ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇತುವೆ ಧ್ವಂಸ ಮಾಡಿದ ದುಷ್ಕರ್ಮಿಗಳ ಬಂಧನಕ್ಕೆ ಕ್ರಮ : ಯು ಟಿ ಖಾದರ್

|
Google Oneindia Kannada News

ಮಂಗಳೂರು ಫೆಬ್ರವರಿ 02: ದುಷ್ಕರ್ಮಿಗಳಿಂದ ಧ್ವಂಸಗೊಂಡ ಪಾವೂರು ಸೇತುವೆ ಪ್ರದೇಶಕ್ಕೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಉಳಿಯ -ಪಾವೂರು ಪ್ರದೇಶ ಜನರೊಂದಿಗೆ ಮಾತುಕತೆ ನಡೆಸಿ ಆ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸ್ ದೂರು ನೀಡಿದಕ್ಕೆ ಈ ದಾಂಧಲೆ ನಡೆಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸಚಿವ ಯು ಟಿ ಖಾದರ್ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸ ಸಚಿವ ಯು ಟಿ ಖಾದರ್ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸ

ನಂತರ ಮಾತನಾಡಿದ ಸಚಿವ ಯು ಟಿ ಖಾದರ್ ಜನರೇ ನಿರ್ಮಿಸಿದ್ದ ಸೇತುವೆ ಧ್ವಂಸ ಮಾಡಿದರನ್ನು ಬಂಧಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಕ್ರಮ ಮರುಳುಗಾರಿಕೆ ಬಗ್ಗೆಯೂ ಮಾತನಾಡಿದ ಅವರು, ಅಕ್ರಮ ಮರಳುಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಗಾಗಲೇ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕೃತ್ಯ ಜಿಲ್ಲಾಡಳಿತಕ್ಕೆ ಎಸೆದಿರುವ ಸವಾಲು ಎಂದು ಪ್ರತಿಕ್ರಿಯಿಸಿದರು.

minister U T Khadar visited Pavoor Uliya

ಯು ಟಿ ಖಾದರ್ ಪ್ರತಿನಿಧಿಸುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸರ್ಕಾರ ಭರವಸೆಯಿಂದ ಕಾದು ಸುಸ್ತಾದ ಪಾವೂರು ಪರಿಸರದ ಜನ ಇತ್ತೀಚೆಗೆ ತಮ್ಮ ಗ್ರಾಮ, ಕ್ಕೆ ತಾವೇ ಸೇತುವೆ ನಿರ್ಮಿಸಿದ್ದರು.ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಜನರು ನಿರ್ಮಿಸಿದ್ಗ ಸೇತುವೆಯನ್ನು ಧ್ವಂಸ ಗೊಳಿಸಿದ್ದರು. ಪಾವೂರು -ಉಳಿಯ ಪರಿಸರದಲ್ಲಿ ಅಕ್ರಮ ಮರಳು ತೆಗೆಯೋದರ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದುರು.

ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಅಧಿಕಾರಿಗಳು 5 ಬೋಟ್ ವಶಪಡಿಸಿಕೊಂಡಿದ್ದರು.ಇದರ ದ್ವೇಷವನ್ನು ಗ್ರಾಮದ ಜನರ ಮೇಲೆ ತೀರಿಸಿರುವ ಮರಳು ದಂಧೆಕೋರರು,ಜನರೇ ನಿರ್ಮಿಸಿದ ಸೇತುವೆಯನ್ನು ಧ್ವಂಸ ಮಾಡಿದ್ದರು.ಸೇತುವೆ ಪಕ್ಕ ನಿಲ್ಲಿಸಿದ್ದ ಆಟೋ ರಿಕ್ಷಾ ಬೈಕ್ ಗಳನ್ನು ಪುಡಿ ಪುಡಿ ಮಾಡಿದ್ದರು.

English summary
Dakshina Kannada District incharge minister U T Khadar Vsited today visisted Pavoor Uliya where temporary Bridge built by resident destroyed by miscreants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X