• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ರಥೋತ್ಸವ: ಕಾಶೀ ಮಠಾಧೀಶರಿಗೆ ಭವ್ಯ ಸ್ವಾಗತ

|

ಮಂಗಳೂರು, ಫೆ 7: ಪ್ರಸಿದ್ಧ ಮಂಗಳೂರು ರಥೋತ್ಸವ ಪ್ರಯುಕ್ತ ವಿಳಂಬಿ ನಾಮ ಸಂವತ್ಸರದ ಶ್ರೀ ದೇವರ ರಥೋತ್ಸವ ನಗರದ ರಥಬೀದಿಯಲ್ಲಿ ನಡೆಯಲಿದೆ.

ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಗುರುವಾರದಂದು ತಮ್ಮ ಹುಬ್ಬಳ್ಳಿ ಮೊಕ್ಕಾಂ ನಿಂದ ಮಂಗಳೂರಿಗೆ ಆಗಮಿಸಿದರು. ಈ ಪ್ರಯುಕ್ತ ರಥಬೀದಿಯಲ್ಲಿರುವ ಸ್ವದೇಶೀ ಸ್ಟೋರ್ಸ್ ಬಳಿಯಿಂದ ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರ ಸಹಿತ ಪರಮ ಪೂಜ್ಯ ಗುರುವರ್ಯರನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ತಿರುಮಲಕ್ಕೆ ಆಗಮಿಸಿದ ಕಾಶೀ ಮಠಾಧೀಶರಿಗೆ ಟಿಟಿಡಿ ಭವ್ಯ ಸ್ವಾಗತ

ವಿವಿಧ ಬಿರುದು ಬಾವಳಿಗಳನ್ನೊಳಗೊಂಡ ವೇದ ಘೋಷ, ಪೂರ್ಣ ಕುಂಭ ಕಲಶ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ವಿಶೇಷವಾಗಿ ಅಲಂಕರಿಸಲಾದ ಅಡ್ಡ ಪಲ್ಲಕಿಯಲ್ಲಿ ಶ್ರೀಗಳವರು ವಿರಾಜಮಾನರಾಗಿದ್ದು ಭವ್ಯ ಸ್ವಾಗತ ನೀಡಲಾಯಿತು.

ಇದೇ ಬರುವ ರಥಸಪ್ತಮಿ ಮಂಗಳವಾರ (ಫೆ 12) ದಂದು ಮಂಗಳೂರು ರಥೋತ್ಸವ ಶ್ರೀಗಳವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿರುವುದು, ದಿನಾಂಕ 15-02-2019 ರ ಪರ್ಯಂತ ಶ್ರೀಗಳವರು ಶ್ರೀದೇವಳದ ಮೊಕ್ಕಾಂ ನಲ್ಲಿದ್ದು ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳವರ ಆಜ್ಞಾನುಸಾರ ನಡೆಯಲಿದೆ .

ಈ ರಥೋತ್ಸವ ಸಂದರ್ಭದಲ್ಲಿ ದೇವಳದಲ್ಲಿ ದಿನ ನಿತ್ಯ ವಿವಿಧ ಉತ್ಸವಗಳು , ಯಜ್ಞ -ಹವನಾದಿಗಳು ವೈದಿಕರಿಂದ ನಡೆಯಲಿರುವುದು, ದೇಶ ವಿದೇಶಗಳಿಂದ ಸಾವಿರಾರು ಜಿ . ಎಸ್ . ಬಿ ಸಮಾಜ ಭಾಂದವರು ಪಾಲ್ಗೊಳ್ಳಲಿರುವರು. (ಚಿತ್ರ: ಮಂಜು ನೀರೇಶ್ವಾಲ್ಯ)

ದಕ್ಷಿಣ ಕನ್ನಡ ರಣಕಣ
ಡೆಮೊಗ್ರಫಿಕ್ಸ್
ಜನಸಂಖ್ಯೆ
20,89,649
ಜನಸಂಖ್ಯೆ
 • ಗ್ರಾಮೀಣ
  52.33%
  ಗ್ರಾಮೀಣ
 • ನಗರ
  47.67%
  ನಗರ
 • ಎಸ್ ಸಿ
  7.09%
  ಎಸ್ ಸಿ
 • ಎಸ್ ಟಿ
  3.94%
  ಎಸ್ ಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru Venkataramana temple Rathosava on Ratha Sapthami Day of Feb 12. For this auspicious occation Samyamindra Thirtha Seer of Kashi Math, came to Mangaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more