ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ವೈದ್ಯೆ ಸಾವಿನ ಹಿಂದೆ ಅನುಮಾನದ ಹುತ್ತ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 16; ಆಕೆ ಚಂಚಲ ಮನಸ್ಸಿನ ಯುವತಿ. ವೈದ್ಯಕೀಯ ಕೋರ್ಸ್ ಮಾಡಿದರೂ ಡಾಕ್ಟರ್ ಆಗಲಿಲ್ಲ. ಮಿಸ್ ಮಂಗಳೂರು ಸ್ಪರ್ಧೆಯ ಫೈನಲಿಸ್ಟ್ ಆದರೂ ಮಾಡೆಲ್ ಆಗಲಿಲ್ಲ. ಅದನ್ನು ಬಿಟ್ಟು, ಇದನ್ನು ಬಿಟ್ಟು, ಕೃಷಿ ಬಗ್ಗೆ ಒಲವು ಹಚ್ಚಿಕೊಂಡ ಆ ಯುವತಿ ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್‌ಗೆ ಹೋದವಳು ಈಗ ಹೆಣವಾಗಿದ್ದಾಳೆ. ಅಂದದ ಚಂದದ ಚಂಚಲ ಮನಸ್ಸಿನ ಯುವತಿ ಶವವಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈಕೆಯ ಹೆಸರು ಮೈಜಿ ಕರೋಲ್ ಫೆರ್ನಾಂಡೀಸ್ ಅಲಿಯಾಸ್ ಡಾ. ಮೈಜಿ ಕರೋಲ್ ಫರ್ನಾಂಡೀಸ್. ವಯಸ್ಸು 31 ವರ್ಷ. ಮಂಗಳೂರಿನ ದೇರಬೈಲ್‌ನ ಪ್ರಶಾಂತನಗರದ ನಿವಾಸಿಯಾಗಿರುವ ಮೈಜಿ, ಶಿಕ್ಷಣದಲ್ಲಿ ವೈದ್ಯಕೀಯ ಕೋರ್ಸ್ ಮುಗಿಸಿ ಹೆಸರಿನ ಮುಂದೆ ಡಾಕ್ಟರ್ ಎಂಬ ಅಚ್ಚೊತ್ತಿದವಳು.

 ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್‌ ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್‌

ಆದರೆ ಡಾಕ್ಟರ್ ಆಗಿ ಮೈಜಿ ಅಷ್ಟಾಗಿ ವೈದ್ಯ ವೃತ್ತಿ ಮಾಡುತ್ತಿರಲಿಲ್ಲ. ಸೌಂದರ್ಯದ ಗಣಿಯಾಗಿದ್ದ ಮೈಜಿಯ ಮನಸ್ಸು ವೈದ್ಯಕೀಯ ವೃತ್ತಿಯಿಂದ ಮಾಡೆಲಿಂಗ್ ಕ್ಷೇತ್ರದತ್ತ ಹೊರಳಿದ ಕಾರಣ ಹಲವು ಮಾಡೆಲಿಂಗ್ ಷೋಗಳಿಗೆ ಹೋಗುತ್ತಿದ್ದಳು. ಮಂಗಳೂರಿನ ಖಾಸಗಿ ಚಾನೆಲ್ ನಡೆಸಿದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿ ಮೈಜಿ ಫೈನಲಿಸ್ಟ್ ಕೂಡಾ ಆಗಿದ್ದರು. ಆದರೆ ಮಾಡೆಲಿಂಗ್ ಕ್ಷೇತ್ರದಿಂದಲೂ ಹೊರಳಿದ ಮೈಜಿ ಮನಸ್ಸು,ಕೃಷಿಯತ್ತ ವಾಲಿದೆ.

ಪೊಲೀಸರ ಅಣುಕು ಕಾರ್ಯಾಚರಣೆ ಮಂಗಳೂರು ಜನ ಸುಸ್ತೋ ಸುಸ್ತು! ಪೊಲೀಸರ ಅಣುಕು ಕಾರ್ಯಾಚರಣೆ ಮಂಗಳೂರು ಜನ ಸುಸ್ತೋ ಸುಸ್ತು!

