• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳಾದೇವಿ ದೇವಾಲಯದಲ್ಲಿ ಅದ್ಧೂರಿ ವಿವಾಹ; ಪ್ರಕರಣ ದಾಖಲು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 20; ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮಂಗಳೂರಿನ ಮಂಗಳಾದೇವಿ ದೇವಾಲಯದ ಸಭಾಂಗಣದಲ್ಲಿ ಅದ್ಧೂರಿ ವಿವಾಹ ನಡೆದಿದೆ. ಸರಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮದುವೆ ನಡೆಸಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಆಯೋಜಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶಕ್ಕೆ ಕಿಂಚಿತ್ತು ಬೆಲೆ ನೀಡದೆ ಮದುವೆ ಸಮಾರಂಭ ಆಯೋಜನೆ ಮಾಡಲಾಗಿತ್ತು. ದೇವಾಲಯದ ಹೊರಗೆ 40ಕ್ಕೂ ಹೆಚ್ಚು ಕಾರುಗಳು ಇದ್ದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು.

ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!

ಸ್ಥಳೀಯ ಬಿಜೆಪಿ ನಾಯಕ ಎಕ್ಕೂರು ಭಾಸ್ಕರ ಚಂದ್ರಶೆಟ್ಟಿ ಪುತ್ರಿ ಮದುವೆಯ ಜೊತೆಗೆ 5 ಜೋಡಿಗಳ ಮದುವೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೇವಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರೇಮಿಗಳ ದಿನದಂದು ಹೊಸ ಬದುಕಿಗೆ ಕಾಲಿಟ್ಟ 15 ಶರಣಾಗತ ನಕ್ಸಲರು: ಸಾಮೂಹಿಕ ವಿವಾಹಪ್ರೇಮಿಗಳ ದಿನದಂದು ಹೊಸ ಬದುಕಿಗೆ ಕಾಲಿಟ್ಟ 15 ಶರಣಾಗತ ನಕ್ಸಲರು: ಸಾಮೂಹಿಕ ವಿವಾಹ

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮದುವೆ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಮಾತ್ರ ಮದುವೆ ನಡೆಸಲು ಅವಕಾಶ ಇದೆ. ಆದ್ದರಿಂದ ದೇವಾಲಯದಲ್ಲಿ ಮದುವೆ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ! ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ!

ಮದುವೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಕ್ರಮಕ್ಕೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಸೂಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಹತೋಟಿಗೆ ತರಲು ಶ್ರಮಪಡುತ್ತಿದ್ದದೆ. ವಿದ್ಯಾವಂತರೇ ಈ ರೀತಿ ನಿಯಮ ಮೀರಿ ನಡೆದುಕೊಳ್ಳುವುದರ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಮತಿ ಕೊಟ್ಟವರು ಯಾರು?: ದೇವಾಲಯದಲ್ಲಿ ನಡೆಯಬೇಕಿದ್ದ ಮದುವೆಯನ್ನು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ನಿಲ್ಲಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದೇ ಮುಹೂರ್ತದಲ್ಲಿ ಮದುವೆ ಅಂತಾ ಸಮಜಾಯಿಷಿ ನೀಡಿದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಧ ಗಂಟೆಯಲ್ಲಿ 4 ಮದುವೆಯನ್ನು ಹೇಗೆ ಮಾಡುತ್ತಿರಾ?, ಅಧಿಕಾರಿಗಳ ಕಿವಿ ಮೇಲೆ ಹೂ ಇಡಲು ಬರಬೇಡಿ. ಈ ಮದುವೆಗೆ ನಿಮಗೆ ಅನುಮತಿ ಕೊಟ್ಟವರು ಯಾರು? ಎಂದು ಮದನ್ ಮೋಹನ್ ಪ್ರಶ್ನಿಸಿದದ್ದಾರೆ.

ಮದುವೆಗೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿ, ಅನುಮತಿ ಇರುವ ಕಾರುಗಳನ್ನು ಬಿಟ್ಟು ಉಳಿದ ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದು, ಆಡಳಿತ ಮಂಡಳಿ ಮತ್ತು ಆಯೋಜಕ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

English summary
Case field against marriage organizer in Mangaluru Mangaladevi temple. Marriage organized by violated Covid rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X