ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃದ್ಧ ದಂಪತಿಗೆ ನೆರವಾಗಿ ಮಾನವೀಯತೆ ಮೆರೆದ ಸಚಿವ ಯುಟಿ ಖಾದರ್

|
Google Oneindia Kannada News

ಮಂಗಳೂರು, ನವೆಂಬರ್ 02 : ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ತಮ್ಮ ಕ್ಷೇತ್ರದ ಅಶಕ್ತ ವೃದ್ಧ ದಂಪತಿಗಳಿಗೆ ನೆರವಾಗಿ ಮಾನವೀಯತೆ ಮೆರೆದ್ದಾರೆ.

ಸಚಿವ ಯು.ಟಿ.ಖಾದರ್ ಮಾನವೀಯತೆಗೆ ಸಲಾಂಸಚಿವ ಯು.ಟಿ.ಖಾದರ್ ಮಾನವೀಯತೆಗೆ ಸಲಾಂ

ಸಚಿವ ಯು.ಟಿ.ಖಾದರ್ ತಮ್ಮ ಕ್ಷೇತ್ರದ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಪಲಗೆ ಭೇಟಿ ನೀಡಿದ್ದ ವೇಳೆ ವಯೋ ವೃದ್ದ ದಂಪತಿಗೆ ರೇಶನ್ ಕಾರ್ಡ್ ಮಾಡಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Minister UT Khader helped to elderly couples to get ration card

ಇತ್ತೀಚೆಗೆ ಕುಂಪಲ ಪರಿಸರದಲ್ಲಿ ರಸ್ತೆ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಅಮೃತ ನಗರದ ಬಳಿ ಸಚಿವರ ಕಾರನ್ನು ಕಂಡು ಕುಂಟುತ್ತಾ ಬಂದ 79 ವರ್ಷ ಪ್ರಾಯದ ಯಶವಂತ ಆಚಾರಿ ಅವರನ್ನು ನೋಡಿ ಸಚಿವರು ತಮ್ಮ ಕಾರನ್ನು ನಿಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ತನ್ನ ಅಳಲನ್ನು ತೋಡಿಕೊಂಡ ಯಶವಂತ ಆಚಾರಿ, ತನ್ನ ಬಳಿ ರೇಶನ್ ಕಾರ್ಡ್ ಇಲ್ಲ, ಜೀವನ ನಡೆಸಲು ಕಷ್ಟವಾಗಿದೆ. ತನ್ನ ಪತ್ನಿ ಪಾರ್ಶ್ವವಾಯು ಪೀಡಿತೆ. ಆದ್ದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಆಹಾರ ಸಚಿವ ಯು.ಟಿ.ಖಾದರ್ ವೃದ್ಧ ದಂಪತಿಗಳ ಅಳಲನ್ನು ಆಲಿಸಿ ತಮ್ಮ ಆಪ್ತರಿಗೆ ಈ ವಯೋ ವೃದ್ದ ದಂಪತಿಗಳ ಮನೆಗೆ ತೆರಳಿ ರೇಶನ್ ಕಾರ್ಡ್ ಮಾಡಿ ಕೊಡಲು ತಿಳಿಸಿದರು.

Minister UT Khader helped to elderly couples to get ration card

ಈ ಸಂದರ್ಭದಲ್ಲಿ ಮನೆಯಲ್ಲಿ ದಂಪತಿಗಳ ಬೆರಳಚ್ಚು ಪಡೆಯಲು ಸಾದ್ಯವಾಗದಿದ್ದಾಗ. ಸಚಿವರ ಆಪ್ತರು ತಮ್ನದೇ ವಾಹನದಲ್ಲಿ ದೇರಳಕಟ್ಟೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ರೇಶನ್ ಕಾರ್ಡ್ ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೂ ಈ ವೃದ್ಧ ದಂಪತಿಗೆ ಸರಕಾರದಲ್ಲಿ ಸಿಗುವ ಅನಿಲ ಬಾಗ್ಯ ಯೋಜನೆಯಲ್ಲಿ ಗ್ಯಾಸ್ ನೀಡುವ ಭರವಸೆಯನ್ನು ಖಾದರ್ ನೀಡಿದರು. ರೇಶನ್ ಕಾರ್ಡ್ ದೊರೆಯುತ್ತಿದ್ದಂತೆ ವೃದ್ಧ ದಂಪತಿ ಬಾವುಕರಾಗಿ ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ವಯೋ ವೃದ್ಧ ದಂಪತಿಗೆ ಸಚಿವ ಯುಟಿ ಖಾದರ್ ಆಸರೆಯಾದ ಫೋಟೋಗಳು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು. ಅವರ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

English summary
The Karnataka state food and civil supplies minister UT Khader has been exposed to humanitarian aid to his disadvantaged elderly couple. Minister UT Khader has recently visited Kumpala, Someshwar Gram Panchayat in his constituency and helped an elderly couples to get thier ration card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X