ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದೆಂಥ ರಸ್ತೆ; ವೈರಲ್ ಆದ ಮಿಥುನ್ ರೈ #ROADChallenge ಪೋಸ್ಟ್

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 28: ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ವಿವಿಧ ಚಾಲೆಂಜ್‌ಗಳು ಈಗ ಸದ್ದು, ಸುದ್ದಿ ಮಾಡುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನಾಯಕ ಆರಂಭಿಸಿದ ಚಾಲೆಂಜ್‌ನ ಫೋಟೋಗಳು ವೈರಲ್ ಆಗುತ್ತಿವೆ.

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರಂಭಿಸಿರುವ #ROADChallenge ಈಗ ವೈರಲ್ ಆಗುತ್ತಿದೆ. ಕೆಟ್ಟು ಹೋದ ರಸ್ತೆಗಳನ್ನು ದುರಸ್ತಿ ಮಾಡಿಸಿ ಎಂದು ಸಂಬಂಧಪಟ್ಟವರಿಗೆ ತಿಳಿಸುವುದೇ ಈ ಚಾಲೆಂಜ್ ಉದ್ದೇಶ.

 ಬಳ್ಳಾರಿ; ಏಕಾಏಕಿ ಕುಸಿದ ತುಂಗಭದ್ರಾ ನದಿ ಸೇತುವೆ ರಸ್ತೆ ಬಳ್ಳಾರಿ; ಏಕಾಏಕಿ ಕುಸಿದ ತುಂಗಭದ್ರಾ ನದಿ ಸೇತುವೆ ರಸ್ತೆ

ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ. ಕಾಸರಗೋಡು, ಕೇರಳ, ಹಾಸನ ಸೇರಿದಂತೆ ವಿವಿಧ ಜಿಲ್ಲೆಯ ಜೊತೆ ಗಡಿಯನ್ನು ಹಂಚಿಕೊಂಡಿದೆ. ವಾಣಿಜ್ಯ ವಹಿವಾಟಿಗೆ ಖ್ಯಾತಿ ಪಡೆದಿರುವ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳು ಸರಿ ಇಲ್ಲ.

ರಸ್ತೆ ವಿಸ್ತರಣೆ ಕಾಮಗಾರಿಗೆ ಒತ್ತಾಯಿಸಿ ಕೆಜಿಎಫ್ ಶಾಸಕಿ ಏಕಾಂಗಿ ಪ್ರತಿಭಟನೆರಸ್ತೆ ವಿಸ್ತರಣೆ ಕಾಮಗಾರಿಗೆ ಒತ್ತಾಯಿಸಿ ಕೆಜಿಎಫ್ ಶಾಸಕಿ ಏಕಾಂಗಿ ಪ್ರತಿಭಟನೆ

ಮಿಥುನ್ ರೈ ತಮ್ಮ ಫೇಸ್ ಬುಕ್‌ನಲ್ಲಿ ಹಾಳಾಗಿರುವ ರಸ್ತೆಗಳ ಪೋಟೋಗಳನ್ನು ಹಾಕುತ್ತಿದ್ದಾರೆ. ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ್ ಕಟೀಲ್, ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಟ್ಯಾಗ್ ಮಾಡುತ್ತಿದ್ದಾರೆ.

ರಸ್ತೆ ಕಾಮಗಾರಿ ವಿಳಂಬ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ನಾಗೇಂದ್ರರಸ್ತೆ ಕಾಮಗಾರಿ ವಿಳಂಬ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ನಾಗೇಂದ್ರ

ಏನಿದು ರೋಡ್ ಚಾಲೆಂಜ್

ಏನಿದು ರೋಡ್ ಚಾಲೆಂಜ್

ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಚಿತ್ರಗಳನ್ನು ಮಿಥುನ್ ರೈ ತಮ್ಮ ಫೇಸ್‌ ಬುಕ್ ಪುಟದಲ್ಲಿ #ROADChallenge ಹ್ಯಾಷ್ ಟ್ಯಾಗ್ ಬಳಕೆ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಈ ಪೋಸ್ಟ್‌ಗಳು ಶೇರ್ ಆಗುತ್ತಿವೆ. ಜನರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಯಾವ-ಯಾವ ರಸ್ತೆಗಳು

ಯಾವ-ಯಾವ ರಸ್ತೆಗಳು

ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮಂಗಳೂರು ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಚಿತ್ರಗಳನ್ನು ತೆಗೆದು #ROADChallenge ಎಂದು ಮಿಥುನ್ ರೈ ಹಾಕಿದ್ದಾರೆ. ಸಂಸದರು, ಕೇಂದ್ರ ಸಚಿವರನ್ನ ಇದಕ್ಕೆ ಟ್ಯಾಗ್ ಮಾಡಿದ್ದಾರೆ.

ದುರಸ್ತಿಯಾಗಬೇಕಿದೆ ರಸ್ತೆ

ದುರಸ್ತಿಯಾಗಬೇಕಿದೆ ರಸ್ತೆ

ಮಿಥುನ್ ರೈ ಹಾಕಿರುವ ಪೋಸ್ಟ್‌ನಲ್ಲಿರುವ ರಸ್ತೆಗಳು ತುಂಬಾ ಹದಗೆಟ್ಟಿವೆ. ವಾಹನ ಸವಾರರು ಈ ರಸ್ತೆಯಲ್ಲಿ ಹೇಗೆ ಸಂಚಾರ ಮಾಡುತ್ತಾರೆ? ಎಂಬುದು ಅವರಿಗೆ ಗೊತ್ತು. ಈ ರಸ್ತೆಗಳನ್ನು ರಿಪೇರಿ ಮಾಡಿಸಿ ಎಂದು #ROADChallenge ಹಾಕುತ್ತಿದ್ದಾರೆ. ಈ ಪೋಸ್ಟ್‌ಗಳಿಗೆ ಹಲವಾರು ಕಮೆಂಟ್‌ಗಳು ಬಂದಿವೆ.

ಚುನಾವಣೆಗೆ ನಿಂತಿದ್ದರು

ಚುನಾವಣೆಗೆ ನಿಂತಿದ್ದರು

ಮಿಥುನ್ ರೈ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನಾಯಕ. 2019ರ ಲೋಕಸಭೆ ಚುನಾವಣೆಗೆ ಅವರು ದಕ್ಷಿಣ ಕನ್ನಡದಿಂದ ಕಣಕ್ಕಿಳಿದಿದ್ದರು. 4,99,664 ಮತಗಳನ್ನು ಪಡೆದು ನಳಿನ್ ಕುಮಾರ್ ಕಟೀಲ್ ವಿರುದ್ಧ ಪರಾಭವಗೊಂಡಿದ್ದರು.

English summary
Youth Congress president of Dakshina Kannada Mithun Rai #ROADChallenge post goes viral on social media. He posted photos of bad roads that connects Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X