• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ವಿಮಾನ ದುರಂತದಲ್ಲಿ ಮಡಿದವರಿಗೆ ಸ್ಮಾರಕ

|

ಮಂಗಳೂರು, ಡಿ. 3 : ಮಂಗಳೂರು ವಿಮಾನ ವಿಮಾನ ನಿಲ್ದಾಣದಲ್ಲಿ ದುರಂತ ಸಂಭವಿಸಿ ಸುಮಾರು 4 ವರ್ಷಗಳೇ ಉರುಳಿದೆ. ಈ ವಿಮಾನ ದುರಂತದ ನೆನಪಿಗಾಗಿ ಕೂಳೂರು ಸೇತುವೆ ಮತ್ತು ತಣ್ಣೀರು ಬಾವಿ ನಡುವಿನ ಪ್ರದೇಶದಲ್ಲಿ ಸ್ಮಾರಕವೊಂದು ನಿರ್ಮಾಣವಾಗಲಿದೆ.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ರಾಜ್ಯ ಸರ್ಕಾರ, ಎರ್‌ ಇಂಡಿಯಾ , ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಎನ್‌ಎಮ್‌ಪಿಟಿ ಸಹಯೋಗದಲ್ಲಿಸ್ಮಾರಕ ನಿರ್ಮಾಣ ಮಾಡಲಾಗುವುದು. ಇದರ ನಿರ್ವಹಣೆ ಹೊಣೆಗಾರಿಕೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ವಹಿಸಲಾಗುವುದು ಎಂದು ತಿಳಿಸಿದರು.[ಮಂಗಳೂರು ಭೀಕರ ವಿಮಾನ ಅಪಘಾತ 160 ಸಾವು]

ವಿಮಾನ ನಿಲ್ದಾಣದ ನಿರ್ಗಮನ ದಾರಿಯ ಬಳಿಯೆ ಸ್ಮಾರಕ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಆದರೆ ಇದಕ್ಕೆ ಕೆಲ ಭಿನ್ನಾಭಿಪ್ರಾಯ ಮತ್ತು ದುರಂತದಲ್ಲಿ ಮಡಿದವರ ಕುಟುಂಬಿಕರು ಮತ್ತೆ ದುರ್ಘಟನೆ ನೆನಪು ಮಾಡಿಕೊಳ್ಳುವುದು ಬೇಡ ಎಂದ ಹಿನ್ನೆಲೆಯಲ್ಲಿ ಜಾಗ ಬದಲಾವಣೆ ಮಾಡಲಾಯಿತು ಎಂದು ತಿಳಿಸಿದರು.

ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ,ಸಹಾಯಕ ಪೊಲೀಸ್‌ ಕಮಿಷನರ್‌ ಉದಯ್‌ ನಾಯಕ್‌, ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ವಾಸುದೇವ ರಾವ್‌ ಹಾಜರಿದ್ದರು.[ಡಿಸೆಂಬರ್ 15ರಿಂದ ಶಿರಾಡಿ ಘಾಟ್ ಬಂದ್]

ವಿಮಾನ ದುರಂತ ನೆನಪು

ಅದು 22 ಮೇ 2010, ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಎರ್‌ಇಂಡಿಯಾ ಎಕ್ಸ್‌ಪ್ರೆಸ್‌ 812 ವಿಮಾನ ರನ್‌ ವೇಗೆ ಇಳಿಯುವಾಗ ಆಕಸ್ಮಿಕ ಬೆಂಕಿ ತಗುಲಿ ಅಪಘಾತಕ್ಕೀಡಾಗಿತ್ತು. ದುರಂತದಲ್ಲಿ 160 ಪ್ರಯಾಣಿಕರು , 6 ಮಂದಿ ವಿಮಾನ ಸಿಬ್ಬಂದಿ ಸಾವಿಗೀಡಾಗಿದ್ದರು. 8 ಮಂದಿ ಪ್ರಾಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.[ವಿಮಾನ ದುರಂತದಲ್ಲಿ ಇವರು ಆಭರಣ ದೋಚಿದ್ದರು]

English summary
Mangaluru: The district administration finalized the spot near Kulur bridge, off NH 66, where 12 unidentified bodies of the May 2010 Mangaluru air crash victims had been buried, as the spot to bring up the memorial for air crash victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X