ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮೋದಿ ವಿಜಯೋತ್ಸವಕ್ಕಾಗಿ ಯಕ್ಷಗಾನ ಪ್ರದರ್ಶನ ಆಯೋಜನೆ!

|
Google Oneindia Kannada News

ಮಂಗಳೂರು, ಮೇ.08:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ. ಇನ್ನು ಏನಿದ್ದರೂ ಫಲಿತಾಂಶಕ್ಕಾಗಿ ಮೇ 23 ರವರೆಗೆ ಕಾಯಬೇಕಾಗಿದೆ. ದೇಶದ ಇತರ ಭಾಗಗಳಲ್ಲಿ ಇನ್ನು ಎರಡು ಹಂತದ ಚುನಾವಣೆ ನಡೆಯಬೇಕಾಗಿದೆ.

ವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟ

ಆದರೆ ಈ ನಡುವೆ ದೇಶದಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ಕೂಗು ಗಟ್ಟಿಗೊಳ್ಳುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಸಂಭ್ರಮಾಚರಣೆಗೆ ಯಕ್ಷಗಾನ ಬುಕ್ಕಿಂಗ್‌ ಮಾಡಿರುವುದು ಬೆಳಕಿಗೆ ಬಂದಿದೆ.

 ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಂಟ್ವಾಳದಲ್ಲಿ ಮಹಾರುದ್ರ ಯಾಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಂಟ್ವಾಳದಲ್ಲಿ ಮಹಾರುದ್ರ ಯಾಗ

ದೇಶದ ಇತರ ಭಾಗಗಳಲ್ಲಿ ಇನ್ನೂ ಎರಡು ಹಂತದ ಚುನಾವಣೆ ಬಾಕಿಯಿದೆ. ಆದರೆ ಮಂಗಳೂರಿನಲ್ಲಿ 'ನಮೋ ಎಗೈನ್‌, ನಮೋ ಫಿರ್‌ಸೇ, ಟೀಮ್‌ಮೋದಿ, ನಮೋ ಮಿಷನ್‌400 ಪ್ಲಸ್‌' ಟೀಮ್‌ ಗಳು ದೇಶಾದ್ಯಂತ ಬಿಜೆಪಿ ಜಯಭೇರಿ ಬಾರಿಸಿ ಬಹುಮತದೊಂದಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಬುಕ್ಕಿಂಗ್‌ ಮಾಡಿದೆ.

Modi Vijayothsava Yakshagana in Mangaluru

ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದಿಂದ ಮೇ.24 ರಂದು ರಾತ್ರಿ 8:30ಕ್ಕೆ ಮಂಗಳೂರಿನ ರಥಬೀದಿಯಲ್ಲಿ "ಶ್ರೀ ದೇವಿ ಮಹಾತ್ಮ್ಯಂ" ಎಂಬ ಪುಣ್ಯ ಕಥಾ ಪ್ರಸಂಗ ನಡೆಯಲಿದೆ. ಚೌಕಿ ಪೂಜೆಯ ಬಳಿಕ ಅನ್ನಪ್ರಸಾದವೂ ನಡೆಯಲಿದೆ ಎಂದು ಆಮಂತ್ರಣ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

 ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾದಯಾತ್ರೆ ನಡೆಸಿದ ಶಾಸಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾದಯಾತ್ರೆ ನಡೆಸಿದ ಶಾಸಕ

ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಸಂಕಲ್ಪದಿಂದ ಟೀಂ ಮೋದಿ ತಂಡವು ಕಟೀಲು ಮೇಳದವರಿಂದ ಕಳೆದ ಡಿಸೆಂಬರ್ 29ರಂದು ದೇವಿ ಮಹಾತ್ಮ್ಯಂ ಯಕ್ಷಗಾನ ಆಯೋಜಿಸಿತ್ತು.

English summary
Team Modi and other organisations booked Kateelu Durga Parameshwari Vijayothsava yakshagana for Narenadra Modi in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X