ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಜಿಪನಾಡಲ್ಲಿ ಎಚ್1 ಎನ್1 ಸೋಂಕಿಗೆ ಯುವತಿ ಬಲಿ, 2 ವಾರದಲ್ಲಿ ಮನೆಯ 4 ಮಂದಿ ಸಾವು!

|
Google Oneindia Kannada News

ಮಂಗಳೂರು, ಅಕ್ಟೋಬರ್. 16: ಬಂಟ್ವಾಳದ ಸಜಿಪನಾಡು ಯುವತಿಯೊಬ್ಬಳು ಶಂಕಿತ ಎಚ್1 ಎನ್1 ಸೋಂಕು ಬಾಧಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

ತಾಯಿ ಮತ್ತು ಮಗಳು ಇಬ್ಬರೂ ಈ ಶಂಕಿತ ಎಚ್1 ಎನ್ 1 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಜಿಪನಾಡು ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ.

ಹಂದಿಜ್ವರಕ್ಕೆ ರಾಜ್ಯದಲ್ಲಿ 6 ಮಂದಿ ಬಲಿ: ಪರಮೇಶ್ವರ್ ಆತಂಕಹಂದಿಜ್ವರಕ್ಕೆ ರಾಜ್ಯದಲ್ಲಿ 6 ಮಂದಿ ಬಲಿ: ಪರಮೇಶ್ವರ್ ಆತಂಕ

ಮೃತ ಯುವತಿ ಝರೀನಾ (22) ತೀವ್ರ ಜ್ವರದಿಂದ ನರಳುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ (ಅ.16) ಮೃತಪಟ್ಟಿದ್ದಾಳೆ. ಝಬೀನಾ ಅವರ ತಾಯಿ ಅವ್ವಮ್ಮ ಅಕ್ಟೋಬರ್ 10 ರಂದು ಶಂಕಿತ ಎಚ್1ಎನ್1 ಸೊಂಕಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

Mother and daughter died of suspected H1N1 in Bantwal

ಅವ್ವಮ್ಮ ಶಂಕಿತ ಎಚ್1ಎನ್1 ಸೊಂಕಿನಿಂದ ಮೃತಪಟ್ಟಿರುವುದಾಗಿ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಅವ್ವಮ್ಮ ಅವರ ಮಗಳು ಝುಬೀನಾ ಕೂಡಾ ಎಚ್1ಎನ್1 ಬಾಧಿತರಾಗಿದ್ದರೆಂದು ಈಗ ಶಂಕಿಸಲಾಗಿದ್ದು, ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಸಜಿಪನಡು ಗ್ರಾಮದ ಮತ್ತೋರ್ವ ವ್ಯಕ್ತಿ ಕೂಡ ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ಕಳೆದ ಏಳೆಂಟು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಝರೀನಾ ಅವರ ಮನೆಯ ಯಜಮಾನ ಮಯ್ಯದ್ದಿ ಅಕ್ಟೋಬರ್ 1ರಂದು ಮನೆಯಲ್ಲಿ ಮೃತಪಟ್ಟಿದ್ದರು.

ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳುಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು

ಈ ಮೊದಲು ಝರೀನಾ ನವಜಾತ ಶಿಶು ಕೂಡ ಅಕ್ಟೋಬರ್ 4ರಂದು ಕೊನೆಯುಸಿರೆಳೆದಿತ್ತು. ಎಚ್1ಎನ್1 ಬಾಧಿತ ಅವ್ವಮ್ಮ ಅವರು ಕೂಡ ಅಕ್ಟೋಬರ್ 10ರಂದು ಮೃತಪಟ್ಟಿದ್ದರು. ಎರಡು ವಾರದಲ್ಲಿ ಮನೆಯ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಇಡೀ ಕುಟುಂಬವೇ ತಲ್ಲಣಗೊಂಡಿದೆ.

English summary
Woman from Sajipanadu of Bantwal who was admitted to hospital following suspected H1N1 virus died in the hospital today. The victim identified as Zareena(22) , Zareena's mother Avamma died of suspected H1N1 On October 10 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X