ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಮೋಕೆದ ಸಿಂಗಾರಿ" ಖ್ಯಾತಿಯ ತುಳು ಸಾಹಿತಿ ಸೀತಾರಾಮ್ ಕುಲಾಲ್ ನಿಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 28: ತುಳು ನಾಡಿನಲ್ಲಿ ಅತ್ಯಂತ ಜನಪ್ರಿಯ ಹಾಡು 'ಮೋಕೆದ ಸಿಂಗಾರಿ' ಸೃಷ್ಠಿಕರ್ತ, ತುಳು ಶಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ತುಳು ಸಾಹಿತಿ ಎಂ.ಕೆ.ಸೀತಾರಾಮ್ ಕುಲಾಲ್ (78) ಭಾನುವಾರ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾರಾಮ್ ಕುಲಾಲ್, ತಮ್ಮ ಸ್ವ ಗೃಹದಲ್ಲಿ ನಿಧನರಾದರು.

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ಯಾನ್ ಮೂಲೆ ಕಾತೊಂದುಲ್ಲೆ ಮರತೇ ಪೋಪನಾ, ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ... ಹೀಗೆ 11 ತುಳು ಚಿತ್ರಗಳಿಗೆ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತಿ ಎಂ.ಕೆ.ಸೀತಾರಾಮ್ ಕುಲಾಲ್ ಸಲ್ಲುತ್ತದೆ.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇನ್ನಿಲ್ಲಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇನ್ನಿಲ್ಲ

ಸೀತಾರಾಮ್ ಕುಲಾಲ್ ಅವರು ಮೊದಲು ದಾಸಿ ಪುತ್ರ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದರು. ಆ ನಂತರ ಪಗೆತ ಪುಗೆ ತುಳು ಚಲನ ಚಿತ್ರಕ್ಕೆ ಸಾಹಿತ್ಯ ನೀಡುವುದರೊಂದಿಗೆ ತುಳು ಚಿತ್ರರಂಗದ ಪ್ರವೇಶಿಸಿದ್ದರು.

Mokeda Singari fame Tulu writer MK Sitaram Kulal passed away

ಅಲ್ಲದೆ ಬಯ್ಯಮಲ್ಲಿಗೆ ಬೊಳ್ಳಿತೋಟ ಉಡಲ್ದ ತುಡರ್ ಬದ್ಕದ ಬಿಲೆ, ಕೋಟಿ ಚೆನ್ನಯ, ಬದಿ ಸೇರಿ ಒಟ್ಟು ಹನ್ನೊಂದು ಚಿತ್ರಗಳಿಗೆ ಅವರು ಸಾಹಿತ್ಯವನ್ನು ನೀಡಿದ್ದಾರೆ. ಸುಮಾರು 17 ಕನ್ನಡ ಚಾರಿತ್ರಿಕ ನಾಟಕ, 6 ಕನ್ನಡ ಪೌರಾಣಿಕ ಸೇರಿ ಒಟ್ಟು 66 ಕೃತಿಗಳನ್ನು ರಚಿಸಿದ್ದಾರೆ.

ನಟರಾಗಿ, ನಾಟಕಕಾರರಾಗಿ, ಸಾಹಿತಿಯಾಗಿ, ನಿರ್ದೇಶಕರಾಗಿ ತುಳು ರಂಗಭೂಮಿಗೆ ಹಾಗೂ ತುಳು ಚಲನ ಚಿತ್ರ ರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಲವಾರು ಸಂಘ- ಸಂಸ್ಧೆಗಳು ಗೌರವಿಸಿದ್ದವು.

English summary
"Mokeda Singari" fame, 78 year old Tulu writer MK Sitaram Kulal passed away on Sunday in his home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X