ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಅಬ್ಬರ; ದಿನವಿಡೀ ಧಾರಾಕಾರ ಮಳೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಧಾರಾಕಾರವಾಗಿ ಸುರಿಯುತ್ತಿದ್ದು, ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೇ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.

ಬೆಳ್ತಂಗಡಿ, ಮೂಡಬಿದಿರೆ, ಸುಳ್ಯ, ಪುತ್ತೂರು, ಕಡಬ ಭಾಗದಲ್ಲೂ ಎಡೆಬಿಡದೆ ಮಳೆಯಾಗುತ್ತಿದ್ದು, ಜೂನ್ 14 ಮತ್ತು 15 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಆರೆಂಜ್ ಅಲರ್ಟ್ ಘೋಷಣೆಯನ್ನು ಹವಾಮಾನ‌ ಇಲಾಖೆ‌ ಮಾಡಿದೆ. ಕಳೆದ 24 ಗಂಟೆಯಲ್ಲಿ ಮೂಡಬಿದಿರೆಯಲ್ಲಿ ಅತೀ ಹೆಚ್ಚು ಅಂದರೆ, 30.7 ಮಿಲಿಮೀಟರ್ ಮಳೆಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆ‌ ನೀಡಿದೆ.

ಮಲೆನಾಡಿನಲ್ಲಿ ಮಳೆಯಬ್ಬರ: ಗಾಜನೂರು ಜಲಾಶಯದಿಂದ ತುಂಗಾ ನದಿಗೆ ನೀರು ಬಿಡುಗಡೆಮಲೆನಾಡಿನಲ್ಲಿ ಮಳೆಯಬ್ಬರ: ಗಾಜನೂರು ಜಲಾಶಯದಿಂದ ತುಂಗಾ ನದಿಗೆ ನೀರು ಬಿಡುಗಡೆ

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಹಳ್ಳ- ತೊರೆಗಳೂ ತುಂಬಿ ಹರಿಯುತ್ತಿದೆ. ಮಂಗಳೂರು ನಗರ ಭಾಗದ ಕೆ.ಎಸ್ ರಾವ್ ರೋಡ್, ಗುಜ್ಜರಕೆರೆ, ಲಾಲ್ ಭಾಗ್, ಅಂಬೇಡ್ಕರ್ ವೃತ್ತ ಸೇರಿದಂತೆ ಹಲವೆಡೆ ಡ್ರೈನೇಜ್ ನೀರು, ಮಳೆನೀರು ಜೊತೆ ರಸ್ತೆಯಲ್ಲಿ ಹರಿದಿದ್ದು, ರಸ್ತೆಗಳು ಜಲಾವೃತವಾಗಿದೆ.

Monsoon Rain In Dakshina Kannada District; Torrential Rain Throughout The Day

ಜೂನ್ 17ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನಾಡದೋಣಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಕಡಲ್ಕೊರೆತ ತೀವ್ರವಾಗುವ ಸಾಧ್ಯತೆಗಳಿದ್ದು, ಕಡಲ ತೀರದ ಜನರು ಎಚ್ಚರಿಕೆಯಿಂದ ಇರುವಂತೆಯೂ ಸೂಚಿಸಲಾಗಿದೆ.

ಜೂನ್ 14 ರಂದು ಬೆಳಗ್ಗೆ 8.30ರಿಂದ ಜೂನ್ 17ರ ಬೆಳಗ್ಗೆ 8.30ರವೆರೆಗೆ ಆರೆಂಜ್ ಅಲರ್ಟ್ ಇದ್ದು, ಸಿಡಿಲು ಸಮೇತ ಮಳೆ ಇರಲಿದ್ದು, ಸಮುದ್ರದ ಅಬ್ಬರ ಹೆಚ್ಚಾಗುವ ಸೂಚನೆ ಇದೆ. ಮೊದಲ ಮಳೆಗೇ ಮೆಸ್ಕಾಂಗೆ 38 ಲಕ್ಷ ರೂಪಾಯಿ ನಷ್ಟವುಂಟಾಗಿದೆ.

Monsoon Rain In Dakshina Kannada District; Torrential Rain Throughout The Day

ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿ ಮೃತಪಟ್ಟರೆ, ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿದೆ. ಇದು ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಮಾತ್ರ ಪರಿಹಾರ ಸಿಗಲಿದೆ.

English summary
The Dakshina Kannada district has been experiencing torrential rains since early morning on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X