ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓವರ್ ಟೇಕ್ ಮಾಡೋ ಭರದಲ್ಲಿ ಬೈಕಂಪಾಡಿಯಲ್ಲಿ ಬಸ್ ಪಲ್ಟಿ: ಹಲವರಿಗೆ ಗಾಯ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್, 11: ಮಂಗಳೂರು ಹೊರವಲಯದಲ್ಲಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೈಕಂಪಾಡಿಯಲ್ಲಿ ಈ ಅಪಘಾತ ಸಂಭವಿಸಿದ್ದು, ವಾಹನ ಒಂದನ್ನು ಓವರ್ ಟೇಕ್ ಮಾಡೋ ಭರದಲ್ಲಿ ಬಸ್ ಪಲ್ಟಿಯಾಗಿದೆ.

ನಿದ್ದೆಗೆ ಜಾರಿದ ಚಾಲಕ: ಮುಧೋಳದಲ್ಲಿ ಮೂವರು ಸ್ಥಳದಲ್ಲೇ ಸಾವುನಿದ್ದೆಗೆ ಜಾರಿದ ಚಾಲಕ: ಮುಧೋಳದಲ್ಲಿ ಮೂವರು ಸ್ಥಳದಲ್ಲೇ ಸಾವು

ಬಸ್ ಸುರತ್ಕಲ್ ಕಡೆಯಿಂದ ಮಂಗಳೂರಿಗೆ ಬರುವಾಗ ಈ ಘಟನೆ ನಡೆದಿದ್ದು, ಚಾಲಕನ ಅಜಾಗರೂಕತೆಯ ಚಾಲನೆಯಿಂದ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಗಾಯಾಳುಗಳನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಾವಣಗೆರೆಯಲ್ಲಿ ಭೀಕರ ಅಪಘಾತ ಬೆಂಗಳೂರಿನ ನಾಲ್ವರ ಸಾವುದಾವಣಗೆರೆಯಲ್ಲಿ ಭೀಕರ ಅಪಘಾತ ಬೆಂಗಳೂರಿನ ನಾಲ್ವರ ಸಾವು

More than 10 people were injured private bus accident

ಬೆಳಗ್ಗಿನ ವೇಳೆಯಾದ ಕಾರಣ ಪ್ರಯಾಣಿಕರಿಂದ ಬಸ್‌ ತುಂಬಿಕೊಂಡಿದ್ದು, ಶಾಲಾ ,ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುತ್ತಿದ್ದವರು ಇದರಲ್ಲಿದ್ದರು. ಅವಘಡ ನಡೆದ ಸ್ಥಳದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ವರದಿಯಾಗಿದೆ.

ಮಡಿಕೇರಿಯಿಂದ ಬರುತ್ತಿದ್ದ ಕಾರು ಸೀದಾ ಮನೆಯೊಳಗೇ ನುಗ್ಗಿತುಮಡಿಕೇರಿಯಿಂದ ಬರುತ್ತಿದ್ದ ಕಾರು ಸೀದಾ ಮನೆಯೊಳಗೇ ನುಗ್ಗಿತು

More than 10 people were injured private bus accident

ಅಪಘಾತದಲ್ಲಿ ಕೆಲವರ ಮೂಳೆ ಮುರಿತಕ್ಕೊಳಗಾಗಿದೆ ಎಂಬ ಸುದ್ದಿಯೂ ತಿಳಿದು ಬಂದಿದೆ. ಅದೃಷ್ಟವಷಾತ್ ಎಲ್ಲಾ ಗಾಯಾಳುಗಳು ಪ್ರಾಯಾಪಾಯದಿಂದ ಪಾರಾಗಿದ್ದಾರೆ.

English summary
More than 10 people were injured private bus accident. Incident occurred in Baikampady near Mangalore. Injured were admitted to the city government Wenlock hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X