• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮೋದಿ' ಮುಖ ನೋಡಿ ಎಂದು ಮತ ಕೇಳುತ್ತಿದ್ದಾರೆ, ಇಂತವರನ್ನು ನಂಬಬಹುದೇ?'

|
   ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿ ಕುಮಾರಸ್ವಾಮಿ | Oneindia Kannada

   ಮಂಗಳೂರು, ಏಪ್ರಿಲ್ 08:ನರೇಂದ್ರ ಮೋದಿ ಒಬ್ಬ ಹೃದಯಹೀನ ಪ್ರಧಾನ ಮಂತ್ರಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

   ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಭಾನುವಾರ (ಏ.07) ಸಂಜೆ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಕೆಲಸ ಮಾಡದಂತೆ ವಾತಾವರಣ ನಿರ್ಮಿಸಲು ಪ್ರಯತ್ನ ನಡೆದಿದೆ. ಎಲ್ಲದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

   ಅಂಬರೀಶ್ ದೇಹಕ್ಕೆ ಅಗ್ನಿಸ್ಪರ್ಶವಾದ ಕೂಡಲೇ ರಾಜಕೀಯ ಆರಂಭವಾಗಿದೆ:ಸಿಎಂ

   ಬಿಜೆಪಿಯವರು ಅಭ್ಯರ್ಥಿಯ ಮುಖ ಅಲ್ಲ, ಎಂದು ಮತ ಕೇಳುತ್ತಿದ್ದಾರೆ. ಇಂತಹ ಬಿಜೆಪಿಯವರನ್ನು ನಾವು ನಂಬಬಹುದೇ? ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ ಅವರು, ಮೋದಿ ಹೆಸರನ್ನು ಕೂಗುವವರಿಗೆ ಮೋದಿ ಏನು ಕೊಟ್ಟಿದ್ದಾರೆಂದು ನನಗಂತು ಗೊತ್ತಿಲ್ಲ?. ಮೋದಿಯವರು ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಐದು ವರ್ಷಗಳಲ್ಲಿ ಮೋದಿ ಗ್ರಾಮೀಣ ಜನರ ಕಷ್ಟ ಅರಿತಿದ್ದಾರಾ? ರೈತರ ಬಗ್ಗೆ ಮೋದಿ ಚರ್ಚೆಯನ್ನೇ ಮಾಡಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ.ಮೈತ್ರಿ ಸರ್ಕಾರ ಮಾದರಿ ಸಾಲಮನ್ನಾ ಮಾಡಿತು. ಮೋದಿಗೆ ರೈತರ ಸಾಲಮನ್ನಾ ಕೆಲಸ ಪಾಪದ ಕೆಲಸವೆಂಬಂತೆ ಬಿಂಬಿಸಲಾಗುತ್ತಿದೆ. 40 ಸಾವಿರ ಕೋಟಿ ಸಾಲಮನ್ನಾವನ್ನು ಮೈತ್ರಿ ಕೂಟ ಮಾಡಿದೆ. ಇದರಿಂದ 44 ಲಕ್ಷ ರೈತ ಕುಟುಂಬಕ್ಕೆ ಮೈತ್ರಿ ಸರ್ಕಾರ ಸಹಾಯ ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

    ನಿಮ್ಮೆದುರು ಯುವ ಅಭ್ಯರ್ಥಿ ಇದ್ದಾರೆ

   ನಿಮ್ಮೆದುರು ಯುವ ಅಭ್ಯರ್ಥಿ ಇದ್ದಾರೆ

   ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ ನಲ್ಲಿ ಈವರೆಗೆ ಕರಾವಳಿ ಬಗ್ಗೆ ಚರ್ಚೆಯಾಗಿಲ್ಲ. ಈವರೆಗೆ ಒಬ್ಬ ನಿಷ್ಕ್ರೀಯ ಸಂಸದರನ್ನು ನೋಡಿದ್ದೀರಿ. ಆದರೆ ಕಾಂಗ್ರೆಸ್ ಈ ಬಾರಿ ಉತ್ತಮ ಯುವ ಅಭ್ಯರ್ಥಿಯನ್ನು ನಿಮ್ಮೆದುರು ಇಟ್ಟಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಕರೆ ನೀಡಿದರು.

