ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಭಾ ಹಂತಕರನ್ನು ಗಲ್ಲಿಗೇರಿಸಲಿ: ಶೋಕ ತಪ್ತ ತಂದೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

'ಅವಳೊಮ್ಮೆ ನೋಡಿ ಬಿಡಬೇಕೆಂದು ತುಂಬಾ ದಿನಗಳಿಂದ ಮನ ಬಯಸುತ್ತಿದೆ. ಆದರೆ ಇನ್ನು ಅವಳನ್ನು ಜೀವಂತ ನೋಡುವುದು ಹೇಗೆ? ಶಾಶ್ವತವಾಗಿ ಕಣ್ಣು ಮುಚ್ಚಿಕೊಂಡಿರುವ ಅವಳ ಮುಖವನ್ನೊಮ್ಮೆ ಕಣ್ತುಂತಾ ನೋಡುವ ಭಾಗ್ಯವನ್ನಾದರೂ ಭಾರತ ಸರಕಾರ ಕಲ್ಪಿಸಿದರೆ ದೊಡ್ಡ ಪುಣ್ಯ ಬರುತ್ತದೆ...' ಇದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬರ್ಬರ ಹತ್ಯೆಗೀಡಾದ ಭಾರತ ಮೂಲದ ಐಟಿ ಸಲಹೆಗಾರ್ತಿ ಪ್ರಭಾ ಶೆಟ್ಟಿ ಅವರ ತಂದೆ 82 ವರ್ಷ ಹರೆಯದ ಮಹಾಬಲ ಶೆಟ್ಟಿ ಅವರಾಡಿದ ಮಾತು.

ಬಂಟ್ವಾಳ ತಾಲೂಕು ಕಲ್ಲಡ್ಕ ಅಮ್ಟೂರು ಗ್ರಾಮದ ನಂದಗೋಕುಲ ನಿವಾಸಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಗಳ ಅಗಲುವಿಕೆಯ ನೋವನ್ನು ಹಂಚಿಕೊಂಡ ಮಹಾಬಲ ಶೆಟ್ಟಿ, 'ನನ್ನ ಮಗಳು ಎಲ್ಲರಂತಲ್ಲ . ಅವಳಲ್ಲಿ ಈ ದೇಶಕ್ಕಾಗಿ, ಈ ರಾಜ್ಯಕ್ಕಾಗಿ ಏನಾದರೂ ದೊಡ್ಡ ಕೊಡುಗೆ ನೀಡಬೇಕೆಂಬ ಹಂಬಲ ಇತ್ತು. ಆದರೆ ದೇವರು ಆ ಕಾರ್ಯವನ್ನು ಪೂರ್ತಿ ಮಾಡುವ ಮೊದಲೇ ಕರೆದುಕೊಂಡು ಹೋದ. ಸಣ್ಣ ವಯಸ್ಸಿನಲ್ಲೇ ಸಾವು ಕೊಟ್ಟು ಬಿಟ್ಟ...' ಎಂದು ಕಂಬನಿಗರೆದರು.[ಸಿಡ್ನಿ ಪ್ರಭಾ ಹತ್ಯೆ ನಿಗೂಢತೆ ಇನ್ನೂ ಬಯಲಾಗಿಲ್ಲ!]

