ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಇನ್ನು ಮುಂದೆ ಪ್ರಿ-ಪೇಯ್ಡ್ ಕರೆಂಟ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 24: ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರೋ ಮಂಗಳೂರು ಮತ್ತೊಂದು ಸ್ಮಾರ್ಟ್ ಯೋಜನೆಗೆ ಸಜ್ಜಾಗುತ್ತಿದೆ. ಪ್ರಿಪೇಯ್ಡ್ ವಿದ್ಯುತ್ ವ್ಯವಸ್ಥೆ ಮಂಗಳೂರಿನಲ್ಲಿ ಸದ್ಯದಲ್ಲೆ ಆರಂಭಗೊಳ್ಳಲಿದೆ.


ನಾವು ಇಷ್ಟೊಂದು ಕರೆಂಟ್ ಬಳಸಲೇ ಇಲ್ಲ ಆದರೂ ಇಷ್ಟು ದೊಡ್ಡ ಬಿಲ್ ಬಂದಿದೆ ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ, ಏಕೆಂದರೆ, ಇನ್ನು ಮುಂದೆ ಎಷ್ಟು ಹಣ ರೀಚಾರ್ಜ್ ಮಾಡುತ್ತಿರೋ ಅಷ್ಟು ವಿದ್ಯುತ್ ನ್ನು ಬಳಸಿಕೊಳ್ಳಬಹುದಾಗಿದೆ. ಈ ರೀತಿಯ ಯೋಜನೆಯನ್ನು ಮೆಸ್ಕಾಂ ಜಾರಿಗೆ ತರಲು ಯೋಜನೆ ರೂಪಿಸಿದೆ.


ಏನಿದು ಪ್ರೀಪೇಯ್ಡ್ ವಿದ್ಯುತ್ ವ್ಯವಸ್ಥೆ : ಮೊಬೈಲ್ ಕರೆನ್ಸಿ ಪ್ರಿಪೇಯ್ಡ್ ನಂತೆಯೆ ಇದು ಕಾರ್ಯ ನಿರ್ವಹಿಸುತ್ತದೆ. ಮನೆಯ ಡಿಟಿಎಚ್ ಗಳನ್ನು ರಿಚಾರ್ಜ್ ಮಾಡಿದಂತೆ ಇಲ್ಲೂ ಕೂಡ ಮೊದಲು ಹಣ ತುಂಬುವ ವ್ಯವಸ್ಥೆ ಇದೆ. ಮನೆಗೆ ಮೀಟರ್ ರೀಡರ್ ಬಂದು ಬಿಲ್ ನೀಡುವ ವ್ಯವಸ್ಥೆ ಇಲ್ಲಿಲ್ಲ. ಎಷ್ಟು ಹಣ ರಿಚಾರ್ಜ್ ಮಾಡಿರುತ್ತೇವೋ ಅಷ್ಟು ವಿದ್ಯುತ್ ನ್ನು ಬಳಕೆ ಮಾಡಬಹುದಾಗಿದೆ. ಹಣ ಮುಗಿಯುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ವಿದ್ಯುತ್ ಕಡಿತಗೊಳ್ಳುತ್ತದೆ.

Mescom to introduce Prepaid Energy Meters in Mangaluru city

ವಿದ್ಯುತ್ ಬಳಕೆಯ ಅಲರ್ಟ್ ಮೊಬೈಲ್ ಹಾಗೂ ಇಮೇಲ್ ಗೆ: ಸ್ಮಾರ್ಟ್ ಮೀಟರ್ ಅಲರ್ಟ್ ಸಂಪರ್ಕವನ್ನು ಮೊಬೈಲ್ ಹಾಗೂ ಇಮೇಲ್ ಗೆ ಕಳುಹಿಸಲಾಗುತ್ತದೆ. ನಿಮ್ಮ ರಿಚಾರ್ಜ್ ಬ್ಯಾಲೆನ್ಸ್ 25 ರೂಪಾಯಿಗೆ ಬಂದಾಗ ಮೊಬೈಲ್ ಹಾಗೂ ಇಮೇಲ್ ಗೆ ಸಂದೇಶ ರವಾನೆಯಾಗುತ್ತದೆ. ಗ್ರಾಹಕ ಕೂಡಲೇ ರಿಚಾರ್ಜ್ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಎಚ್ಚರಿಕೆ ವಹಿಸಬಹುದಾಗಿದೆ.

