• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕದ್ರಿಯಲ್ಲಿ ಮೇ 19 -25 ರವರೆಗೆ ಮಾವು ಮತ್ತು ಹಲಸು ಮೇಳ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಮೇ 10: ದಕ್ಷಿಣ ಕನ್ನಡ ಜಿಲ್ಲೆ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಮೇ 19 ರಿಂದ 25ರ ವರೆಗೆ ಮಾವು ಹಾಗೂ ಹಲಸು ಮೇಳ ಆಯೋಜಿಸಲಾಗಿದೆ.

ವಿವಿಧ ತಳಿಗಳ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಜಿಲ್ಲೆಯ ಜನರಿಗೆ ಹಾಗೂ ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಒಳ್ಳೆಯ ಗುಣಮಟ್ಟದ ಮಾವು ಹಾಗೂ ಹಲಸಿನ ಹಣ್ಣಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ಮೇಳ ಆಯೋಜಿಸಲಾಗಿದೆ.[ಆಹಾ ಎಂಥಾ ಮಾವು, ಹಲಸು...ಬನ್ರೀ ಲಾಲ್ ಬಾಗ್ ಗೆ, ತಿನ್ರೀ ಮನಸಾರೆ]

ಈ ಮೇಳದಲ್ಲಿ ವಿವಿಧ ತಳಿಗಳ ಮಾವು ಹಾಗೂ ಹಲಸು ಹಣ್ಣುಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾವು ಹಾಗೂ ಹಲಸಿನ ಬೆಳೆಗಾರರು ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣು, ಹಲಸಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಬಹುದು.

ಸ್ಥಳೀಯ ರೈತರಿಗೆ ಮೊದಲ ಆದ್ಯತೆ

ಸ್ಥಳೀಯ ರೈತರಿಗೆ ಮೊದಲ ಆದ್ಯತೆ

ಸ್ಥಳೀಯ ರೈತರು ತಾವು ಬೆಳೆದಿರುವ ಸ್ಥಳೀಯ ಹಾಗೂ ಸುಧಾರಿತ ಮಾವು ಹಾಗೂ ಹಲಸು ತಳಿಗಳ ಹಣ್ಣುಗಳನ್ನು ಪ್ರದರ್ಶನ ಮಾಡಲು ಹಾಗೂ ಮಾರಾಟ ಮಾಡಲು ಮೇಳದಲ್ಲಿ ಪ್ರಥಮ ಆದ್ಯತೆ ನೀಡಲಾಗಿದೆ. ಆಸಕ್ತ ರೈತರು ಇಲಾಖೆಯನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.

ಸಂಸ್ಕರಣ ಉತ್ಪನ್ನಗಳಿಗೂ ಅವಕಾಶ

ಸಂಸ್ಕರಣ ಉತ್ಪನ್ನಗಳಿಗೂ ಅವಕಾಶ

ಮಾವು ಮತ್ತು ಹಲಸು ಸಂಸ್ಕರಣಾ ಉತ್ಪನ್ನಗಳನ್ನು ರೈತರು ಹಾಗೂ ಉತ್ಪಾದಕರು ಪ್ರದರ್ಶನ ಮಾಡಲು ಹಾಗೂ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು.[ಮಾವು ಬೆಳೆಗಾರರ ಪಾಲಿಗೆ ಕಹಿಯಾದ ಹಣ್ಣಿನ ರಾಜ!]

ಗಿಡಗಳ ಮಾರಾಟಕ್ಕೂ ಅವಕಾಶ

ಗಿಡಗಳ ಮಾರಾಟಕ್ಕೂ ಅವಕಾಶ

ಇನ್ನು ನಾನಾ ತಳಿಯ ಮಾವು, ಹಲಸು ಹಾಗೂ ಹಣ್ಣಿನ ಬೆಳೆಗಳ ಗಿಡಗಳನ್ನು ಮಾರಾಟ ಮಾಡಲು ನರ್ಸರಿದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಇತರೇ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಉತ್ಪನ್ನಗಳನ್ನು ಮಾರಾಟ ಮಾಡಲೂ ಅವಕಾಶ ಕಲ್ಪಿಸಲಾಗುವುದು.[ಕೊಪ್ಪಳದಲ್ಲಿ ಮೇ 9ರಿಂದ ಲಗ್ಗೆಯಿಡಲಿದ್ದಾನೆ ಹಣ್ಣುಗಳ ರಾಜ!]

ರೈತರು, ಮಾರಾಟಗಾರರು, ಸಂಸ್ಕರಣಾಗಾರರು, ನರ್ಸರಿದಾರರಿಗೆ

ಮುಕ್ತ ಅವಕಾಶ

ಮುಕ್ತ ಅವಕಾಶ

ಈ ರೀತಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಆಸಕ್ತ ರೈತರು, ಮಾರಾಟಗಾರರು, ಸಂಸ್ಕರಣಾಗಾರರು, ನರ್ಸರಿದಾರರು ಇದರ ಸದುಪಯೋಗ ಪಡೆದುಕೊಳ್ಳಲು ತೋಟಗಾರಿಕೆ ಇಲಾಖೆ ಮತ್ತು ಮತ್ತು ಮಾವು ಅಭಿವೃದ್ಧಿ ನಿಗಮ ಕೋರಿಕೊಂಡಿದೆ.[ಮುಂಗಾರು ಸಮಯದಲ್ಲಿ ತೋಟಗಾರಿಕೆ ಬೆಳೆಗಾರರೇ ಹೀಗೆ ಮಾಡಿ]

ಕರೆ ಮಾಡಿ-ನೊಂದಾಯಿಸಿ

ಕರೆ ಮಾಡಿ-ನೊಂದಾಯಿಸಿ

ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ- 0824-2412628, 0824-2423615, 9480354968 ಸಂಪರ್ಕಿಸಲು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

English summary
Mango and Jack Fruit mela to be organized at Kadri park from May 19th - 25th. The Mela is organized by Dakshina Kannada District Horticulture Department and Karnataka State Mango Development and Market Corporation ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X