ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ನಾಯಕರ ಯತ್ನ ಯಶಸ್ವಿಯಾಗುವುದಿಲ್ಲ: ಐವನ್ ಡಿಸೋಜಾ

|
Google Oneindia Kannada News

ಮಂಗಳೂರು, ಜನವರಿ 15: ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ಸಂವಿಧಾನ ವಿರೋಧಿಯಾಗಿದೆ. ಸರಕಾರ ಬೀಳಿಸಲು ಮುಂದಾಗಿರುವ ಬಿಜೆಪಿಯಲ್ಲೇ ಸರ್ಜರಿ ಆಗಲಿದೆ ಹೊರತು ಬಿಜೆಪಿಯಿಂದ ಸರಕಾರದ ಸರ್ಜರಿ ಅಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್

ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದೆಲ್ಲೆಡೆ ಇಂದು ಸಂಕ್ರಾತಿ ಹಬ್ಬ ಆಚರಣೆಯಾಗುತ್ತಿದೆ. ರೈತರು, ಜನರ ಜತೆ ಇರಬೇಕಾಗಿದ್ದ ಬಿಜೆಪಿಯ ಶಾಸಕರು ಫೈವ್‌ಸ್ಟಾರ್ ಹೊಟೇಲ್ ನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅತೃಪ್ತಿ ಇದೆಯಾದರೂ ಪಕ್ಷ ಬಿಡಲ್ಲ ಎಂದ ಜೆಡಿಎಸ್ ಶಾಸಕಅತೃಪ್ತಿ ಇದೆಯಾದರೂ ಪಕ್ಷ ಬಿಡಲ್ಲ ಎಂದ ಜೆಡಿಎಸ್ ಶಾಸಕ

ಕಾರ್ಮಿಕರ, ಬಡವರ ಪರ ಇರುವ ಸರಕಾರವನ್ನು ಬೀಳಿಸುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಲೇ ಬಂದಿದೆ. ಬಿಜೆಪಿಯು ಶಾಸಕರಿಗೆ ಸಚಿವ , ನಿಗಮ ಮಂಡಳಿ ಸ್ಥಾನಮಾನ ಸೇರಿದಂತೆ 50 ಕೋಟಿ ರೂಪಾಯಿ ಆಮಿಷವನ್ನು ಒಡ್ಡುತ್ತಿದೆ. ಆದರೆ ಬಿಜೆಪಿ ನಾಯಕರ ಯತ್ನ ಯಶಸ್ವಿಯಾಗುವುದಿಲ್ಲ. ಜನರು ಮುಂದಿನ ಲೋಕಸಭೆಯಲ್ಲಿ ಬಿಜೆಪಿಯ ಈ ಮೋಸದಾಟಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

MLC Ivan dsouza slammed BJP over Operation Kamala

ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಯ ಅಧಿಕಾರ ದಾಹಕ್ಕೆ ರಾಜ್ಯದ ಜನತೆ, ಶಾಸಕರು ಸೊಪ್ಪು ಹಾಕುವುದಿಲ್ಲ. ಈ ಹಿಂದೆ ಆಪರೇಶನ್ ಕಮಲ ಮಾಡಿ ಯಾವ ರೀತಿ ಸರಕಾರ ನಿರ್ವಹಿಸಲಾಗಿತ್ತು ಎಂಬುದು ಜನತೆ ತಿಳಿದಿದೆ ಎಂದು ಐವನ್ ಡಿಸೋಜಾ ಟೀಕಿಸಿದರು.

English summary
MLC Ivan d'souza slammed BJP over Operation Kamala. He said BJP attempting to destabilies the coalition government . But unfortunately it will not fetch any positive result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X