ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ನ್ಯೂರೋ ಸೆನ್ಸರಿ ಡೆವಲಪ್ಮೆಂಟ್ ಥೆರಪಿ ಸಂಚಾರಿ ಘಟಕ

|
Google Oneindia Kannada News

ಮಂಗಳೂರು, ಆ 9: ಸೇವಾಭಾರತಿ ಮಂಗಳೂರು, ಇದರ ವತಿಯಿಂದ ನ್ಯೂರೋ ಸೆನ್ಸರಿ ಡೆವಲಪ್ಮೆಂಟ್ ಥೆರಪಿ ಸಂಚಾರಿ ಘಟಕ ಇದೇ ಅಗಸ್ಟ್ 10, ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಮಂಗಳೂರಿನ ವಿಟಿ ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ನ್ಯೂರೋ ಸೆನ್ಸರಿ ಡೆವಲಪಮೆಂಟ್ ಥೆರಪಿ ಘಟಕವನ್ನು ಉದ್ಘಾಟಿಸಲಿದ್ದಾರೆ.

ಆಗಸ್ಟ್ 11ರ ವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದುಆಗಸ್ಟ್ 11ರ ವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದು

ಎಂಆರ್ ಪಿಎಲ್ ಸಮೂಹ ಪ್ರಭಂದಕ (ಮಾನವ ಸಂಪನ್ಮೂಲ) ಬಿ.ಎಚ್.ವಿ. ಪ್ರಸಾದ್ ಅವರು ಎಂಆರ್ ಪಿಎಲ್ ವತಿಯಿಂದ ನೀಡಲಾಗುವ ಬಸ್ ಅನ್ನು ಸೇವಾಭಾರತಿಗೆ ಹಸ್ತಾಂತರಿಸಲಿದ್ದಾರೆ. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

Mobile Neurosensory Development Therapy Center In Mangaluru Starting From Aug 10

ನ್ಯೂರೋ ಸೆನ್ಸರಿ ಡೆವಲಪ್ ಮೆಂಟ್ ಥೆರಪಿ ಸಂಚಾರಿ ಘಟಕ ಸುಧಾರಿತ ಫಿಸಿಯೋಥೆರಪಿ ಚಿಕಿತ್ಸಾ ವ್ಯವಸ್ಥೆ ಇಲ್ಲದಿರುವ ಗ್ರಾಮೀಣ ಪ್ರದೇಶಗಳಲ್ಲಿ ದಿವ್ಯಾಂಗರ ಮನೆ ಬಾಗಿಲಿಗೆ ಭೇಟಿ ಕೊಟ್ಟು, ಮಕ್ಕಳ ಎಳವೆಯಲ್ಲಿಯೇ ವೈಕಲ್ಯಗಳ ಪತ್ತೆ ಹಚ್ಚುವಿಕೆ, ಅವಶ್ಯಕ ಫಿಸಿಯೋಥೆರಪಿ ಮತ್ತು ಸ್ವೀಚ್ ಥೆರಪಿ ಚಿಕಿತ್ಸೆ ಕೊಡುವುದು ಮತ್ತು ಅನುವರ್ತಿ ಕಾರ್ಯ ಕೈಗೊಳ್ಳುವುದು ಮಾಡಲಿದೆ.

ಮಂಗಳೂರಿನಿಂದ 56 ಕಿ.ಮೀ ವ್ಯಾಪ್ತಿಯಲ್ಲಿರುವ ಬಿ.ಸಿ.ರೋಡ್, ಬಂಟ್ವಾಳ, ಪುತ್ತೂರು, ಗುರುಪುರಕ್ಕೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಹೋಗಿ ಫಿಸಿಯೋಥೆರಪಿ ಹಾಗೂ ಸ್ವೀಚ್ ಥೆರಪಿಗೆ ಹಲವಾರು ವರ್ಷಗಳಿಂದ ಚಿಕಿತ್ಸೆ ಕೊಡಲಾಗುತ್ತಿರುವುದು ಇದರ ಉಪಯುಕ್ತತೆಯನ್ನು ಹೆಚ್ಚಿಸಲು, ಸರಕಾರದ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನದ ಸಹಕಾರದಿಂದ ಫಲಾನುಭವಿಗಳ ವ್ಯಾಪ್ತಿ ಕ್ಷೇತ್ರವನ್ನು ವಿಸ್ತರಿಸಲಾಗುವುದು.

ಪಚ್ಚಡನಾಡಿಯಲ್ಲಿ ಕುಸಿಯುತ್ತಿದೆ ಕಸದ ರಾಶಿ, ಹೆಚ್ಚುತ್ತಿದೆ ಆತಂಕ ಪಚ್ಚಡನಾಡಿಯಲ್ಲಿ ಕುಸಿಯುತ್ತಿದೆ ಕಸದ ರಾಶಿ, ಹೆಚ್ಚುತ್ತಿದೆ ಆತಂಕ

ಸೆರೆಬ್ರಲ್ ಪಾಲ್ಸಿ, ಡಿಲೇಯ್ಡ್ ಮೈಲ್ ಸ್ಟೋನ್, ಡೌನ್ ಸಿಂಡ್ರೋಮ್, ಕಾಟಿಸಂ ಡಿಸಾರ್ಡರ್ ಇರುವ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುವುದು. ಕಿರು ವಯಸ್ಸಿನಲ್ಲಿಯೇ ನ್ಯೂನತೆಯನ್ನು ಪತ್ತೆ ಹಚ್ಚುವಿಕೆಯಲ್ಲಿ ಶಿಕ್ಷಕರಿಗೆ ವರ್ಗಗಳನ್ನು ನಡೆಸುವುದು ಮತ್ತು ಹೆತ್ತವರಿಗೆ ಸಲಹೆ, ಸೂಚನೆಗಳನ್ನು ಕೊಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಸೇವಾಭಾರತಿ ಪ್ರಕಟನೆ ತಿಳಿಸಿದೆ.

English summary
Mobile Neurosensory Development Therapy Center In Mangaluru Starting From Aug 10. This will cover 56 k.m radius from Mangaluru City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X