MBBS Graduate Death In Mangaluru Raised Questions

ಹೀಗಾಗಿ ಗೂಗಲ್‌ನಲ್ಲಿ ಹಲವು ಕೃಷಿ ಅಧ್ಯಯನಗಳ ಬಗ್ಗೆ ಸರ್ಚ್ ಮಾಡುತ್ತಿದ್ದ ಮೈಜಿ, ಮೊದಮೊದಲು ಮಂಗಳೂರಿನಿಂದ ಕೇರಳ ಮತ್ತು ಕರ್ನಾಟಕ ಗಡಿಭಾಗದಲ್ಲಿರುವ ಒಂದು ಫಾರ್ಮ್ ಹೌಸ್‌ಗೆ ಅಗ್ರಿಕಲ್ಚರ್ ರಿಸರ್ಚ್‌ಗೆ ಆಗಾಗ್ಗೆ ಹೋಗುತ್ತಿದ್ದಳು.

ಮಂಗಳೂರು; ರಿವೇಂಜ್ ಲವ್ ಸ್ಟೋರಿ ತಾರ್ಕಿಕ ಅಂತ್ಯಮಂಗಳೂರು; ರಿವೇಂಜ್ ಲವ್ ಸ್ಟೋರಿ ತಾರ್ಕಿಕ ಅಂತ್ಯ

ಆನಂತರ ದಿನಗಳಲ್ಲಿ ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಕೋಚ್ ಪಾರ್ಥ ವಾರಣಾಸಿಯವರ ನೇತೃತ್ವದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ವಾರಣಾಸಿ ಫಾರ್ಮ್‌ಗೆ ಮೈಜೀ ಹೋಗುತ್ತಿದ್ದಳು. ವಾರಣಾಸಿಯ ಪೃಕೃತಿ, ಜಲಕ್ರೀಡೆ, ಸಾಹಸಿ ಕ್ರೀಡೆಗಳ ಬಗ್ಗೆ ಮನಸೋತ ಮೈಜೀ ಕಳೆದ ಮೂರು ದಿನಗಳ ಹಿಂದೆ ಹೋಗಿದ್ದಾಳೆ.

ಒಬ್ಬಳೇ ಫಾರ್ಮ್ ಹೌಸ್‌ಗೆ ಹೋಗಿದ್ದು ಮಂಗಳವಾರ ಸಂಜೆ 5.45ರ ಹೊತ್ತಿಗೆ ವಾರಣಾಸಿಯ ಸೌಂದರ್ಯವನ್ನು ಸವಿಯುತ್ತಾ ವಾಯುವಿಹಾರಕ್ಕೆ ತೆರಳಿದ್ದಾಳೆ. ಫಾರ್ಮ್ ಹೌಸ್‌ನಲ್ಲಿ ಮಾಡಿರುವ ಕೃತಕ ಕೆರೆಯಲ್ಲಿ ಈಜಾಡುವ ಮನಸ್ಸಾಗಿ ಸ್ವಿಮ್ ಸೂಟ್‌ನಲ್ಲಿ ನೀರಿಗಿಳಿದಿದ್ದಾಳೆ. ಹೀಗೆ ನೀರಿಗಿಳಿದ ಮೈಜೀ ಮತ್ತೆ ಮೇಲೆ ಬಂದಿದ್ದು ಹೆಣವಾಗಿಯೇ.