ಸಾಂತ್ವನದಿಂದ ಜೀವ ಮತ್ತೆ ಬರುತ್ತಾ? : ನಮ್ಮ ಕುಟುಂಬಕ್ಕೆ ಆಸ್ಟ್ರೇಲಿಯಾ ಸರಕಾರ ಸಾಂತ್ವನ ನೀಡಿದೆ. ಹಂತಕರನ್ನು ಪತ್ತೆ ಹಚ್ಚುವುದಾಗಿಯೂ ಭರವಸೆ ನೀಡಿದೆ. ಭರವಸೆಗಳಿಂದ ನಮ್ಮ ಮಗಳು ಜೀವಂತವಾಗಿ ಮನೆಗೆ ಬರುತ್ತಾಳಾ? ಹಂತಕರನ್ನು ಆಸ್ಟ್ರೇಲಿಯಾ ಸರಕಾರ, ಭಾರತಕ್ಕೆ ಒಪ್ಪಿಸಲಿ ಮತ್ತು ನಮ್ಮ ಸರಕಾರ ಅವರನ್ನು ಗಲ್ಲಿಗೇರಿಸಲಿ. ಆಗ ಮಾತ್ರ ನಮಗೆ ಸಮಾಧಾನ ಎಂದವರು ಮರುಕ್ಷಣ ಭಾವುಕರಾದರು. ಕಣ್ಣುಗಳ ತೇವಗೊಂಡವು. ಮತ್ತೆ ಮಹಾಬಲ ಶೆಟ್ಟಿಯವರ ತುಟಿಯಿಂದ ಮಾತೇ ಹೊರಡಲಿಲ್ಲ...

ಅಪ್ಪನಲ್ಲಿ ಏನೂ ಕೇಳ್ಬೇಡಿ!: ಅಪ್ಪನಿಗೆ ಹುಷಾರಿಲ್ಲ

ಅಪ್ಪನಲ್ಲಿ ಏನೂ ಕೇಳ್ಬೇಡಿ!: ಅಪ್ಪನಿಗೆ ಹುಷಾರಿಲ್ಲ

ಅಪ್ಪನಿಗೆ ಹುಷಾರಿಲ್ಲ, ಅವರನ್ನು ಏನೂ ಕೂಡ ಕೇಳ್ಬೇಡಿ ಎಂದ ಮಹಾಬಲ ಶೆಟ್ಟಿ ಅವರ ಮಗ ಶಿವಪ್ರಸಾದ್, ಅವರನ್ನು ಸಮಾಧಾನ ಪಡಿಸಿದರು. ಕೃಷಿ ಹಾಗೂ ರಬ್ಬರ್ ಗಿಡ ಬೆಳೆಸುತ್ತಿರುವ ಮಹಾಬಲ ಶೆಟ್ಟಿ ಜಮೀನ್ದಾರರು. ಬಿಜೆಪಿ ಅಮ್ಟೂರು ವಲಯ ಹಾಗೂ ಸ್ಥಳೀಯ ಬಂಟರ ಸಂಘದ ಅಧ್ಯಕ್ಷರಾಗಿದ್ದರು. ಇದೀಗ ನಿವೃತ್ತಿ ಜೀವನ ನಡೆಸುತ್ತಿರುವ ಶೆಟ್ಟಿ ಪತ್ನಿ ಸರೋಜಿನಿ, ಮಕ್ಕಳಾದ ನಿತಿನ್, ಶುಭ ಎಂಬರೊಂದಿಗೆ ಮನೆಯಲ್ಲಿದ್ದಾರೆ.

ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದಾರೆ

ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದಾರೆ

ಹಿರಿಯ ಮಗ ಡಾ. ಶಂಕರ ಶೆಟ್ಟಿ ಆಸ್ಟ್ರೇಲಿಯಾದ ಪರ್ತ್ನಲ್ಲಿದ್ದರೆ, ಪ್ರಭಾ ಶೆಟ್ಟಿ 2ನೇ ಮಗಳು. ಮತ್ತೊಬ್ಬ ಮಗ ಶಿವಪ್ರಸಾದ್ ಶೆಟ್ಟಿ ಐಟಿ ಇಂಜಿನಿಯರ್ರಾಗಿ ಕೆಲಸ ಮಾಡುತ್ತಿದ್ದಾರೆ. ಮಹಾಬಲ ಶೆಟ್ಟಿ ಮತ್ತು ಸರೋಜಿನಿ ದಂಪತಿ ಮಗಳ ಸಾವಿನ ಸುದ್ದಿಯಿಂದ ತತ್ತರಿಸಿ ಹೋಗಿದ್ದಾರೆ.

