ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧವೆ ಸೊಸೆಗೆ ಮರುಮದುವೆ ಮಾಡಿಸಿ ಮಾದರಿಯಾದ ಸುಳ್ಯದ ಮಹಿಳೆ

|
Google Oneindia Kannada News

ಮಂಗಳೂರು, ಜುಲೈ 16: ನಿಮ್ಮ ಮನೆಗೆ ಬರುವ ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಳ್ಳಿ ಎಂದು ಮದುವೆ ಸಂದರ್ಭ ಗಂಡಿನ ಕಡೆಯ ಪೋಷಕರಿಗೆ ಹೆಣ್ಣುಮಕ್ಕಳ ತಂದೆ- ತಾಯಿ ವಿನಂತಿ ಮಾಡುವುದು ಉಂಟು. ಈ ಮನವಿಗೆ ಅದೆಷ್ಟು ಮಂದಿ ಸ್ಪಂದಿಸುತ್ತಾರೋ ಗೊತ್ತಿಲ್ಲ. ಆದರೆ ಈ ವಿಚಾರದಲ್ಲಿ ಇತರರಿಗೆ ಮಾದರಿ ಎನಿಸುವಂತೆ ನಡೆದುಕೊಂಡಿರುವ ಮಹಿಳೆ (ಅತ್ತೆ)ಯೊಬ್ಬರ ಬಗ್ಗೆ ವರದಿ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಹಿಳೆಯೊಬ್ಬರು ತನ್ನ ವಿಧವೆ ಸೊಸೆಗೆ ಮರು ಮದುವೆ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ. ಸುಳ್ಯ ತಾಲ್ಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಮಗಳು ಸುಶೀಲಾ ಅವರಿಗೆ ಅದೇ ಗ್ರಾಮದ ಪದ್ಮಯ್ಯ ಅವರ ಮಗ ಮಾಧವ ಎಂಬುವರ ಜತೆ 3 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಮದುವೆಯಾದ ವರ್ಷದೊಳಗೆ ರಸ್ತೆ ಅಪಘಾತವೊಂದರಲ್ಲಿ ಮಾಧವ ಮೃತಪಟ್ಟಿದ್ದರು.

 ಮಗು ಅಪಹರಣ ಪ್ರಕರಣಕ್ಕೆ ತಿರುವು; ಸಾಯಲು ಹೋಗಿ ಮಗು ಕಳೆದುಕೊಂಡ ತಾಯಿ ಮಗು ಅಪಹರಣ ಪ್ರಕರಣಕ್ಕೆ ತಿರುವು; ಸಾಯಲು ಹೋಗಿ ಮಗು ಕಳೆದುಕೊಂಡ ತಾಯಿ

ಅದಾಗಲೇ ಗರ್ಭಿಣಿಯಾಗಿದ್ದ ಸುಶೀಲಾಗೆ ಪತಿ ಮಾಧವರ ಅಕಾಲಿಕ ಮರಣದಿಂದ ದಿಕ್ಕೇ ತೋಚದಂತಾಗಿತ್ತು. ಆದರೆ ಅತ್ತೆ ಕುಂಞಕ್ಕ ಅವರಿಗೆ ಚಿಕ್ಕ ವಯಸ್ಸಿನ ಸೊಸೆಯ ಚಿಂತೆ ಕಾಡತೊಡಗಿತ್ತು. ಸೊಸೆಯ ಜೀವನ ಹೀಗೇ ಮುಗಿದು ಹೋಗಬಾರದು ಎಂದು ತೀರ್ಮಾನಿಸಿದ ಅತ್ತೆ ಕುಂಞಕ್ಕ, ಕುಟುಂಬ ಸದಸ್ಯರ ಮನವೊಲಿಸಿ ಸೊಸೆಯ ಮರು ಮದುವೆಗೆ ನಿಶ್ಚಯಿಸಿದರು.

mother in law remarried daughter in law in sullia

ಆದರೆ, ಇದಕ್ಕೆ ಸೊಸೆ ಸುಶೀಲಾ ವಿರೋಧಿಸಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ್ದ ಸುಶೀಲಾ, ಮಗನ ಭವಿಷ್ಯದ ಸಲುವಾಗಿ ಮರು ಮದುವೆ ಆಗದಿರಲು ನಿಶ್ಚಯಿಸಿದ್ದರು. ಆದರೆ ಪತಿಯ ಮನೆಯವರ ಸತತ ಪ್ರಯತ್ನಗಳ ನಂತರ ಒಪ್ಪಿಗೆ ಸೂಚಿಸಿದರು. ಅದರಂತೆ ಕುಂಞಕ್ಕ ಅವರ ಮುತುವರ್ಜಿಯಲ್ಲಿ ಬಂಟ್ವಾಳ ತಾಲ್ಲೂಕಿನ ಕನ್ಯಾನದ ಜಯಪ್ರಕಾಶ್ ಎಂಬುವರೊಂದಿಗೆ ಸುಶೀಲಾರ ವಿವಾಹವನ್ನು ನಿಶ್ಚಯಿಸಲಾಯಿತು. ಗ್ರಾಮದ ಕೋಟೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಕೂಡ ಮಾಡಲಾಯಿತು.

English summary
A mother in law in sullia, remarried her widow daughter in law. By this she set an example for good relationship between mother in law and daughter in law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X