ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾ ವಸ್ತುಗಳ ಬಹಿಷ್ಕಾರಕ್ಕೆ ವಿ.ಎಚ್.ಪಿ, ಭಜರಂಗದಳ ಕರೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 1: ಬಜರಂಗದಳ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ (ವಿ.ಎಚ್.ಪಿ), ಭಜರಂಗದಳದ ಕಾರ್ಯಕರ್ತರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಪ್ರತಿಭ‌ಟನೆ ನಡೆಸಿದರು.

ಬೆಂಗಳೂರು: ಸೆ.1ರಂದು ಬಜರಂಗದಳದಿಂದ ಚೀನಾ ವಸ್ತುಗಳ ದಹನಬೆಂಗಳೂರು: ಸೆ.1ರಂದು ಬಜರಂಗದಳದಿಂದ ಚೀನಾ ವಸ್ತುಗಳ ದಹನ

ಮಂಗಳೂರಿನ ಕದ್ರಿ ಮೈದಾನದಲ್ಲಿ ಸೇರಿದ ನೂರಾರು ವಿ.ಎಚ್.ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಚೀನಾ ನಿರ್ಮಿತ ಆಟಿಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಚೀನಾದಿಂದ ಆಮದಾದ ಇತರ ವಸ್ತುಗಳನ್ನು ದಹಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕಿರಿಕ್ ಚೀನಾಕ್ಕೆ ಹೊಡೆತ

ಕಿರಿಕ್ ಚೀನಾಕ್ಕೆ ಹೊಡೆತ

ಚೀನಾ ಹಾಗೂ ಭಾರತದ ಗಡಿ ಭಾಗವಾದ ಧೋಕ್ಲಾಮ್ ನಲ್ಲಿ ಸೇನಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿತ್ತು .ಚೀನಾ ಭಾರತದ ಸೇನೆಗೆ ನಿರಂತರ ಉಪಟಳವನ್ನು ಕೊಡುತ್ತಿದ್ದು, ಗಡಿಯಲ್ಲಿ ಬಿಗುವಿನ ವಾತಾವರಣವನ್ನೂ ನಿರ್ಮಿಸಿದೆ. ಅಲ್ಲದೆ ಅರುಣಾಚಲಪ್ರದೇಶವನ್ನೂ ಚೀನಾ ತನ್ನದೆಂದು ಖ್ಯಾತೆ ತೆಗೆಯುತ್ತಲೆ ಬಂದಿದೆ.

ಚೀನಾ ನಿರ್ಮಿತ ವಸ್ತುಗಳ ಬಹಿಷ್ಕಾರಿಸಿ

ಚೀನಾ ನಿರ್ಮಿತ ವಸ್ತುಗಳ ಬಹಿಷ್ಕಾರಿಸಿ

ಚೀನಾದ ಇಂಥಹ ಆಕ್ರಮಣಶೀಲತೆಗೆ ಹೊಡೆತ ನೀಡಲು ಚೀನಾ ನಿರ್ಮಿತ ವಸ್ತುಗಳ ಬಹಿಷ್ಕಾರದಿಂದಲೇ ಸಾಧ್ಯ ಎನ್ನುವ ಮಾತು ಆಂದೋಲನದಲ್ಲಿ ಕೇಳಿಬಂತು.

ಚೀನಾ ಆರ್ಥಿಕತೆಗೆ ಭಾರತದ ಕೊಡುಗೆ

ಚೀನಾ ಆರ್ಥಿಕತೆಗೆ ಭಾರತದ ಕೊಡುಗೆ

ಚೀನಾದ ಆರ್ಥಿಕತೆಯು ಭಾರತೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಚೀನಾ ದೇಶದ ಆರ್ಥಿಕತೆಯ ಶೇಕಡಾ 17 ಭಾಗ ಭಾರತದ ಮಾರುಕಟ್ಟೆಯಿಂದಲೇ ಬರುತ್ತಿದೆ.

ಚೀನಾ ಆರ್ಥಿಕತೆ ಹೊಡೆತ ನೀಡಿ

ಚೀನಾ ಆರ್ಥಿಕತೆ ಹೊಡೆತ ನೀಡಿ

ಒಂದು ವೇಳೆ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿದ್ದೇ ಆದಲ್ಲಿ ಆ ದೇಶದ ಆರ್ಥಿಕ ಶಕ್ತಿಗೆ ಭಾರೀ ಹೊಡೆತ ಬೀಳಲಿದೆ ಎಂದು ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.

English summary
VHP demanded and urged for the ban of China goods including mobile phones here at Kadri grounds in Mangaluru on September 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X