ಮನೆಗೆ ಬರುತ್ತಿರುವ ರಾಜಕೀಯ ಸ್ನೇಹಿತರು, ಪೊಲೀಸರು, ಸುದ್ದಿಗಾರರು, ಓರಗೆಯವರು, ಸಂಬಂಧಿಕರಲ್ಲಿ ಮಾತನಾಡಿ ಸುಸ್ತಾಗಿ ಹೋದ ಅವರು, ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದರು. ಈ ಕಾರಣದಿಂದಾಗಿ ತಂದೆಯನ್ನು ಮಗ ಶಿವಪ್ರಸಾದ್ ಯಾವುದೇ ಸಂದರ್ಶನ ಕೊಡಲು ಬಿಡುತ್ತಿಲ್ಲ.

ಅವಳು ಕೇವಲ ಅಕ್ಕ ಮಾತ್ರ ಆಗಿರಲಿಲ್ಲ

ಅವಳು ಕೇವಲ ಅಕ್ಕ ಮಾತ್ರ ಆಗಿರಲಿಲ್ಲ

ಆಕೆ ಅಕ್ಕ ಮಾತ್ರ ಅಲ್ಲ...ಅವಳು ಕೇವಲ ಅಕ್ಕ ಮಾತ್ರ ಆಗಿರಲಿಲ್ಲ. ನಮ್ಮ ಮನೆ ಮಂದಿಯ ಪ್ರೀತಿಯ ಮಗಳಾಗಿದ್ದಳು. ಅಮ್ಮನ ಪ್ರೀತಿಯನ್ನೇ ಕೊಡುತ್ತಿದ್ದಳು. ಅವಳ ಬಗ್ಗೆ ನಮ್ಮ ಇಡೀ ಕುಟುಂಬವೇ ಅಗಾಧವಾದ ವಿಶ್ವಾಸವನ್ನು ಇಟ್ಟುಕೊಂಡಿತ್ತು. ಆದರೆ ಅವಳ ಬದುಕು ಈ ರೀತಿಯಲ್ಲಿ ಅಂತ್ಯ ಕಾಣುತ್ತದೆ ಎಂದು ನಾವು ಕನಸಲ್ಲೂ ಊಹಿಸಿರಲಿಲ್ಲ ಎಂದು ನೋವು ಹಂಚಿಕೊಂಡ ಸಹೋದರ ಶಿವಪ್ರಸಾದ್ ಶೆಟ್ಟಿ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಭದ್ರೆತೆಯೇ ಇಲ್ಲ. ಹೀಗಾದರೆ ಹೊರ ದೇಶದಲ್ಲಿರುವ ಗತಿಯೇನು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿಭಾವಂತೆ ಪ್ರಭಾ ಶೆಟ್ಟಿ ಅರುಣ್ ಕುಮಾರ್

ಪ್ರತಿಭಾವಂತೆ ಪ್ರಭಾ ಶೆಟ್ಟಿ ಅರುಣ್ ಕುಮಾರ್

ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಮ್ಟೂರು ಹಾಗೂ ಕಲ್ಲಡ್ಕದಲ್ಲಿ ಮುಗಿಸಿದ ಪ್ರಭಾ ಶೆಟ್ಟಿ, ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ ಪದವಿ(1995ರಲ್ಲಿ) ಪಡೆದುಕೊಂಡಿದ್ದರು. 12 ವರ್ಷಗಳ ಹಿಂದೆ ಬೆಂಗಳೂರು ಮೂಲದ ಅರುಣ್ ಕುಮಾರ್ ಮದುವೆಯಾಗುವ ಹೊತ್ತಿಗೆ 'ಲಿಂಕ್' ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.

ಮದುವೆ ನಂತರ ಮೈಂಡ್ ಟ್ರೀ ಸಂಸ್ಥೆ ಸೇರಿದ್ದ ಪ್ರಭಾ ಕೆಲ ವರ್ಷಗಳ ಹಿಂದೆ ಪ್ರಮೋಷನ್ ಪಡೆದು ಸಿಡ್ನಿಗೆ ವರ್ಗವಾಗಿದ್ದರು. 2013ರಲ್ಲೇ ಭಾರತಕ್ಕೆ ವಾಪಸ್ ಬರಬೇಕಿದ್ದ ಪ್ರಭಾ ಅವರು ಈ ವರ್ಷದಲ್ಲಿ ಭಾರತಕ್ಕೆ ಮರಳುವ ಇರಾದೆ ಹೊಂದಿದ್ದರು.

