ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ:ಮಾಧ್ಯಮಗಳ ವಿರುದ್ಧ ಸಿಎಂ ಗರಂ

|
Google Oneindia Kannada News

ಮಂಗಳೂರು, ಏಪ್ರಿಲ್ 07:ಮಂಡ್ಯದಲ್ಲಿ ಚೆಲುವರಾಯ ಸ್ವಾಮಿ ರಾಜಕೀಯ ಕುರಿತು ಮಾತನಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರಾಕರಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೆಲುವರಾಯ ಸ್ವಾಮಿ ಅವರ ಕುರಿತು ಚರ್ಚೆ ಮಾಡಲ್ಲ ಎಂದು ಹೇಳಿದರು. ಮಾಧ್ಯಮಗಳ ಮೇಲೆ ಕಿಡಿಕಾರಿದ ಕುಮಾರಸ್ವಾಮಿ ಮಂಡ್ಯದಲ್ಲಿ ನನ್ನನ್ನು ಮುಗಿಸಲು ಶ್ರಮಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಭೇಟಿ ಹಿನ್ನಲೆ ರಾಹುಲ್ ಏ.13ರ ರಾಜ್ಯ ಪ್ರವಾಸ ಮುಂದೂಡಿಕೆಮೋದಿ ಭೇಟಿ ಹಿನ್ನಲೆ ರಾಹುಲ್ ಏ.13ರ ರಾಜ್ಯ ಪ್ರವಾಸ ಮುಂದೂಡಿಕೆ

ಮಾಧ್ಯಮ ವ್ಯವಸ್ಥಾಪಕರಿಗೆ ನನ್ನ ಮೇಲೆ ಕೋಪ ಇದೆ. ನನ್ನ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದ ವಿಚಾರ ಬಂದಾಗ ನನ್ನೊಬ್ಬನ ಜೊತೆ ವಿರೋಧಿ ಪೋಟೋ ಹಾಕುತ್ತಾರೆ.ಮಾಧ್ಯಮಗಳಿಗೆ ಎಥಿಕ್ಸ್ ಇದ್ಯಾ? ಎಂದು ಪ್ರಶ್ನಿಸಿದರು.

Media is campaigning against me: Kumaraswamy

ನಿಖಿಲ್ ಗೆ ಕೊಡುತ್ತಿರುವ ಪ್ರಚಾರ ಸಾಕಾ?ನಿಮಗೆ ಸಮಾಧಾನ ಇದ್ಯಾ? ದೇಶದಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿಲ್ಲ. ಮಂಡ್ಯ ಶಾಸಕರು ಅಲ್ಲಿ ಪ್ರಚಾರ ಮಾಡುತ್ತಾರೆ. ಮೈತ್ರಿ ಸರ್ಕಾರ ಆರಂಭವಾದಾಗಲೂ ಮಾಧ್ಯಮದವರು ಹಿಂಸೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಮಾಧ್ಯಮಗಳು ನನ್ನನ್ನು ಕೆಲಸ ಮಾಡಲು ಬಿಟ್ಟಿಲ್ಲ. 9 ತಿಂಗಳಿನಿಂದ ನೀವು ಮಾಡಿದ್ದನ್ನು ರಿವೈಂಡ್ ಮಾಡಿ ನೋಡಿ ಎಂದು ಕುಮಾರಸ್ವಾಮಿ ರೇಗಾಡಿದರು.

ಸಿದ್ದರಾಮಯ್ಯ-ಎಚ್‌ಡಿಕೆ ಇಬ್ಬರಿಗೂ ಟಾಂಗ್ ನೀಡಿದ ಚೆಲುವರಾಯಸ್ವಾಮಿಸಿದ್ದರಾಮಯ್ಯ-ಎಚ್‌ಡಿಕೆ ಇಬ್ಬರಿಗೂ ಟಾಂಗ್ ನೀಡಿದ ಚೆಲುವರಾಯಸ್ವಾಮಿ

ಈ ಮೊದಲು ಮಂಗಳೂರಿಗೆ ಮೋದಿ ಆಗಮನದ ಬಗ್ಗೆ ಮಾತನಾಡಿದ ಅವರು, ಏ.13 ಕ್ಕೆ ನರೇಂದ್ರ ಮೋದಿ ಜಿಲ್ಲೆಗೆ ಬರುವ ಉದ್ದೇಶ ಏನು? ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರಾಹುಲ್ ಗಾಂಧಿ ಕಾರ್ಯಕ್ರಮ ಇದೆ.13 ನೇ ತಾರೀಖು ರಾಹುಲ್ ಗಾಂಧಿ ಕಾರ್ಯಕ್ರಮ ಇತ್ತು. ಕ್ಲಾಷ್ ಆಗಬಾರದೆಂದು ರಾಹುಲ್ ಗಾಂಧಿ ಕಾರ್ಯಕ್ರಮ ಮುಂದೆ ಹಾಕಿದ್ದೇವೆ. ಮೋದಿ ಜಿಲ್ಲೆಗೆ ಏನು ಸಂದೇಶ ಕೊಡುತ್ತಾರೆ? ಏನು ಕೊಡುಗೆ ನೀಡಿದ್ದಾರೆ? ಮೋದಿ ಮುಖ ನೋಡಿ ಜನ ಯಾಕೆ ಮತ ಕೊಡುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿತನಕ್ಕೆ ಕೊಡುವ ಉದ್ದೇಶ ಏನು? ವಿಜಯ ಬ್ಯಾಂಕ್ ವಿಲೀನ ಯಾರು ಮಾಡಿದ್ದು? ಜಿಲ್ಲೆಯ ಜನ ಮೋದಿಗೆ ವೋಟು ಹಾಕುವ ಮುನ್ನ ಯೋಚಿಸಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

English summary
Lok Sabha Elections 2019:Chief Minister Kumaraswamy spoke out against the media in Mangaluru. Kumaraswamy said that Media is campaigning against me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X