ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ ಉಮಾನಾಥ್ ಕೋಟ್ಯಾನ್, ವಿಡಿಯೋ ವೈರಲ್

|
Google Oneindia Kannada News

ಮಂಗಳೂರು ಜುಲೈ 2: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿದ್ದ ಮೂಡಬಿದಿರೆ ನಾಡಕಚೇರಿಯ ಅಧಿಕಾರಿಗಳನ್ನು ಮುಲ್ಕಿ -ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಬಾಲಕಿ ಮೇಲೆ ದೌರ್ಜನ್ಯ; 3 ಪೊಲೀಸರ ಅಮಾನತು ಬಾಲಕಿ ಮೇಲೆ ದೌರ್ಜನ್ಯ; 3 ಪೊಲೀಸರ ಅಮಾನತು

ಸಾರ್ವಜನಿಕರ ಕುಂದು ಕೊರತೆ ನೀಗಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕರು, ನಿನ್ನೆ ಸೋಮವಾರ ಏಕಾಏಕಿ ನಾಡಕಚೇರಿಗೆ ತೆರಳಿದ್ದಾರೆ. ಈ ವೇಳೆ ಜನರು ಸರತಿ ಸಾಲಿನಲ್ಲಿ ನಿಂತದ್ದನ್ನು ಕಂಡ ಶಾಸಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಅವರ ಸಮಸ್ಯೆ ಕೇಳುವವರಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Moodbidre MLA warns officials against negligence

ರನ್ ವೇಯಿಂದ ವಿಮಾನ ಜಾರಿದ ಪ್ರಕರಣ, ತನಿಖೆಗೆ ಖಾದರ್ ಒತ್ತಾಯರನ್ ವೇಯಿಂದ ವಿಮಾನ ಜಾರಿದ ಪ್ರಕರಣ, ತನಿಖೆಗೆ ಖಾದರ್ ಒತ್ತಾಯ

ಸವಲತ್ತುಗಳಿಗಾಗಿ ಅವರು ನಿಮ್ಮಲ್ಲಿ ಗೋಗರೆಯಬೇಕೇ? ಅಧಿಕಾರಿಗಳು ಯಾವಾಗಲೂ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಇನ್ನು ಮೇಲೆ ಕೆಲಸದ ವೇಳೆ ಯಾರಾದರೂ ಮೊಬೈಲ್ ಬಳಸುತ್ತಿರುವುದು ಕಂಡಲ್ಲಿ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

English summary
Moodbidre MLA warns officials against negligence of work ethic in nadakacheri Moodbidre. Video of this incident is viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X