ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷಗಟ್ಟಲೇ ಲೀಟರ್ ನೀರು ಚರಂಡಿ ಪಾಲು:ವೇದವ್ಯಾಸ ಕಾಮತ್ ಬೇಸರ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 25:ಶಕ್ತಿನಗರದ ನೀತಿನಗರದ ಮೂಲಕ ರಾಜೀವನಗರಕ್ಕೆ ಹೋಗುವ ದಾರಿಯಲ್ಲಿ ಪಾಲಿಕೆಯಿಂದ ನಿರ್ಮಿಸಲ್ಪಟ್ಟಿರುವ ಬೃಹತ್ ನೀರಿನ ಟಾಂಕಿಯಿಂದ ದಿನಕ್ಕೆ ಅಸಂಖ್ಯಾತ ಲೀಟರ್ ನೀರು ಪೋಲಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟ

ನೀರು ಪೋಲಾಗಿ ಹೋಗುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿ ತಕ್ಷಣ ಆ ಪ್ರದೇಶಗಳಿಗೆ ಭೇಟಿಯಾಗಿ ಈ ಬಗ್ಗೆ ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳಿಗೆ ಕಾಮತ್ ಜಾಗೃತಿ ಮೂಡಿಸಿದ್ದಾರೆ.

 ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ

ಒಂದೂವರೆಯಿಂದ ಎರಡು ಮೀಟರ್ ನಷ್ಟು ನೀರು ನಿತ್ಯ ವೇಸ್ಟ್ ಆಗುತ್ತಿದ್ದು, ಇದರಿಂದ ಕನಿಷ್ಟ ಐನೂರರಿಂದ ಒಂದು ಸಾವಿರ ಮನೆಗಳ ಅವಶ್ಯಕತೆಗೆ ನಿತ್ಯ ಈ ನೀರು ಸಾಕಾಗುತ್ತಿತ್ತು. ಮರೋಳಿ, ಶಕ್ತಿನಗರ ಬೋಂದೇಲ್, ಪಚ್ಚನಾಡಿ, ಕುಂಜತ್ತಬೈಲ್ ತನಕ ಈ ನೀರು ಪೂರೈಕೆಯಾಗುತ್ತದೆ. ಆದರೆ ಇಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದು ಎರಡು ತಿಂಗಳ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

More than a lakh liters water is wasted in Mangaluru

ಈ ಬಗ್ಗೆ ಮಾತನಾಡಿದ ಕಾಮತ್, ಕಳೆದ ಏಳೆಂಟು ದಿನಗಳಿಂದ ನೀರಿನ ಸಮಸ್ಯೆ ಇದೆ. ಈ ಬಾರಿ ನಿತ್ಯ ಜನರು ನೀರಿಗಾಗಿ ಪರದಾಡುತ್ತಿರುವ ಈ ಸಂದರ್ಭದಲ್ಲಿ ಅಧಿಕಾರಿಗಳ ಕರ್ತವ್ಯ ಮುಖ್ಯ. ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯವಹಿಸಿದ ಕಾರಣ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೇಶನಿಂಗ್ ಮುಖಾಂತರ ಕುಡಿಯಲು ನೀರು ಕೊಡಲಾಗುವುದು ಎನ್ನುವ ಕಾರಣಕ್ಕೆ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಇದರಿಂದ ಜನ ಒಂದು ಕೊಡಪಾನ ನೀರಿಗಾಗಿ ಬೇರೆ ಕಡೆ ಹೋಗುತ್ತಿದ್ದಾರೆ. ಆದರೆ ಇಲ್ಲಿ ಟಾಂಕಿ, ಗೇಟ್ ವಾಲ್ ಎಲ್ಲವೂ ಸೋರಿಕೆಯಾಗಿ ಲಕ್ಷಗಟ್ಟಲೆ ಲೀಟರ್ ನೀರು ಹರಿದು ಚರಂಡಿ ಸೇರುತ್ತಿದೆ ಎಂದು ವೇದವ್ಯಾಸ ಕಾಮತ್ ಬೇಸರ ವ್ಯಕ್ತಪಡಿಸಿದರು.

English summary
More than a lakh liters water is wasted in Rajivanagara road, Mangaluru.On this reason MLA D. Vedavyasa Kamat expressed boredom and said district administration should take appropriate action on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X