ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

15 ದಿನಗಳ ದಸರಾ ರಜೆ ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರಕಾರ

|
Google Oneindia Kannada News

ಮಂಗಳೂರು, ಸೆ 20: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆಯನ್ನು ಅಕ್ಟೋಬರ್ 1 ರಿಂದ 15 ರ ತನಕ ನೀಡಲು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ ಹದಿನೈದು ದಿನಗಳ ಮಧ್ಯಂತರ ರಜೆಯನ್ನು ನಿಗದಿಗೊಳಿಸಿ, ಆದೇಶ ಹೊರಡಿಸಲಾಗಿದೆ.

ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!

ಜಿಲ್ಲೆಯಲ್ಲಿ ಸೆಪ್ಟಂಬರ್ 21 ರಿಂದ 30ರವರೆಗೆ ಮಧ್ಯಾವದಿ ಪರೀಕ್ಷೆಗಳು ನಡೆಯುವುದರಿಂದ, ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಅಕ್ಟೋಬರ್ 16ರಿಂದ ಶಾಲೆಗಳನ್ನು ಪುನರ್ ಆರಂಭಿಸಲು ಸೂಚಿಸಲಾಗಿದೆ.

Mid-Term Holiday Will Start From October 1 to October 15 In Dakshina Kannada District Limit

ಜಿಲ್ಲಾ ವ್ಯಾಪ್ತಿಯ ಶಿಕ್ಷಣಾಧಿಕಾರಿ, ಪ್ರಾಧಮಿಕ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಅಗತ್ಯ ಸೂಚನೆಗಳನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಮಂಗಳೂರು ದಕ್ಷಿಣ ಅಸೆಂಬ್ಲಿ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಸಚಿವ ಸುರೇಶ್ ಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ದಸರಾ ರಜೆಯ ಸಂಬಂಧ ಮನವಿಯನ್ನು ಸಲ್ಲಿಸಿದ್ದರು.

ಅಕ್ಟೋಬರ್ 1 ರಿಂದ ದಸರಾ ರಜೆ ಆರಂಭವಾಗುವುದರಿಂದ ದೇವಿ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಕಾಮತ್ ಮನವಿ ಸಲ್ಲಿಸಿದ್ದರು.

English summary
Mid-Term Holiday For Schools Will Start From October 1 to October 15 In Dakshina Kannada District Limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X