ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ ಚಲಾಯಿಸಲು ಕುವೈತ್ ನಿಂದ ಮಂಗಳೂರಿಗೆ ಆಗಮಿಸಿದ ಮೋದಿ ಅಭಿಮಾನಿಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 17:ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಗುರುವಾರ (ಏ.18) ಮೊದಲ ಹಂತದ ಮತದಾನ ನಡೆಯಲಿದ್ದು, ಎಲ್ಲಾ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಜನರಿಗೆ ಮತದಾನ ಮಾಡಲು ಅನುಕೂಲವಾಗಲೆಂದು ವಿಶೇಷ ರೈಲು ಹಾಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮೋದಿಗಾಗಿ ಉನ್ನತ ಹುದ್ದೆಯನ್ನೇ ತೊರೆದ ಮಂಗಳೂರಿನ ಯುವಕಆಸ್ಟ್ರೇಲಿಯಾದಲ್ಲಿ ಮೋದಿಗಾಗಿ ಉನ್ನತ ಹುದ್ದೆಯನ್ನೇ ತೊರೆದ ಮಂಗಳೂರಿನ ಯುವಕ

ಗುರುವಾರ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂಬ ಉದ್ದೇಶದಿಂದ ವಿದೇಶದಿಂದಲೂ ಭಾರತೀಯರು ನಾ ಮುಂದು, ತಾ ಮುಂದು ಎಂದು ಆಗಮಿಸುತ್ತಿದ್ದಾರೆ. ಹೌದು, ಇದೀಗ ಕುವೈತ್ ನಲ್ಲಿರುವ ಮೋದಿ ಅಭಿಮಾನಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮಂಗಳೂರಿಗೆ ಆಗಮಿಸುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ? ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

Modis fans have come from Kuwait to Mangalore for casting vote

ಅಪ್ಪಟ ಮೋದಿ ಅಭಿಮಾನಿ ಮೋಹನ್ ದಾಸ್ ಕಾಮತ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ "ಮತ ಚಲಾಯಿಸಲು ಕುವೈತ್ ನಲ್ಲಿರುವ 30ಕ್ಕೂ ಹೆಚ್ಚು ಚೌಕೀದಾರರು ಭಾರತಕ್ಕೆ ಆಗಮಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಅಷ್ಟೇ, ಅಲ್ಲ 'ಮತ್ತೊಮ್ಮೆ ಮೋದಿ' ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ. ಅವರ ಈ ಪೋಸ್ಟ್ ಗೆ ಈಗಾಗಲೇ 49 ಹೆಚ್ಚು ಕಮೆಂಟ್ ಗಳೂ ಬಂದಿದ್ದು, 42ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎರಡು ದಿನಗಳ ಹಿಂದೆಯಷ್ಟೇ ಮೋದಿ ಅಭಿಮಾನಿ, ಮಂಗಳೂರಿನ ಸುರತ್ಕಲ್ ನಿವಾಸಿ ಸುಧೀಂದ್ರ ಹೆಬ್ಬಾರ್ ವೋಟ್ ಹಾಕಲು ತಮ್ಮ ಸಂಸ್ಥೆಯವರು ರಜೆ ಕೊಡಲಿಲ್ಲ ಎಂಬ ಕಾರಣಕ್ಕೆ ಆಸ್ಟ್ರೇಲಿಯಾದಲ್ಲಿ ಉನ್ನತ ಹುದ್ದೆಯನ್ನೇ ತೊರೆದು ಮಂಗಳೂರಿಗೆ ಆಗಮಿಸಿದ್ದನ್ನು ನಾವಿಲ್ಲಿ ಗಮನಿಸಬಹುದು.

English summary
Lok Sabha Election 2019:Prime Minister Narendra Modi's fans have come from Kuwait to Mangalore for casting vote tomorrow in Mangaluru. Here's a short article on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X