Mangaluru

ಈ ಬಗ್ಗೆ ಮೈಜೀ ಸಹೋದರಿ ಟ್ರೆಸ್ಟ್ ಡಯಾನಾ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಜೀ ಯಾರೂ ಇಲ್ಲದ ಸಂಧರ್ಭದಲ್ಲಿ ಕೆರಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಆಕಸ್ಮಿಕ ವಾಗಿ ನೀರಲ್ಲಿ ಮುಳುಗಿ ಉಸಿರುಕಟ್ಟಿರುತ್ತಾಳೆ. ಬಳಿಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಮೃತಪಟ್ಟಿರೋದಾಗಿ ಹೇಳಿದ್ದಾರೆ. ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದೇ ಹೊರತು ಯಾವುದೇ ಅನುಮಾನವಿಲ್ಲ ಅಂತಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಇನ್ನು ಈ ಪ್ರಕರಣ ನಡೆದಿದ್ದು ವಾರಣಾಸಿ ಫಾರ್ಮ್ ಹೌಸ್‌ನಲ್ಲಿ. ಅಂತರಾಷ್ಟ್ರೀಯ ಈಜು ಪಟು, ಈಜು ಕೋಚ್ ಪಾರ್ಥ ಎಂಬುವವರು ಇಲ್ಲಿ ಈಜು ತರಬೇತಿ ಮತ್ತು ಜಲ ವಿದ್ಯೆಗಳನ್ನು ಕಲಿಸಿಕೊಡುತ್ತಾರೆ. ಇನ್ನು ಇಲ್ಲಿ ಕೃಷಿಯ ಬಗ್ಗೆ ಅಧ್ಯಯನ ಕೂಡ ನಡೆಯುತ್ತದೆ. ಇಲ್ಲಿಗೆ ದೇಶ-ವಿದೇಶದಿಂದ ಬಂದ ಜನರು ಅಧ್ಯಯನಕ್ಕಾಗಿ ತಿಂಗಳಾನುಗಟ್ಟಲೆ ವಾಸ್ತವ್ಯ ಹೂಡುತ್ತಾರೆ.

ಇನ್ನು ಮಾಡೆಲ್ ಸಾವಿನ ಬಳಿಕ ಹಲವು ಚರ್ಚೆಗಳು ಆರಂಭವಾಗಿದೆ. ಇನ್ನು ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಮೈಜೀ ನೀರಿನಿಂದ ಎತ್ತುವಾಗಲೇ ಸಾವನ್ನಪ್ಪಿದ್ದಳು ಎನ್ನಲಾಗಿದೆ. ಆದರೆ ವಿಟ್ಲದಿಂದ ಮಂಗಳೂರು ಆಸ್ಪತ್ರೆಗೆ ಕರೆತರುವ ಅವಶ್ಯಕತೆ ಏನಿತ್ತು? ಎಂಬುವುದರ ಬಗ್ಗೆಯೂ ಚರ್ಚೆಯಾಗುತ್ತಿದೆ.

ಇದೆಲ್ಲದರ ನಡುವೆ ದೂರಿನಲ್ಲಿ ಮನೆಯವರು ಏಕಾಏಕಿ ಯಾವುದೇ ಸಂಶಯವಿಲ್ಲ. ಇದು ಆಕಸ್ಮಿಕ ಸಾವು ಅಂತಾ ಹೇಳಿರೋದು ಇನ್ನು ಹೆಚ್ಚಿನ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಈ ಪ್ರಕರಣವನ್ನು ಬೆನ್ನತ್ತಿದರೆ ಕೇಳಿ ಬರುತ್ತಿರೋ ಮಾತುಗಳು ನಿಜನಾ? ಸುಳ್ಳಾ ಅನ್ನೋದು ಗೊತ್ತಾಗಲಿದೆ.

Recommended Video

ನಾಯಕತ್ವದಿಂದ ವಿರಾಟ್ ಗೆ ಬ್ಯಾಟಿಂಗ್ ವೈಫಲ್ಯ? ಕಪಿಲ್ ದೇವ್ ಹೇಳಿದ್ದೇನು? | Oneindia Kannada

English summary
31-year-old MBBS graduate Maizy Fernandes found dead in Mangaluru. Body found in lake at agriculture farm, Death raised questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X