    ಈ ಸಲದ ಚುನಾವಣೆ ಭಾವನಾತ್ಮಕವಲ್ಲ

   ಈ ಸಲದ ಚುನಾವಣೆ ಭಾವನಾತ್ಮಕವಲ್ಲ

   ಬಿಜೆಪಿ ಭಾರತ ದೇಶಕ್ಕೆ, ಜನರಿಗೆ ದ್ರೋಹ ಮಾಡಿದೆ. ದೇಶದ ಜನರ ನಿರೀಕ್ಷೆಯನ್ನು ಮೋದಿ ಹುಸಿಗೊಳಿಸಿದ್ದಾರೆ. ಈ ಸಲದ ಚುನಾವಣೆ ಭಾವಾನಾತ್ಮಕವಲ್ಲ. ಈ ಸಲದ ಚುನಾವಣೆ ಆತ್ಮಾವಲೋಕನ ಮಾಡುವಂತದ್ದು ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.

   'ರಸ್ತೆಯಂಚಲ್ಲಿ ನಿಂತು ಮೋದಿ ಎಂದು ಕೂಗಿದ ಮಾತ್ರಕ್ಕೆ ಪ್ರಧಾನಿಯಾಗಲ್ಲ'

    ಸೈನಿಕರ ಮನೆಗೆ ಹೋಗಲು ಸಮಯವಿಲ್ಲ

   ಸೈನಿಕರ ಮನೆಗೆ ಹೋಗಲು ಸಮಯವಿಲ್ಲ

   ಕಳೆದ 5 ವರ್ಷದಲ್ಲಿ ಯುವಜನತೆ, ಕಾರ್ಮಿಕ, ಮಹಿಳೆಯರ ಬಗ್ಗೆ ಚರ್ಚೆಯಾಗಿದ್ಯಾ? ಹೊಟ್ಟೆ ತುಂಬಿಸುವ ಕೆಲಸವನ್ನು ಎನ್ ಡಿಎ ಸರ್ಕಾರ ಮಾಡಿದ್ಯಾ? ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಚರ್ಚಿಸಲು ಮೋದಿ ಅವರಲ್ಲಿ ಸಮಯವಿಲ್ಲ. ಆದರೆ ಪಾಕ್ ಪ್ರಧಾನಿ ಮೊಮ್ಮಗಳ ಬರ್ತ್ ಡೇಗೆ ಹೋಗಲು ಮೋದಿಗೆ ಟೈಮ್ ಇದೆ. ಆದರೆ ಉಗ್ರ ದಾಳಿಯಲ್ಲಿ ಹತ್ಯೆಯಾದ ಸೈನಿಕರ ಮನೆಗೆ ಹೋಗಲು ಮೋದಿಗೆ ಸಮಯವಿಲ್ಲ ಎಂದು ಖಾದರ್ ವಾಗ್ದಾಳಿ ನಡೆಸಿದರು.

    ಪಕೋಡಾ ಮಾರಿ ಜೀವನ ನಡೆಸಲು ಹೇಳಬೇಕೇ?

   ಪಕೋಡಾ ಮಾರಿ ಜೀವನ ನಡೆಸಲು ಹೇಳಬೇಕೇ?

   ಮೋದಿ ನೇತೃತ್ವದ ಸರ್ಕಾರ ವೈಫಲ್ಯತೆಗಳ ಆಗರ. ವಾಯುದಾಳಿ ಇಟ್ಕೊಂಡು ಯಡಿಯೂರಪ್ಪ ಮತ ಲೆಕ್ಕ ಹಾಕುತ್ತಾರೆ ಎಂದ ಖಾದರ್, ಪಿಡಿಪಿ ಜೊತೆಗೆ ಮೈತ್ರಿ ಮಾಡಿಕೊಂಡದ್ದು ಬಿಜೆಪಿ. ಪಿಡಿಪಿ ಉಗ್ರ ಚಟುವಟಿಕೆಗೆ ಬೆಂಬಲ ಕೊಡುವ ಪಕ್ಷ.ಆದರೂ ಬಿಜೆಪಿ ಅವರಲ್ಲಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು. ಆದರೆ ಈಗ ಪಾಕಿಸ್ತಾನದ ಹೆಸರಿನಲ್ಲಿ ಮೋದಿ ಮತ ಕೇಳುತ್ತಿದ್ದಾರೆ. ಪಕೋಡಾ ಮಾರಿ ಜೀವನ ನಡೆಸಲು ಮೋದಿ ಹೇಳಬೇಕೇ? ಪ್ರಧಾನಿಯಾಗಿ ಮೋದಿ ಏನು ಮಾಡಿದ್ದಾರೆ ? ಎಂದು ಕಿಡಿಕಾರಿದರು.

   ಪೇಜಾವರ ಸ್ವಾಮೀಜಿ ಆಶೀರ್ವಾದ ಪಡೆದ ಸಿಎಂ ಕುಮಾರಸ್ವಾಮಿ

   English summary
   Addressing election campaign rally in Sullia on April 07 CM Kumaraswamy slammed BJP and PM Modi. He said Narendra Modi is a heartless Prime Minister.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more