ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡೆಗೆ ಚಾಲನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 26 : ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆನರಾ ಸರ್ಫಿಂಗ್ ಮತ್ತು ಜಲಕ್ರೀಡೆ ಉತ್ತೇಜನಾ ಸಂಸ್ಥೆ, ಮಂತ್ರ ಸರ್ಫ್ ಕ್ಲಬ್ ಸಹಭಾಗಿತ್ವದ ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಇಂದು (ಮೇ 26) ಚಾಲನೆ ದೊರೆತಿದೆ.

ರಾಜ್ಯ ಅರಣ್ಯ ಹಾಗೂ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, "ಸರ್ಫಿಂಗ್ ಗೆ ವಿದೇಶದಲ್ಲಿ ಸಿಗುತ್ತಿರುವಷ್ಟು ಮನ್ನಣೆ ನಮ್ಮಲ್ಲಿ ಸಿಗುತ್ತಿಲ್ಲ. ಈ ಕಾರಣದಿಂದ ಸಸಿಹಿತ್ಲು ಬೀಚ್‌ನಲ್ಲಿ ಕಳೆದ ವರ್ಷದಿಂದ ಸರ್ಫಿಂಗ್ ಗೆ ವಿಶೇಷ ಮುತುವರ್ಜಿ ವಹಿಸಲಾಗುತ್ತಿದೆ. ಇಲ್ಲಿ ಸರ್ಫಿಂಗ್ ಅನ್ನು ಬೆಳೆಸಲು ಸರಕಾರ ಹೆಚ್ಚಿನ ಸಹಕಾರ ನೀಡುತ್ತಿದೆ" ಎಂದರು.

ಸಸಿಹಿತ್ಲು ಬಳಿಯ ಕಡಲ ತೀರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ರಾಯಭಾರಿಯಾಗಿದ್ದು ಮೇ 26 ರಿಂದ 28ರ ವರೆಗೆ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟ ನಡೆಯಲಿದೆ.[ದೇಶದ ಅತಿ ದೊಡ್ಡ ಸರ್ಫಿಂಗ್ ಸಾಹಸಕ್ಕೆ ಸಜ್ಜಾದ ಸಸ್ಲಿಹಿತ್ಲು]

 ಸರ್ಫಿಂಗ್ ಉದ್ಘಾಟನೆಯಲ್ಲಿ ಹಲವರು ಭಾಗಿ

ಸರ್ಫಿಂಗ್ ಉದ್ಘಾಟನೆಯಲ್ಲಿ ಹಲವರು ಭಾಗಿ

ಸರ್ಫಿಂಗ್ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಕವಿತಾ ಸನಿಲ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಕೆನರಾ ವಾಟರ್ ಸ್ಪೋರ್ಟ್ಸ್ ಆಂಡ್ ಪ್ರಮೋಶನ್ಸ್ ಕೌನ್ಸಿಲ್ ಅಧ್ಯಕ್ಷ ಮನೋಹರ್ ಶೆಟ್ಟಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ಸರ್ಫಿಂಗ್ ಫೆಸ್ಟಿವಲ್ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು

ಸರ್ಫಿಂಗ್ ಫೆಸ್ಟಿವಲ್ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು

ಕಡಲಕಿನಾರೆಯಲ್ಲಿ ಅತ್ಯಾಕರ್ಷಕ ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಬೀಚ್ ವಾಲಿಬಾಲ್ ಸಹಿತ ವಿವಿಧ ಕ್ರೀಡಾಕೂಟಗಳು, ರುಚಿಕರ ಆಹಾರ ಖಾದ್ಯಗಳನ್ನೊಳಗೊಂಡ ಆಹಾರ ಉತ್ಸವವನ್ನೂ ಈ ಮೂರು ದಿನಗಳ ಸರ್ಫಿಂಗ್ ಕ್ರೀಡಾಕೂಟದಲ್ಲಿ ಆಯೋಜಿಸಲಾಗಿದೆ.

ಈಗಾಗಲೇ 120 ಸರ್ಫರ್ ಗಳು ಹೆಸರು ನೋಂದಣಿ

ಈಗಾಗಲೇ 120 ಸರ್ಫರ್ ಗಳು ಹೆಸರು ನೋಂದಣಿ

ಈಗಾಗಲೇ ಆನ್‌ಲೈನ್‌ಲ್ಲಿ 120 ಸರ್ಫರ್ ಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಕೆಲವು ಆಟಗಾರರು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಸರ್ಫಿಂಗ್ ಗೆ ಮಳೆ ಅಡ್ಡಿ ಸಾಧ್ಯತೆ

ಸರ್ಫಿಂಗ್ ಗೆ ಮಳೆ ಅಡ್ಡಿ ಸಾಧ್ಯತೆ

ಕರಾವಳಿ ಭಾಗ ದಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸರ್ಫಿಂಗ್ ಗೆ ಅಡ್ಡಿಯಾಗುವ ಆತಂಕ ಇದೆ. ತಾಸುಗಟ್ಟಲೇ ಮಳೆ ಸುರಿದರೆ ಮಾತ್ರ ಸ್ಪರ್ಧೆ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಸಾಧಾರಣ ಮಳೆ ಬಂದರೆ ಸ್ಪರ್ಧೆಗೆ ಅಡ್ಡಿಯಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

English summary
Karnataka forest minister Ramanath Rai inaugurates the Karnataka tourism department is hosting a three-day surfing festival 2017 in Sasihithlu beach, Mangaluru on May 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X