ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಫ್ಲೈಓವರ್ ತಳಭಾಗದ ಗೂಡಂಗಡಿ ತೆರವು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ.26 : ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ನಗರದಲ್ಲಿ ಗೂಡಂಗಡಿಗಳನ್ನು ತೆರವುಗೊಳಿದರು. ನಗರದ ಎ.ಜೆ.ಆಸ್ಪತ್ರೆ ಸಮೀಪದ ಫ್ಲೈಓವರ್ ತಳಭಾಗದಲ್ಲಿದ್ದ ಅಂಗಡಿಗಳನ್ನು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿ ಪ್ರವೀಣ್ ಚಂದ್ರ ಕಾರ್ಕೆರಾ, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ನಗರಾಭಿವೃದ್ಧಿ ವಿಭಾಗದ ಬಾಲಕೃಷ್ಣ ಗೌಡ ಮುಂತಾದ ಅಧಿಕಾರಿಗಳು ಬುಧವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಫ್ಲೈಓವರ್ ಕೆಳಗಿದ್ದ ಅಂಗಡಿಗಳನ್ನು ತೆರವುಗೊಳಿಸಿದರು.

ಫ್ಲೈ ಓವರ್ ಕೆಳಗಿರುವ ಅಂಗಡಿಗಳಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಆದ್ದರಿಂದ ಪಾಲಿಕೆ ಆಯುಕ್ತರು ಅಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಒಂದು ತಿಂಗಳ ಹಿಂದೆ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು, ಬುಧವಾರ ಕಾರ್ಯಾಚರಣೆ ನಡೆಸಲಾಗಿದೆ. ಗೂಡಂಗಡಿ ತೆರವು ಚಿತ್ರಗಳು

ಮಂಗಳೂರು ಪಾಲಿಕೆ ಕಾರ್ಯಾಚರಣೆ

ಮಂಗಳೂರು ಪಾಲಿಕೆ ಕಾರ್ಯಾಚರಣೆ

ಮಂಗಳೂರು ಮಹಾನಗರ ಪಾಲಿಕೆ ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರದ ಮೂರು ಫ್ಲೈಓವರ್ ಗಳ ಕೆಳಗಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಒಂದು ತಿಂಗಳ ಹಿಂದೆ ಅಂಗಡಿಗಳನ್ನು ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಲಾಗಿತ್ತು.

ಆಯುಕ್ತರ ಆದೇಶದಂತೆ ಎತ್ತಂಗಡಿ

ಆಯುಕ್ತರ ಆದೇಶದಂತೆ ಎತ್ತಂಗಡಿ

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಹಿಂದೆ ಆದೇಶ ನೀಡಿದ್ದರು. ಬುಧವಾರ ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿ ಪ್ರವೀಣ್ ಚಂದ್ರ ಕಾರ್ಕೆರಾ, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ನಗರಾಭಿವೃದ್ಧಿ ವಿಭಾಗದ ಬಾಲಕೃಷ್ಣ ಗೌಡ ಮುಂತಾದ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಮೂರು ಫ್ಲೈಓವರ್ ಕೆಳಗಿದ್ದ ಅಂಗಡಿಗಳು

ಮೂರು ಫ್ಲೈಓವರ್ ಕೆಳಗಿದ್ದ ಅಂಗಡಿಗಳು

ಕುಂಟಿಕಾನ್, ಕೊಟ್ಟಾರ ಚೌಕಿ, ಕೂಳೂರು ಫ್ಲೈ ಓವರ್ ಕೆಳಗಿದ್ದ ಅಂಗಡಿಗಳನ್ನು ಬುಧವಾರ ನಡೆಸಿದ ಕಾರ್ಯಚರಣೆಯ ವೇಳೆ ತೆರವುಗೊಳಿಸಲಾಗಿದೆ.

ವಾಹನ ಸಂಚಾರಕ್ಕೆ ತೊಂದರೆ

ವಾಹನ ಸಂಚಾರಕ್ಕೆ ತೊಂದರೆ

ಫ್ಲೈಓವರ್ ಕೆಳಗಿನ ಅಂಡಿಗಳಲ್ಲಿ ವ್ಯಾಪಾರ ಮಾಡಲು ಜನರು ವಾಹನಗಳನ್ನು ನಿಲ್ಲಿಸುತ್ತಿದ್ದರು. ಇದರಿಂದ ಅಕ್ಕ-ಪಕ್ಕದ ರಸ್ತೆಗಳಿಗೆ ತೊಂದರೆ ಉಂಟಾಗುತ್ತಿತ್ತು ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ದರಿಂದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಸ್ವಯಂ ಪ್ರೇರಿತರಾಗಿ ತೆರವು

ಸ್ವಯಂ ಪ್ರೇರಿತರಾಗಿ ತೆರವು

ಕೆಲವು ಅಂಗಡಿಗಳ ಮಾಲೀಕರು ಕಾರ್ಯಾಚರಣೆ ನಡೆಸುವ ಅಧಿಕಾರಿಗಳು ಸ್ಥಳಕ್ಕೆ ಬಂದ ತಕ್ಷಣ ಸ್ವಯಂ ಪ್ರೇರಿತವಾದಿ ಅಂಗಡಿಗಳನ್ನು ತೆರವುಗೊಳಿಸಿದರು.

English summary
Team led by Praveen Chandra Karkera, The Mangalore City Corporation (MCC) assistant revenue officer razed down all the petty shops located under Kuntikan, Kottara Chowki and Kulur flyovers in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X