ಸಂಸದರು ಈ ಬಗ್ಗೆ ಗಮನ ಸೆಳೆಯಲಿ

ಸಂಸದರು ಈ ಬಗ್ಗೆ ಗಮನ ಸೆಳೆಯಲಿ

ಪ್ರಭಾ ಅವರ ಮೃತದೇಹ ವಾರಂತ್ಯದೊಳಗೆ ಭಾರತಕ್ಕೆ ಕಳುಹಿಸುವ ನಿರೀಕ್ಷೆಯಿದೆ. ಈ ಬಗ್ಗೆ ಆಸ್ಟ್ರೇಲಿಯಾ ಹಾಗೂ ಭಾರತ ಸರಕಾರದ ರಾಯಭಾರಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಸಚಿವರು, ಈ ವಿಚಾರದಲ್ಲಿ ಭಾರತ ಸರಕಾರ ತುರ್ತು ಕ್ರಮ ವಹಿಸಲು ಸಂಸದರು ಗಮನ ಸೆಳೆಯಲಿ ಎಂದು ಸಿಡ್ನಿಯ ಭಾರತೀಯ ನಿವಾಸಿಗಳ ಸಂಘ ಕೋರಿದೆ.

ಬಸವೇಶ್ವರ ನಗರದಲ್ಲಿ ಪ್ರಭಾ ಪತಿ ಅರುಣ್ ಅವರ ನಿವಾಸದಲ್ಲಿ ಅವರ ತಾಯಿ ಸುಲೋಚನಮ್ಮ, 9 ವರ್ಷದ ಮಗಳು ಮೇಘನಾ ಇದ್ದಾರೆ. ಬೆಂಗಳೂರು ಹಾಗೂ ಅಮ್ಟೂರಿನ ಮನೆಯಲ್ಲಿ ದುಃಖ ಮಡುಗಟ್ಟಿದೆ.
ಡಿ.ವಿ.ಸದಾನಂದ ಗೌಡ ಅವರಿಂದ ಸಂತಾಪ ಸೂಚನೆ

ಡಿ.ವಿ.ಸದಾನಂದ ಗೌಡ ಅವರಿಂದ ಸಂತಾಪ ಸೂಚನೆ

ಪ್ರಭಾ ಅವರ ಅಮ್ಟೂರಿನ ಮನೆಗೆ ಭೇಟಿ ನೀಡಿದ ಅವರು ಮಹಾಬಲ ಶೆಟ್ಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ತಾಪಂ ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ಪೂವಪ್ಪ ಟೈಲರ್, ಗೋಪಾಲ ಪೂಜಾರಿ ಮತ್ತಿತರು ಜೊತೆಗಿದ್ದರು.

ಪ್ರಭಾ ಸಾವು ಇಡೀ ದೇಶವನ್ನೇ ತತ್ತರಿಸುವಂತೆ ಮಾಡಿದೆ. ಆಕೆಯ ಮೃತ ದೇಹ ಭಾರತಕ್ಕೆ ಆದಷ್ಟು ಬೇಗ ಒಪ್ಪಿಸಲು ಆಸ್ಟ್ರೇಲಿಯಾ ಸರಕಾರಕ್ಕೆ ಭಾರತ ರಾಯಬಾರಿ ಮೂಲಕ ಮನವಿ ಸಲ್ಲಿಸಲಾಗಿದೆ. -ಡಿ.ವಿ.ಸದಾನಂದ ಗೌಡ, ಕೇಂದ್ರ ಕಾನೂನು ಸಚಿವರು


English summary
Mindtree IT Consultant Prabha Shetty family shell Shocked. Her father demand capital punishment to murderer. Prabha Shetty Arun Kumar hails from Amtoor near Kalladka in Bantwal. Daughter of agriculturist Mahabala Shetty and Sarojini from Bantwal were shocked to hear the sad news of her untimely demise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X