ್ತರಿಸುವುದು, ಹೀಗೆ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಲಾಗಿದೆ.

MP Nalin Kumar Kateel appealed union Railway minister

ಕಾರವಾರ - ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ ಮಧ್ಯೆ ಸಂಚರಿಸುವ ಹಗಲು ರೈಲನ್ನು ತಿರುಪತಿವರೆಗೆ ವಿಸ್ತರಿಸುವ, ಮಂಗಳೂರು - ತಿರುಪತಿ ಮಧ್ಯೆ ಹೊಸ ರೈಲನ್ನು ಮಂಜೂರು ಮಾಡುವ, ಮಂಗಳೂರು - ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸುವ, ಮಂಗಳೂರಿನಿಂದ ಉತ್ತರ ಭಾರತದ ಪವಿತ್ರ ತೀರ್ಥ ಕ್ಷೇತ್ರಗಳಾದ ವಾರಣಾಸಿ, ಪ್ರಯಾಗ್ ರಾಜ್, ಗೋರಕ್ ಪುರ ಸಂಪರ್ಕಿಸುವಂತೆ ಹೊಸ ರೈಲು ಮಂಜೂರು ಮಾಡುವ, ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮೈಸೂರು- ಮಂಡ್ಯ ಮಹಿಳೆಯರಿಗೆ ವಿಶೇಷ ರೈಲಿಗೆ ಸಂಸದೆ ಸುಮಲತಾ ಮನವಿಮೈಸೂರು- ಮಂಡ್ಯ ಮಹಿಳೆಯರಿಗೆ ವಿಶೇಷ ರೈಲಿಗೆ ಸಂಸದೆ ಸುಮಲತಾ ಮನವಿ

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ, ಮಂಗಳೂರು - ಪುತ್ತೂರು - ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಹಾಗೂ ಕಾರವಾರ-ಬೆಂಗಳೂರು ರೈಲಿನ ವೇಳೆಯಲ್ಲಿ ಬದಲಾವಣೆ ಮಾಡುವುದು, ಮಂಗಳೂರು - ಕೊಯಮತ್ತೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿಗೆ ಗುರುವಾಯೂರಿಗೆ ಪ್ರಯಾಣಿಸುವ ಯಾತ್ರಿಗಳಿಗೆ ಅನುಕೂಲವಾಗುವಂತೆ ಕುಟ್ಟಿಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆ ಒದಗಿಸುವುದು, ಕೊಯಮತ್ತೂರು- ಮಂಗಳೂರು ಜಂಕ್ಷನ್ - ಜಬಲ್ಪುರ್ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪೂರೈಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ

ಸಂಸದರ ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಮಂಗಳೂರು - ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುವ (ಮಂಗಳೂರು-ಯಶವಂತಪುರ ಎಕ್ಸ್.ಪ್ರೆಸ್) ರೈಲನ್ನು ಪ್ರತಿನಿತ್ಯ ಓಡಿಸುವ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಸಂಸದರಿಗೆ ರೈಲ್ವೆ ಸಚಿವರು ತಿಳಿಸಿದ್ದಾರೆ.

English summary
Dakshina Kannada MP Nalin Kumar Kateel today met Union Railway Minister Piyush Goyal and State Railway Minister Suresh Khadi in New Delhi and appealed to the railway development of Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X