ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಮೊತ್ತ ಮೊದಲ ಮಹಿಳಾ ಡಿಜಿ-ಐಜಿಪಿ ನೀಲಮಣಿ ರಾಜು ಪರಿಚಯ

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ (ಡಿಜಿ-ಐಜಿಪಿ)ರಾಗಿ ಮಹಿಳಾ ಅಧಿಕಾರಿ ನೀಲಮಣಿ ಎನ್ ರಾಜು ನೇಮಕವಾಗಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ಆಯ್ಕೆರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ಆಯ್ಕೆ

ಉತ್ತರ ಪ್ರದೇಶದ ರೂರ್ಕಿ ಮೂಲದವರಾದ ನೀಲಮಣಿ ರಾಜು ಹುಟ್ಟಿದ್ದು 1960 ಜನವರಿ 17ರಂದು. ನೀಲಮಣಿ ರಾಜು 1983ನೇ ಸಾಲಿನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ನರಸಿಂಹರಾಜು ಅವರ ಪತ್ನಿಯಾಗಿರುವ ಅವರು ಒಂದಷ್ಟು ಕಾಲ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ 1993ರಲ್ಲಿ ಕೇಂದ್ರ ಸೇವೆಗೆ ತೆರಳಿದ್ದರು. 23ಕ್ಕೂ ಹೆಚ್ಚು ವರ್ಷಗಳ ಕಾಲ ರಾಜ್ಯದಿಂದ ಹೊರಗಿದ್ದ ನೀಲಮಣಿ ರಾಜು 2016ರಲ್ಲಿ ರಾಜ್ಯ ಸೇವೆಗೆ ವಾಪಸಾಗಿದ್ದರು.

Meet Mrs. Neelamani N Raju, Karnataka's first woman DG-IGP

2016ರ ಮೇನಲ್ಲಿ ರಾಜ್ಯ ಸೇವೆಗೆ ವಾಪಸಾಗಿದ್ದ ನೀಲಮಣಿ ರಾಜು ಅಂತರಿಕ ಭದ್ರತಾ ವಿಭಾಗ(ಐಎಸ್ಡಿ) ದ ಪೊಲೀಸ್ ಮಹಾ ನಿರ್ದೇಶಕಿ (ಡಿಜಿಪಿ)ಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರಿಗಾಗಿ ಈ ವಿಶೇಷ ಹುದ್ದೆಯನ್ನು ಸೃಷ್ಟಿ ಮಾಡಲಾಗಿತ್ತು. ಕರಾವಳಿ ರಕ್ಷಣಾ ಪಡೆ, ನಕ್ಸಲ್ ನಿಗ್ರಹ ದಳ, ಉಗ್ರ ನಿಗ್ರಹ ದಳ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಮತ್ತು ಖಾಸಗಿ ಭದ್ರತಾ ಪಡೆಗಳ ನಿಯಂತ್ರಣ ಇವರ ಕೆಳಗೆ ಬರುತ್ತಿತ್ತು.

ನಂತರ ಅಗ್ನಿಶಾಮಕ ದಳದ ಡಿಜಿಪಿಯಾಗಿಯೂ ಸೇವೆ ಸಲ್ಲಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಡಿಜಿಪಿ ಪದವಿಗೇರಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಆರ್.ಕೆ.ದತ್ತಾ ನಂತರದ ಸೇವಾ ಹಿರಿತನ ಹೊಂದಿದ್ದ ನೀಲಮಣಿ ರಾಜು ಅವರು ಮುಂದೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗುವ ಹಂಬಲದೊಂದಿಗೆ 2016ರಲ್ಲಿ ರಾಜ್ಯ ಸೇವೆಗೆ ಮರಳಿದ್ದರು. ಹಾಗೆ ನೋಡಿದರೆ ದತ್ತಾ ಕೇಂದ್ರ ಸೇವೆಯಿಂದ ರಾಜ್ಯಕ್ಕೆ ಮರಳದೇ ಇದ್ದಲ್ಲಿ ಅವತ್ತೇ ನೀಲಮಣಿ ರಾಜು ಡಿಜಿ-ಐಜಿಪಿ ಹುದ್ದೆಗೇರಬೇಕಾಗಿತ್ತು. ಇದೀಗ ತಡವಾಗಿಯಾದರೂ ಈ ಸ್ಥಾನವನ್ನು ಅಲಂಕರಿಸಿದ್ದಾರೆ.

Meet Mrs. Neelamani N Raju, Karnataka's first woman DG-IGP

ನೀಲಮಣಿ ರಾಜು ಅವರು 2020ರ ಜನವರಿಯಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದು, 2 ವರ್ಷ 3 ತಿಂಗಳ ಅವಧಿಗೆ ಡಿಜಿ-ಐಜಿಪಿ ಹುದ್ದೆಯಲ್ಲಿ ಇರಲಿದ್ದಾರೆ. ನೀಲಮಣಿ ರಾಜು ನೇಮಕದಿಂದ ಡಿಜಿಪಿಗಳಾದ ಎಂ.ಎನ್.ರೆಡ್ಡಿ, ಕಿಶೋರ್ ಚಂದ್ರ, ಸತ್ಯನಾರಾಯಣ ರಾವ್ ಅವರು ರಾಜ್ಯದ ಡಿಜಿ- ಐಜಿಪಿ ಹುದ್ದೆಗೇರುವ ಸಾಧ್ಯತೆಗಳು ಕಡಿಮೆಯಾಗಲಿದೆ. ಅವರೆಲ್ಲರೂ ನೀಲಮಣಿ ಅವರಿಗಿಂತ ಮುನ್ನ ನಿವೃತ್ತರಾಗಲಿದ್ದಾರೆ.

English summary
First time in the history of the Karnataka state police department, a women IPS officer, Neelamani N Raju has been appointed as the Director General and Inspector General of Police. Here is Neelamni N Raju’s brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X