ಪ್ರತ್ಯೇಕ ಮೀಟರ್ : ಈ ನೂತನ ವ್ಯವಸ್ಥೆಗೆ ಈಗಾಗಲೇ ಬಳಕೆಯಲ್ಲಿರುವ ಮೀಟರ್ ಬಳಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪ್ರತ್ಯೇಕ ಸ್ಮಾರ್ಟ್ ಮೀಟರ್ ಆಳವಡಿಸಬೇಕಾಗುತ್ತದೆ. ಟಿವಿ ಸೆಟ್ ಆಪ್ ಬಾಕ್ಸ್ ನಲ್ಲಿರುವಂತೆ ಸ್ಮಾರ್ಟ್ ಕಾರ್ಡ್ ಈ ಮೀಟರ್ ನಲ್ಲಿರುತ್ತದೆ. ಸದ್ಯ ಮೀಟರ್ ಗೆ 8 ಸಾವಿರ ರೂಪಾಯಿ ಖರ್ಚಾಗಲಿದ್ದು, ಆ ಹಣವನ್ನು ಮೆಸ್ಕಾಂ ಭರಿಸಲಿದೆ. ಆದರೆ, ಮೀಟರ್ ನಿರ್ವಹಣಾ ವೆಚ್ಚ 75 ರೂಪಾಯಿಯನ್ನು ಮೆಸ್ಕಾಂ ಗೆ ಪ್ರತಿ ತಿಂಗಳು ಕಟ್ಟಬೇಕಿದೆ.

Mescom to introduce Prepaid Energy Meters in Mangaluru city

ಸದ್ಯ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಲ್ಲಿ ತರಲು ನಿರ್ಧರಿಸಲಾಗಿದ್ದು, ತಾತ್ಕಾಲಿಕವಾಗಿ ವಿದ್ಯುತ್ ಬಳಕೆಯಾಗುವ ಪ್ರದೇಶಗಳಿಗೆ ಈ ಮೀಟರ್ ನ್ನು ಅಳವಡಿಸಲು ಸಿದ್ದತೆ ನಡೆಸಲಾಗುತ್ತಿದೆ. ಜಾತ್ರೆ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬಳಕೆಯಾಗುವ ಮೀಟರ್ ಗಳನ್ನು ಆರಂಭದಲ್ಲಿ ಪ್ರಿಪೇಯ್ಡ್ ಮಾಡಲು ನಿರ್ಧರಿಸಲಾಗಿದ್ದು, ಏಪ್ರಿಲ್ ವೇಳೆಗೆ ಈ ಯೋಜನೆ ಕಾರ್ಯಗತಗೊಳ್ಳಲಿದೆ.

ಪ್ರಿ- ಪೇಯ್ಡ್ ಮೀಟರ್ ನಿಂದ ವಿದ್ಯುತ್ ಉಳಿತಾಯವಾಗಲಿದೆ, ಅಲ್ಲದೇ ಗ್ರಾಹಕ ಎಷ್ಟು ಬೇಕೋ ಅಷ್ಟೇ ವಿದ್ಯುತ್ ನ್ನು ಜಾಗರೂಕತೆಯಿಂದ ಬಳಸುತ್ತಾನೆ, ಪವರ್ ಕಟ್ ಸಮಸ್ಯೆಗೂ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ದೊರಕಬಹುದಾಗಿದೆ.

English summary
Mangalore Electricity Supply Company Ltd. (MESCOM) is planning to introduce Prepaid Energy Meter in Mangaluru city. Prepaid meters can be recharged via mobile app through Net Banking, Credit/Debit Cards or Mobile wallets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X