ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವನ ಚಿತ್ರವಿರುವ ಡ್ರಗ್ಸ್ ಸ್ಟ್ಯಾಂಪ್ ಮಾರುತ್ತಿದ್ದ ಯುವಕನ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 12: ಮಂಗಳೂರು ನಗರ ಪೊಲೀಸರು ಡ್ರಗ್ಸ್ ವಿರುದ್ಧದ ಸಮರವನ್ನು ಮುಂದುವರಿಸಿದ್ದು, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ.

ನಿಷೇಧಿತ ಮಾದಕವಸ್ತು ಎಲ್ಎಸ್‌ಡಿ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಕ್ಯಾಲಿಕಟ್ ಮೂಲದ ಆರೋಪಿಯನ್ನು ಖೆಡ್ಡಾಕೆ ಬೀಳಿಸಿದ್ದಾರೆ. ಮೊಹಮ್ಮದ್ ಅಜಿನಾಸ್ ಬಂಧಿತ ಆರೋಪಿ ವಿದ್ಯಾರ್ಥಿಯಾಗಿದ್ದು, ಪಿ.ಜಿಯೊಂದರಲ್ಲಿ ವಾಸವಾಗಿದ್ದ.

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಪತ್ತೆಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಪತ್ತೆ

ಆರೋಪಿ ಮಂಗಳೂರು ನಗರದ ಕದ್ರಿ ಮೈದಾನದಲ್ಲಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 16 ಲಕ್ಷ 80 ಸಾವಿರ ರೂ. ಮೌಲ್ಯದ 15 ಗ್ರಾಂ, 15 ಮಿಲಿ ಗ್ರಾಂ ತೂಕದ 840 ಎಲ್ಎಸ್‌ಡಿ ಸ್ಟಾಂಪ್ ಡ್ರಗ್ಸ್‌ನ್ನು ರೆಡ್ ಹ್ಯಾಂಡ್ ಆಗಿ ವಶಪಡಿಸಿಕೊಂಡಿದ್ದಾರೆ.

Mangaluru: Youth Arrested For Selling Drugs Which Having Lord Shiva Stamp

ಆರೋಪಿ ಶಿವನ ಚಿತ್ರ ಇರುವ ಎಲ್ಎಸ್‌ಡಿ ಸ್ಟಾಂಪ್ ಡ್ರಗ್ ಇಟ್ಟುಕೊಂಡಿದ್ದ. ಈತನಿಗೆ ಮಂಗಳೂರು ಮಾತ್ರವಲ್ಲದೆ ಕಾಸರಗೋಡು, ಗೋವಾದಲ್ಲೂ ಜಾಲವಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮಂಗಳೂರು ನಗರದಲ್ಲಿ ಈತ ಐಷಾರಾಮಿ ವ್ಯಕ್ತಿಗಳಿಗೆ, ವಿದ್ಯಾರ್ಥಿಗಳಿಗೆ, ಹೈ ಎಂಡ್ ಪಾರ್ಟಿಗಳಿಗೆ ಈ ಡ್ರಗ್ಸ್‌ಗಳನ್ನು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.

ಸದ್ಯ ಎನ್‌ಡಿಪಿಎಸ್ ಕಾಯ್ದೆಯಡಿ ಕದ್ರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಈತನ ಡ್ರಗ್ಸ್ ಲಿಂಕ್ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ಭೇದಿಸಿರುವ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತನಿಖಾ ತಂಡಕ್ಕೆ ನಗರ ಆಯುಕ್ತ ಎನ್.ಶಶಿಕುಮಾರ್ ಅಭಿನಂದನೆ ಜೊತೆಗೆ 10 ಸಾವಿರ ರೂ. ನಗದು ಪುರಸ್ಕಾರ ನೀಡಿದ್ದಾರೆ.

Mangaluru: Youth Arrested For Selling Drugs Which Having Lord Shiva Stamp

ಕಳೆದ ಹತ್ತು ದಿನಗಳಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಎರಡು ಬೃಹತ್ ಡ್ರಗ್ ಜಾಲವನ್ನು ಪೊಲೀಸ್ ತಂಡ ಭೇದಿಸಿದೆ. ಎರಡು ಪ್ರಕರಣದಲ್ಲಿ ಒಟ್ಟು 27 ಲಕ್ಷದ 35 ಸಾವಿರ 500 ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಮಂಗಳೂರು ಪೊಲೀಸರ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ.

English summary
Mangaluru CCB police have arrested a man who was selling drugs to luxury people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X