ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಯ ಗುಂಡಿ ಮುಚ್ಚಿ ವಾಹನ ಸವಾರರ ಸಂಕಷ್ಟಕ್ಕೆ ನೆರವಾದ ತಾಯಿ- ಮಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 29: ರಸ್ತೆ ಹಾಳಾದರೆ ನೋಡಿಕೊಳ್ಳುವುದಕ್ಕೆ ಸರ್ಕಾರ ಇದೆ, ತೆರಿಗೆ ಕಟ್ಟುತ್ತೇವೆ. ರಸ್ತೆ ದುರಸ್ಥಿ ಮಾಡುವುದು ನಮ್ಮ ಜವಾಬ್ದಾರಿ ಅಲ್ಲ ಎಂದು ನಾವೆಲ್ಲಾ ದೂರಿರುತ್ತೇವೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರಿಯಡ್ಕದ ತಾಯಿ-ಮಗಳು, ಪ್ರತಿದಿನ ರಸ್ತೆಯ ಹೊಂಡ- ಗುಂಡಿಗಳಲ್ಲಿ ಬೀಳುವ ದ್ವಿಚಕ್ರ ವಾಹನ ಸವಾರರ ಸ್ಥಿತಿಯನ್ನು ನೋಡಲಾಗದೆ, ಬಿರುಸಿನ ಮಳೆಯ ನಡುವೆಯೂ ರಸ್ತೆ ದುರಸ್ತಿ ಮಾಡಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ- ಸುಬ್ರಹ್ಮಣ್ಯ‌ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪ್ರದೇಶದ ಪೆರಿಯಡ್ಕ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ಹೊಂಡ- ಗುಂಡಿಗಳಿಂದ ತುಂಬಿದೆ.

Mangaluru: Mother And Daughter Who Repaired The Road In Periyadka

ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸಂಕಷ್ಟಕ್ಕೆ ಸ್ಥಳೀಯರಾದ ಆಶಾ ಕಾರ್ಯಕರ್ತೆ ಅನಂತಾವತಿ ಮತ್ತು ಆಕೆಯ ತಾಯಿ ಸೇಸಮ್ಮ ಸ್ಪಂದಿಸಿದ್ದು, ರಸ್ತೆಯ ಹೊಂಡ- ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ.

ಅಮ್ಮ- ಮಗಳು ಸುರಿವ ಮಳೆಯಲ್ಲಿ ಗುಂಡಿ ಮುಚ್ಚುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಗುಂಡಿಗಳು ಪ್ರತ್ಯಕ್ಷವಾಗುತ್ತಿದ್ದು, ರಸ್ತೆ ಬದಿಯಲ್ಲೇ ತಾಯಿ ಮಗಳು ಮನೆ ಹೊಂದಿದ್ದಾರೆ.

ಪ್ರತಿದಿನ ಹೊಂಡಕ್ಕೆ ಬಿದ್ದು ಸಾಕಷ್ಟು ಬೈಕ್ ಸವಾರರಿಗೆ ಗಾಯವಾದ ಘಟನೆ ನಡೆಯುತ್ತಿತ್ತು. ಇದರಿಂದಾಗಿ ತಾಯಿ- ಮಗಳು ಹೊಂಡ ಮುಚ್ಚಲು ಮುಂದಾಗಿದ್ದಾರೆ.

Mangaluru: Mother And Daughter Who Repaired The Road In Periyadka
English summary
The mother and daughter of Periyadka of Puttur Taluk, Dakshina Kannada district, has been repaired the road in the midst of rain for social concerns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X